Advertisement

ರಾಜ್ಯದಲ್ಲಿ 2 ಪರಮಾಣು ವಿದ್ಯುತ್‌ ಕೇಂದ್ರ ಸ್ಥಾಪನೆ

06:15 PM Feb 08, 2018 | Sharanya Alva |

ನವದೆಹಲಿ: ಕರ್ನಾಟಕ ಸೇರಿದಂತೆ ಐದು ರಾಜ್ಯಗಳಲ್ಲಿ ಒಟ್ಟು 12 ಪರಮಾಣು ವಿದ್ಯುತ್‌ ಉತ್ಪಾದನಾ ಕೇಂದ್ರಗಳ ನಿರ್ಮಾಣಕ್ಕೆ ಒಪ್ಪಿಗೆ ನೀಡಿ, ಅಗತ್ಯ ಹಣವನ್ನೂ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.

Advertisement

ಕರ್ನಾಟಕ, ಮಧ್ಯಪ್ರದೇಶ, ಹರ್ಯಾಣಗಳಲ್ಲಿ ತಲಾ 2 ಹಾಗೂ ರಾಜಸ್ಥಾನದಲ್ಲಿ 4 ಪ್ರಶರೈಸ್ಡ್ ಹೆವಿ ವಾಟರ್‌ ರಿಯಾಕ್ಟರ್‌ಗಳು (700 ಮೆ.ವ್ಯಾ. ಸಾಮರ್ಥ್ಯ) ನಿರ್ಮಾಣವಾಗಲಿದ್ದು, ತಮಿಳುನಾಡಿನಲ್ಲಿ ಎರಡು ಲೈಟ್‌ ವಾಟರ್‌ ರಿಯಾಕ್ಟರ್‌ (1 ಸಾವಿರ ಮೆ.ವ್ಯಾ) ಮಾದರಿ ಕೇಂದ್ರಗಳು ತಲೆಯೆತ್ತಲಿವೆ ಎಂದು ಸರ್ಕಾರ ತಿಳಿಸಿದೆ.

ಪಿಎಂಆರ್‌ಎಫ್ಗೆ ಒಪ್ಪಿಗೆ: ಏತನ್ಮಧ್ಯೆ, ಬಜೆಟ್‌ನಲ್ಲಿ ಘೋಷಿಸಲಾಗಿದ್ದ ಪ್ರಧಾನ ಮಂತ್ರಿ ರಿಸರ್ಚ್‌ ಫೆಲೋಶಿಪ್‌ ಯೋಜನೆಗೆ ಕೇಂದ್ರ ಸಂಪುಟ ಬುಧವಾರ ಒಪ್ಪಿಗೆ ಸೂಚಿಸಿದೆ. 

ರಾಮಸೇತು ರಕ್ಷಣೆಗೆ ಒತ್ತು: ಸೇತುಸಮುದ್ರಂ ಯೋಜನೆ ಬಗ್ಗೆ ಚರ್ಚಿಸಿದ ಕೇಂದ್ರ ಸಂಪುಟದ ರಾಜಕೀಯ ವ್ಯವಹಾರಗಳ ಸಮಿತಿ, ಪುರಾತನ ರಾಮಸೇತುವಿಗೆ ಧಕ್ಕೆಯಾಗದಂತೆ ಸೇತು ಸಮುದ್ರಂ ಶಿಪ್ಪಿಂಗ್‌ ಕೆನಾಲ್‌ ಯೋಜನೆ ಮುಂದುವರಿಸಲು ನಿರ್ಧರಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next