Advertisement

ಅಮೇಠಿಯಲ್ಲಿ ಎಕೆ-203 ರೈಫ‌ಲ್‌ ಉತ್ಪಾದನೆ

12:33 AM Dec 05, 2021 | Team Udayavani |

ಹೊಸದಿಲ್ಲಿ: ರಕ್ಷಣ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವತ್ತ ಪ್ರಮುಖ ಹೆಜ್ಜೆಯಾಗಿ ಉತ್ತರಪ್ರದೇಶದ ಅಮೇಠಿಯ ಕೊರ್ವಾದಲ್ಲಿ  5 ಲಕ್ಷ ಎಕೆ-203 ರೈಫ‌ಲ್‌ಗ‌ಳ ಉತ್ಪಾದನೆ ಯೋಜನೆಗೆ ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ. ಈ ಮೂಲಕ ಉತ್ತರಪ್ರದೇಶವು ದೇಶದ ರಕ್ಷಣ ಉತ್ಪಾದನ ಹಬ್‌ ಆಗಲಿದೆ.

Advertisement

ಹೇಗಿದೆ ರೈಫಲ್? :

  • lಎಕೆ-203 ರೈಫ‌ಲ್‌ನ
  • ಕ್ಯಾಲಿಬರ್‌- 7.62ಗಿ30 ಮಿ.ಮೀ.
  • ವ್ಯಾಪ್ತಿ – 300 ಮೀ.

ರಷ್ಯಾ ಸಹಭಾಗಿತ್ವ :

ರೈಫ‌ಲ್‌ ಉತ್ಪಾದನೆಗೆ ಅಗತ್ಯವಿರುವ ಎಲ್ಲ ಸಲಕರಣೆಗಳನ್ನು ರಷ್ಯಾ ಒದಗಿಸಲಿದೆ ಮತ್ತು ಭಾರತೀಯ ತಂಡಕ್ಕೆ ಉತ್ಪಾದನೆ ಕುರಿತು ತರಬೇತಿ ನೀಡಲಿದೆ. ಮೂಲಗಳ ಪ್ರಕಾರ, 32 ತಿಂಗಳುಗಳಲ್ಲಿ ಅಸಾಲ್ಟ್ ರೈಫ‌ಲ್‌ ಉತ್ಪಾದನೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

  • ರಷ್ಯಾದ ಸಹಭಾಗಿತ್ವದಲ್ಲಿ ಈ ಯೋಜನೆ
  • ಅಮೇಠಿಯ ಕೊರ್ವಾದಲ್ಲಿ ಗನ್‌ ಉತ್ಪಾದನ ಘಟಕ ನಿರ್ಮಾಣ
  • ಒಟ್ಟು 5 ಲಕ್ಷ ರೈಫ‌ಲ್‌ ಉತ್ಪಾದನೆಯ ಗುರಿ
  • 5,100 ಕೋಟಿ ರೂ.ಗಳ ಯೋಜನೆ
  • 30 ವರ್ಷಗಳಿಂದ ಇರುವ ಇನ್ಸಾಸ್‌ ರೈಫ‌ಲ್‌ ಬದಲಿಗೆ ಈ ಹೊಸ ರೈಫ‌ಲ್‌
  • ಇದು ಅತ್ಯಂತ ಹಗುರ, ದೃಢ, ಸುಲಭವಾಗಿ ಬಳಸಬಹುದಾದ ಅತ್ಯಾಧುನಿಕ ಅಸಾಲ್ಟ್ ರೈಫ‌ಲ್‌
  • ವಿಶೇಷ ಪಡೆಗಳ ಕಾರ್ಯಾಚರಣೆ, ಉಗ್ರ ನಿಗ್ರಹ, ನಕ್ಸಲ್‌ ನಿಗ್ರಹ ಕಾರ್ಯಾಚರಣೆಯಲ್ಲಿ ಬಳಕೆಗೆ ಯೋಗ್ಯ

ಯೋಜನೆಯ ಅನುಕೂಲಗಳೇನು?:

  • ರಕ್ಷಣ ಸಾಮಗ್ರಿಗಳನ್ನು ಬೇರೆ ದೇಶಗಳಿಂದ ಖರೀದಿಸುವ ಬದಲು ದೇಶದಲ್ಲೇ ಉತ್ಪಾದನೆ ಮಾಡುವ ಮೂಲಕ ಆತ್ಮನಿರ್ಭರತೆ ಸಾಧಿಸಬಹುದು.
  • ಕಚ್ಚಾ ವಸ್ತುಗಳು, ಬಿಡಿಭಾಗಗಳ ಪೂರೈಕೆಯ ಅವಕಾಶವು ದೇಶದಲ್ಲಿರುವ ವಿವಿಧ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು, ಇತರ ರಕ್ಷಣ ಕೈಗಾರಿಕೆಗಳಿಗೆ ಸಿಗಲಿದ್ದು, ಅವರಿಗೂ ಲಾಭವಾಗಲಿದೆ.
  • ದೇಶದಲ್ಲಿ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.
Advertisement
Advertisement

Udayavani is now on Telegram. Click here to join our channel and stay updated with the latest news.

Next