Advertisement

ಫೆಬ್ರವರಿ ಜಿಎಸ್‌ಟಿ ಸಂಗ್ರಹ 1.33 ಲಕ್ಷ ಕೋ.ರೂ.

09:27 PM Mar 01, 2022 | Team Udayavani |

ಹೊಸದಿಲ್ಲಿ: ಕೊರೊನಾದ ಹೊಡೆತದ ನಡುವೆಯೂ ದೇಶದ ಜಿಎಸ್‌ಟಿ ಸಂಗ್ರಹದಲ್ಲಿ ಗಮನಾರ್ಹ ಸಾಧನೆ ಆಗಿದೆ.

Advertisement

ಫೆಬ್ರವರಿಯಲ್ಲಿ 1.33 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ. ಆದರೂ ಜನವರಿಗೆ ಹೋಲಿಸಿದರೆ ಇದು ಕೊಂಚ ಕಡಿಮೆ. ಜನವರಿಯಲ್ಲಿ 1.40 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು.

ಶೇಕಡವಾರು ಲೆಕ್ಕಾಚಾರದಲ್ಲಿ ಹೇಳುವುದಾದರೆ ಜಿಎಸ್‌ಟಿ ಸಂಗ್ರಹ ಶೇ. 18 ಏರಿಕೆಯಾಗಿದೆ. ಪ್ರಸಕ್ತ ವಿತ್ತೀಯ ವರ್ಷದಲ್ಲಿ ಸತತ ಐದನೇ ಬಾರಿಗೆ ಜಿಎಸ್‌ಟಿ ಸಂಗ್ರಹ 1.30 ಲಕ್ಷ ಕೋಟಿ ರೂ. ದಾಟಿದೆ.

ಇದನ್ನೂ ಓದಿ:ಸಾಲ ಕೊಡಿಸುವುದಾಗಿ ಹೇಳಿ ಮಹಿಳೆಯಿಂದ 35 ಸಾವಿರ ಹಣ ಪಡೆದು ವಂಚನೆ

ಸೆಸ್‌ ಸಂಗ್ರಹ ಇದೇ ಮೊದಲ ಬಾರಿಗೆ 10 ಸಾವಿರ ಕೋಟಿ ರೂ. ದಾಟಿದೆ. ಆಮದಿತ ಸರಕುಗಳಿಂದ ಶೇ. 38, ದೇಶಿಯ ವಹಿವಾಟುಗಳಿಂದ ಶೇ. 12ರಷ್ಟು ಆದಾಯ ಸಂಗ್ರಹವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next