ನವದೆಹಲಿ: ಕೇಂದ್ರ ವಾರ್ತಾ ಸಚಿವಾಲಯವು ದೇಶದ ಎಫ್ಎಂ ರೇಡಿಯೊ ವಾಹಿನಿಗಳಿಗೆ ಕಠಿಣ ಎಚ್ಚರಿಕೆ ನೀಡಿದೆ. ಈ ವಾಹಿನಿಗಳು ಅಶ್ಲೀಲ, ಆಕ್ಷೇಪಾರ್ಹ ಭಾಷಾ ಬಳಕೆ, ವಿಷಯಗಳ ಪ್ರಸಾರ ಮಾಡಬಾರದು. ಒಂದು ವೇಳೆ ಮಾಡಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದೆ.
ಈ ರೀತಿಯ ವಿಷಯಗಳ ಪ್ರಸಾರವು, ವಾಹಿನಿಗೆ ಅನುಮತಿ ವೇಳೆ ನೀಡಿದ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಎಚ್ಚರಿಸಲಾಗಿದೆ.
ಕೆಲವು ಎಫ್ಎಂ ವಾಹಿನಿಗಳಲ್ಲಿ ಅಶ್ಲೀಲ, ಆಕ್ಷೇಪಾರ್ಹ ವಿಷಯಗಳು ಪ್ರಸಾರವಾಗುತ್ತಿವೆ. ಕೆಲವು ಜಾಕಿಗಳ ಭಾಷೆ ಅಶಿಸ್ತಿನಿಂದ, ದ್ವಂದ್ವಾರ್ಥದಿಂದ ಕೂಡಿರುತ್ತದೆ, ನಿಂದಿಸುವಂತಿರುತ್ತದೆ.
ಅವರು ಆಗಾಗ ಮಾನಹಾನಿಯಾಗುವಂತಹ, ಅವಮಾನಕಾರಿ ಮಾತುಗಳನ್ನು ಆಡುತ್ತಿರುತ್ತಾರೆ. ಅವನ್ನೆಲ್ಲ ಸದಭಿರುಚಿಯೆನ್ನಲಾಗುವುದಿಲ್ಲ ಎಂದು ಕೇಂದ್ರ ಹೇಳಿದೆ.
ಇದನ್ನೂ ಓದಿ:ಉಕ್ರೇನ್‌ನಲ್ಲಿ ರಾಜ್ಯದ ವಿದ್ಯಾರ್ಥಿ ಬಲಿ: ಕಾಂಗ್ರೆಸ್ ಆಕ್ರೋಶ
ಜಿಒಪಿಎಯ (ಒಪ್ಪಂದ ನಿಯಮ) 7.6 ವಿಧಿಯ ಪ್ರಕಾರ, ಎಫ್ಎಂ ವಾಹಿನಿಯಲ್ಲಿ ಪ್ರಸಾರವಾಗುವ ಯಾವುದೇ ವಸ್ತು, ವಿಷಯ, ಸಂದೇಶ, ಜಾಹೀರಾತುಗಳು ಆಕ್ಷೇಪಾರ್ಹ, ಅಶ್ಲೀಲ, ಅನಧಿಕೃತವಾಗಿರಬಾರದು. ಹಾಗೆಯೇ ಭಾರತದ ಕಾನೂನಿನ ಚೌಕಟ್ಟನ್ನೂ ದಾಟಿರಬಾರದು.