Advertisement

ಅತಿಥಿ ಉಪನ್ಯಾಸಕರ ನೆರವಿಗೆ ಸಿಎಂ: ಆಯನೂರು ಅಭಿನಂದನೆ

07:20 PM Sep 30, 2020 | Suhan S |

ಶಿವಮೊಗ್ಗ: ಸರ್ಕಾರಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರ ಬಾಕಿ ಇರುವ ವೇತನ ಪಾವತಿ ಮಾಡಲು ಆದೇಶಿಸಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ತಮ್ಮ ಹೋರಾಟಕ್ಕೆ ಬೆಂಬಲಿಸಿದ ಸದಸ್ಯರಿಗೆ ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಧನ್ಯವಾದ ಸಲ್ಲಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಅವರು, ಅತಿಥಿ ಉಪನ್ಯಾಸಕರಿಗೆ ಮಾರ್ಚ್‌ನಿಂದ ಆಗಸ್ಟ್‌ ತಿಂಗಳವರೆಗೆ ವೇತನ ಪಾವತಿಸದೆ ಉಚಿತವಾಗಿ ದುಡಿಸಿಕೊಳ್ಳುತ್ತಿದ್ದರಿಂದ ಆರ್ಥಿಕವಾಗಿ ದುರ್ಬಲರಾಗಿ ಅತಿಥಿ ಉಪನ್ಯಾಸಕರುಜೀವನ ನಿರ್ವಹಿಸಲು ಕಷ್ಟವಾಗಿ ಸಂಕಷ್ಟಕ್ಕೆ ಸಿಲುಕಿದ್ದರು. ಅತಿಥಿ ಉಪನ್ಯಾಸಕರು ಹೋರಾಟ ಮಾಡುತ್ತಿದ್ದು ಈ ಕಾರಣಕ್ಕಾಗಿ ವಿಧಾನಪರಿಷತ್‌ನಲ್ಲಿ ಶೂನ್ಯ ವೇಳೆಯಲ್ಲಿ ತಾವು ಪ್ರಸ್ತಾಪ ಮಾಡಿದ್ದು, ಉನ್ನತ ಶಿಕ್ಷಣ ಸಚಿವರು ಗೈರು ಹಾಜರಾಗಿದ್ದರಿಂದ ಸದನದಲ್ಲಿ ವೇತನ ಬಿಡುಗಡೆಗೆ ಒತ್ತಾಯಿಸಿ ಹೋರಾಟ ಮಾಡಿದ್ದರಿಂದ ಸದನಕ್ಕೆ ಆಗಮಿಸಿದ ಮುಖ್ಯಮಂತ್ರಿಗಳು ವೇತನ ಬಿಡುಗಡೆಗೆ ಆದೇಶಿಸಿದರು ಎಂದರು.

ವೇತನ ಬಿಡುಗಡೆ ಮಾಡುವಂತೆ ವಿಧಾನ ಪರಿಷತ್‌ನ ಮೂವರು ಸದಸ್ಯರು ಪ್ರಸ್ತಾವನೆ ಸಲ್ಲಿಸಿದ್ದು, ಯಾವುದೇ ವೇತನ ಬಾಕಿ ಇಲ್ಲ ಎಂದು ಲಿಖೀತ ರೂಪದಲ್ಲಿ ಉತ್ತರಿಸಿದ್ದರಿಂದ ಕಠಿಣ ನಿಲುವು ತೆಗೆದುಕೊಂಡು ವೇತನ ಬಿಡುಗಡೆಗೆ ತಾವು ಒತ್ತಾಯಿಸಿದಾಗ ಮುಖ್ಯಮಂತ್ರಿಗಳು ನನ್ನ ಹೋರಾಟವನ್ನು ಗೌರವಿಸಿ ಸದನಕ್ಕೆ ಬಂದು ವೇತನ ಬಿಡುಗಡೆಗೆ ಆದೇಶಿಸಿರುವುದು ಖುಷಿ ತಂದಿದೆ. ಮೂರು ತಿಂಗಳ ವೇತನ ಒಂದು ವಾರದಲ್ಲಿ ಬಿಡುಗಡೆಯಾಗುವ ಭರವಸೆ ಇದ್ದು, ಅತಿಥಿ ಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಳ್ಳದೇ ಧೈರ್ಯದಿಂದಿರಿ ಎಂದ ಅವರು, ನಿಮ್ಮ ಬೇಡಿಕೆಗಳನ್ನು ಹಂತ- ಹಂತವಾಗಿ ನ್ಯಾಯಯುತವಾಗಿ ಪಡೆದುಕೊಳ್ಳೋಣ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next