Advertisement

Deepfake 3 ವರ್ಷ ಜೈಲು: ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಕೇಂದ್ರ ಎಚ್ಚರಿಕೆ

12:35 AM Nov 08, 2023 | Vishnudas Patil |

ಹೊಸದಿಲ್ಲಿ: ಡೀಪ್‌ಫೇಕ್‌ ತಂತ್ರಜ್ಞಾನದ ಮೂಲಕ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಅವರ ಫೋಟೋ ದುರ್ಬಳಕೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಕೇಂದ್ರ ಸರಕಾರ ಅದಕ್ಕೆ ಏನು ಶಿಕ್ಷೆ ಎನ್ನುವುದನ್ನು ಬಹಿರಂಗ ಪಡಿಸಿದೆ. 2000ನೇ ವರ್ಷದಲ್ಲೇ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಇಂತಹ ಪ್ರಕರಣಗಳಿಗೆ ಶಿಕ್ಷೆ ನಿರ್ಧರಿಸ ಲಾಗಿದೆ. ಇದನ್ನೀಗ ಸರಕಾರವು ಮತ್ತೂಮ್ಮೆ ನೆನಪಿಸುವ ಮೂಲಕ ಸಾಮಾಜಿಕ ಜಾಲತಾಣಗಳಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.

Advertisement

ಕಂಪ್ಯೂಟರ್‌ ಸಂಪನ್ಮೂಲ ಬಳಸಿಕೊಂಡು ಒಬ್ಬ ವ್ಯಕ್ತಿ ಯನ್ನು ಇನ್ನೊಬ್ಬ ವ್ಯಕ್ತಿಯೆಂಬಂತೆ ತೋರಿಸಿದರೆ, ಅದಕ್ಕೆ 3 ವರ್ಷ ಜೈಲುಶಿಕ್ಷೆ ಇರುತ್ತದೆ. 1 ಲಕ್ಷ ರೂ.ಗೂ ಅಧಿಕ ದಂಡ ವನ್ನೂ ಹಾಕಬಹುದು ಎಂದು ಕಾನೂನು ಹೇಳು ತ್ತದೆ. ಸದ್ಯದ ಪ್ರಶ್ನೆಯೆಂದರೆ, ರಶ್ಮಿಕಾರ ಫೋಟೋ ದುರ್ಬ ಳಕೆ ಮಾಡಿಕೊಂಡಿದ್ದು ಯಾರು ಎನ್ನುವುದು. ಬಹು ಶಃ ಸಂಬಂಧಪಟ್ಟ ವ್ಯಕ್ತಿ ಪತ್ತೆಯಾದರೆ ಆತನಿಗೆ ಶಿಕ್ಷೆ ಖಾತ್ರಿ.

ಇದೇ ವೇಳೆ ಘಟನೆಯೊಂದಿಗೆ ತಮ್ಮದೇ ಆದ ರೀತಿಯಲ್ಲಿ ಸಂಬಂಧ ಹೊಂದಿರುವ ಭಾರತ-ಬ್ರಿಟನ್‌ ಮಹಿಳೆ ಝರಾ ಪಟೇಲ್‌ ಆಘಾತ ವ್ಯಕ್ತಪಡಿಸಿದ್ದಾರೆ. ಈಕೆ ಲಿಫ್ಟ್ ಪ್ರವೇಶಿಸುತ್ತಿರುವ ವೀಡಿಯೋಕ್ಕೆ ರಶ್ಮಿಕಾ ಮುಖ ಜೋಡಿಸಲಾಗಿತ್ತು. “ಘಟನೆಯನ್ನು ಕೇಳಿ ತನಗೆ ಆಘಾತ ವಾಗಿದೆ, ಮಹಿಳೆಯರ ಸುರಕ್ಷೆ ಬಗ್ಗೆ ಆತಂಕ ವಾಗಿದೆ. ಸಾಮಾಜಿಕ ತಾಣದಲ್ಲಿ ತಮ್ಮ ಬಗ್ಗೆ ಏನನ್ನೇ ಆದರೂ ಹಾಕುವುದು ಅಪಾಯಕಾರಿ. ದಯ ವಿಟ್ಟು ಅಂತರ್ಜಾಲ ದಲ್ಲಿ ಏನೇ ಬಂದರೂ ಒಮ್ಮೆ ಸತ್ಯಾಸತ್ಯತೆ ಪರಿಶೀಲನೆ ಮಾಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ. ಈ ನಡುವೆ, ರಶ್ಮಿಕಾ ಫೋಟೋ ದುರ್ಬಳಕೆಯನ್ನು ತಾರೆ ಯ  ರಾದ ನಾಗ ಚೈತನ್ಯ, ಮೃಣಾಲ್‌ ಠಾಕೂರ್‌, ಗಾಯಕಿ ಚಿನ್ಮಯಿ ಶ್ರೀಪಾದ ಸೇರಿ ಅನೇಕರು ಖಂಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next