Advertisement

NCRT ಪಠ್ಯದಿಂದ ಬಾಬರಿ ಮಸೀದಿ ಹೆಸರು ಕೈಬಿಟ್ಟ ಸರಕಾರ

12:46 AM Jun 17, 2024 | Team Udayavani |

ಹೊಸದಿಲ್ಲಿ: ಪಠ್ಯದಲ್ಲಿ ಗುಜರಾತ್‌ ಗಲಭೆ ಹಾಗೂ ಬಾಬರಿ ಮಸೀದಿ ಧ್ವಂಸದ ಪಾಠಗಳನ್ನು ಪರಿಷ್ಕರಿಸಲಾಗಿದೆ. ಇವುಗಳನ್ನು ಕಲಿಸುವುದರಿಂದ ದ್ವೇಷ, ಹಿಂಸಾ ಭಾವನೆಯ ನಾಗರಿಕರು ಸೃಷ್ಟಿಯಾಗುತ್ತಾರೆ ಎಂದು ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶ್‌ ಪ್ರಸಾದ್‌ ಸಕ್ಲಾನಿ ಹೇಳಿದ್ದಾರೆ.

Advertisement

ಪಠ್ಯ ಪರಿಷ್ಕರಣೆ ವಾರ್ಷಿಕ ಕಾರ್ಯವಾಗಿದ್ದು, ಇದಕ್ಕೆ ರಾಜಕೀಯ ಲೇಪನ ಮಾಡಬಾರದು. 12ನೇ ತರಗತಿಯ ರಾಜ್ಯನೀತಿ ಶಾಸ್ತ್ರ ಪಠ್ಯದಲ್ಲಿ ಬಾಬರಿ ಮಸೀದಿಯನ್ನು “3 ಗುಮ್ಮಟದ ಕಟ್ಟಡ’ ಎಂದು ಹೆಸರಿಸಲಾಗಿದೆ. ಜತೆಗೆ ಬಿಜೆಪಿ ನಾಯಕ ಎಲ್‌.ಕೆ.ಆಡ್ವಾಣಿ ಕೈಗೊಂಡಿದ್ದ ರಥಯಾತ್ರೆ, 1992ರಲ್ಲಿ ಅಯೋಧ್ಯೆಯಲ್ಲಿ ನಡೆದಿದ್ದ ಕರಸೇವೆ ಮಾಹಿತಿಗಳನ್ನು ತೆಗೆಯಲಾಗಿದೆ. ಹೀಗಾಗಿ ಅಯೋಧ್ಯೆಗೆ ಸಂಬಂಧಿಸಿದ ಒಟ್ಟು 4 ಪುಟಗಳಿದ್ದ ಮಾಹಿತಿಯನ್ನು 2 ಪುಟಕ್ಕೆ ಇಳಿಸಲಾಗಿದೆ. ಪರಿಷ್ಕೃತ ಪಠ್ಯದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪಿನಿಂದ ರಾಮಮಂದಿರ ನಿರ್ಮಾಣವಾದ ಬಗ್ಗೆ ಮಾಹಿತಿ ಸೇರಿಸಲಾಗಿದೆ ಎಂದಿದ್ದಾರೆ. ಪಠ್ಯದಲ್ಲಿ ಗುಜರಾತ್‌ ಗಲಭೆ, ಬಾಬರಿ ಮಸೀದಿ ಧ್ವಂಸದ ವಿಷಯಗಳನ್ನು ವಿದ್ಯಾರ್ಥಿಗಳು ಏಕೆ ಕಲಿಯಬೇಕು. ಇದರಿಂದ ಮಕ್ಕಳಲ್ಲಿ ದ್ವೇಷ ಭಾವನೆ ಹುಟ್ಟಿಸಿದಂತಾಗುತ್ತದೆ ಎಂದು ಸಕ್ಲಾನಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next