Advertisement

ಕಬ್ಬು ಬೆಳೆಗಾರರಿಗೆ ಪ್ಯಾಕೇಜ್‌

06:00 AM Sep 27, 2018 | Team Udayavani |

ನವದೆಹಲಿ: ಉತ್ಪಾದನೆ ವಿಪರೀತ ಹೆಚ್ಚಾಗಿರುವುದರಿಂದಾಗಿ ಸಂಕಷ್ಟದಲ್ಲಿರುವ ಸಕ್ಕರೆ ಉದ್ಯಮಕ್ಕೆ ನೆರವಾಗಲು ಕೇಂದ್ರ ಸರ್ಕಾರ 5,500 ಕೋಟಿ ರೂ. ಪ್ಯಾಕೇಜ್‌ ಘೋಷಣೆ ಮಾಡಿದ್ದು, ಇದಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಪ್ಯಾಕೇಜ್‌ ಅಡಿಯಲ್ಲಿ ಪ್ರತಿ ಕ್ವಿಂಟಲ್‌ ಕಬ್ಬಿಗೆ 13.88 ರೂ. ಹಣಕಾಸು ನೆರವನ್ನು ಕೇಂದ್ರ ನೀಡಲಿದೆ. ಅಲ್ಲದೆ ಸಕ್ಕರೆ ರಫ್ತು ಮಾಡುವುದಕ್ಕಾಗಿ 50 ಲಕ್ಷ ಟನ್‌ಗಳವರೆಗಿನ ಸಾಗಣೆ ವೆಚ್ಚಕ್ಕೆ ಮಿಲ್‌ಗ‌ಳಿಗೆ ಕೇಂದ್ರ
ಹಣಕಾಸು ನೆರವು ನೀಡಲಿದೆ.

Advertisement

ಇದರಿಂದಾಗಿ 13 ಸಾವಿರ ಕೋಟಿ ರೂ. ಪಾವತಿ ಬಾಕಿ ಉಳಿಸಿಕೊಂಡಿರುವ ಸಕ್ಕರೆ ಮಿಲ್‌ಗ‌ಳು ರೈತರಿಗೆ ಬಾಕಿ ನೀಡಲು ಸಹಾಯವಾಗಲಿದೆ. ಇದೇ ರೀತಿ ಕಳೆದ ಜೂನ್‌ ನಲ್ಲಿ 8500 ಕೋಟಿ ರೂ. ಪ್ಯಾಕೇಜನ್ನು ಕೇಂದ್ರ ಘೋಷಿಸಿತ್ತು. 2017-18ರಲ್ಲಿ 3.2 ಕೋಟಿ ಟನ್‌ ಕಬ್ಬು ಉತ್ಪಾದನೆ  
ಯಾಗಿತ್ತು. ಕಬ್ಬು ಬೆಳೆ ಪ್ರದೇಶ ಹೆಚ್ಚಾಗಿರುವುದರಿಂದ ಮುಂದಿನ ಬಾರಿ ಕೂಡ ಇನ್ನಷ್ಟು ಪ್ರಮಾಣದಲ್ಲಿ ಕಬ್ಬು ಉತ್ಪಾದನೆ ಏರಿಕೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಈ ಪ್ಯಾಕೇಜ್‌ ಅತ್ಯಂತ ಮಹತ್ವದ್ದಾಗಿದೆ. 

ಏನಿದೆ ಪ್ಯಾಕೇಜ್‌ನಲ್ಲಿ?: ಈ ಪ್ಯಾಕೇಜ್‌ನಲ್ಲಿ ಎರಡು ವಿಧದಲ್ಲಿ ನೆರವು ನೀಡಲಾಗುತ್ತಿದೆ. ರಫ್ತು ಮಾಡಲು ಸಾರಿಗೆ ವೆಚ್ಚಕ್ಕಾಗಿ ಸಕ್ಕರೆ ಮಿಲ್‌ಗ‌ಳಿಗೆ ಸಹಾಯಧನ ನೀಡಲಾಗುತ್ತಿದ್ದು, ಇದರ ಅಡಿಯಲ್ಲಿ ಬಂದರುಗಳಿಂದ 100 ಕಿ.ಮೀ ವ್ಯಾಪ್ತಿಯಲ್ಲಿರುವ ಮಿಲ್‌ಗ‌ಳಿಗೆ ಪ್ರತಿ ಟನ್‌ಗೆ 1000 ರೂ. ಹಾಗೂ 100 ಕಿ.ಮೀಗಿಂತ ದೂರದಲ್ಲಿರುವ ಮತ್ತು ಕರಾವಳಿ ರಾಜ್ಯಗಳಿಗೆ 2500 ರೂ. ಹಾಗೂ ಕರಾವಳಿಯನ್ನು ಹೊಂದಿಲ್ಲದ ರಾಜ್ಯಗಳಿಗೆ 3000 ರೂ. ಅನ್ನು ಸಹಾಯಧನದ ರೂಪದಲ್ಲಿ ನೀಡಲಾಗುತ್ತದೆ. ಇದಕ್ಕಾಗಿ ಸರ್ಕಾರ 1375 ಕೋಟಿ ರೂ. ಮೀಸಲಿಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next