ಬಸವನಬಾಗೇವಾಡಿ: ಪಟ್ಟಣದಲ್ಲಿ ಮೌಲಾನಾ ಅಜಾದ್ ಮಾದರಿ ವಸತಿ ರಹಿತ ಆಂಗ್ಲ ಮಾಧ್ಯಮ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಖಾಲಿ ನಿವೇಶನ ನೀಡುವ ಕುರಿತು ಪುರಸಭೆ ತುರ್ತು ವಿಶೇಷ ಸಭೆಯಲ್ಲಿ ಚರ್ಚಿಸಲಾಯಿತು. ಪುರಸಭೆ ಮುಖ್ಯಾಧಿಕಾರಿ ಬಿ.ಎ. ಸೌದಾಗರ ಮಾತನಾಡಿ, ಮೌಲಾನಾ ಆಜಾದ್ ಮಾದರಿ ವಸತಿ ರಹಿತ ಆಂಗ್ಲ ಮಾಧ್ಯಮ ಶಾಲೆಯನ್ನು ಪಟ್ಟಣದಲ್ಲಿ ನಿರ್ಮಿಸಲು ರಾಜ್ಯ ಸರಕಾರದಿಂದ ಮಂಜೂರಾತಿ ಸಿಕ್ಕಿದ್ದು. ಜಿಲ್ಲಾ ಅಲ್ಪಸಂಖ್ಯಾತರ ಇಲಾಖೆಯ ಪಟ್ಟಣದಲ್ಲಿ ಖಾಲಿ ನಿವೇಶನ ನೀಡುವಂತೆ ಪುರಸಭೆಗೆ ಸೂಚಿಸಿದ್ದಾರೆ ಎಂದು ಹೇಳಿದರು.
ಪುರಸಭೆ ಕಾಂಗ್ರೆಸ್ ಸದಸ್ಯೆ ಜಗದೇವಿ ಗುಂಡಳ್ಳಿ ಮಾತನಾಡಿ, ಪಟ್ಟಣದ ಅಭಿವೃದ್ಧಿ ವಿಷಯದಲ್ಲಿ ಮತ್ತು ರಾಜ್ಯ ಸರಕಾರದಿಂದ ಬರುವ ವಿವಿಧ ಯೋಜನೆಗಳನ್ನು ಪಟ್ಟಣದಲ್ಲಿ ಸಮರ್ಪಕವಾಗಿ ಬಳಿಸಿಕೊಳ್ಳೊಣ. ಇದರಲ್ಲಿ ಯಾರೂ ಕೂಡಾ ಪಕ್ಷ ಮತ್ತು ಜಾತಿ ಧರ್ಮ ಮಾಡದೇ ಪಟ್ಟಣದ ಅಭಿವೃದ್ಧಿಗೆ ಎಲ್ಲಾ ಸದಸ್ಯರು ಒಟ್ಟಾಗಿ ಕೆಲಸ ಮಾಡೋಣ ಎಂದು ಸಭೆಗೆ ವಿವಿರಿಸಿದರು. ರಾಜ್ಯ ಸರಕಾರದಿಂದ ಪಟ್ಟಣದಲ್ಲಿ ನಿರ್ಮಿಸಲು ರಾಜ್ಯ ಸರಕಾರದಿಂದ ಮಂಜೂರಾತಿ ಸಿಕ್ಕಿದ
ಮೌಲಾನಾ ಆಜಾದ್ ಮಾದರಿ ವಸತಿ ರಹಿತ ಆಂಗ್ಲ ಮಾಧ್ಯಮ ಶಾಲೆಗೆ ಸೂಕ್ತ ಸ್ಥಳ ಪರಿಶೀಲಿಸಿ ಆ ಇಲಾಖೆಗೆ ನೀಡುವುದು ಸೂಕ್ತ ಎಂದು ಹೇಳಿದರು.
ಪುರಸಭೆಯ ಹಿರಿಯ ಸದಸ್ಯ ನೀಲು ನಾಯಕ ಮಾತನಾಡಿ, ತೆಲಗಿ ರಸ್ತೆ ಸರಕಾರಿ ಉರ್ದು ಶಾಲೆಯಲ್ಲಿ ಈ ಮೌಲಾನಾ ಆಜಾದ್ ಮಾದರಿ ವಸತಿ ಶಾಲೆಯನ್ನು ನಡೆಸುವುದು ಸೂಕ್ತ ಎಂದು ಹೇಳಿದ ಅವರು, ನಾಗೂರ ರಸ್ತೆಯಲ್ಲಿ ಇರುವ 25 ಗುಂಟೆ ನನ್ನ ಸ್ವಂತ ಜಾಗವಿದ್ದು. ಅಲ್ಲಿ ಈ ಶಾಲೆ ನಿರ್ಮಿಸಲು ಮುಂದಾದರೆ ದಾನವಾಗಿ ನೀಡುವುದಾಗಿ ಸಭೆಗೆ ವಿವರಿಸಿದರು.
ಪಟ್ಟಣದ ರಾಧಾಕೃಷ್ಣ ನಗರದಲ್ಲಿ 27 ಗುಂಟೆ ಜಾಗೆಯಿದ್ದು. ಅಲ್ಲಿ ಗುರಜಿಕಟ್ಟಿ ಸರಕಾರಿ ಉರ್ದು ಶಾಲೆ ಜಾಗೆ ಇದ್ದು. ಅಲ್ಲೇ ಮೌಲಾನಾ ಆಜಾದ್ ಮಾದರಿ ವಸತಿ ಶಾಲೆಯನ್ನು ಪ್ರಾರಂಭಿಸುವುದು ಸೂಕ್ತ ಎಂದು ಕಾಂಗ್ರೆಸ್ಸಿನ ನಜೀರ್ ಗಣಿ ಸಭೆಗೆ ವಿವರಿಸಿದಾಗ ಕೆಲವು ಸದಸ್ಯರು ಗಣಿ ಅವರ ಮಾತಿಗೆ ಒಲವು ತೋರಿಸಿದರು.
ನಂತರ ಎಲ್ಲಾ ಸದಸ್ಯರ ಅಭಿಪ್ರಾಯವನ್ನು ಗಣನೀಯವಾಗಿ ತೆಗೆದುಕೊಂಡು ಸೂಕ್ತ ಜಾಗೆ ನೀಡುವ ಅಧಿಕಾರವನ್ನು ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ, ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಬಿಡಲಾಯಿತು. ತುರ್ತು ಸಭೆಯಲ್ಲಿ ಕ್ಷೇತ್ರಶಿಕ್ಷಣಾ ಧಿಕಾರಿ ಬಸವರಾಜ ತಳವಾರ ಮಾತನಾಡಿ, ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಇರುವ ಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ ಇರುವ ಅಕ್ಕನಾಗಮ್ಮ ಬಾಲಕಿಯರ ಪೌಢ ಶಾಲೆಯನ್ನು ಸ್ಥಳಾಂತರಿಸುವಂತೆ ಪ್ರಾಧಿಕಾರದವರು ಸೂಚಿಸಿದ್ದು, ಪುರಸಭೆಯವರು ಅಕ್ಕನಾಗಮ್ಮ ಬಾಲಕಿಯರ ಪೌಢ ಶಾಲೆಗೆ ನಿವೇಶನ ನೀಡುವಂತೆ ಮನವಿ ಸಲ್ಲಿಸಿದರು.
ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಕಲ್ಯಾಣಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಬೆಲ್ಲದ, ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ ಹಾರಿವಾಳ ಹಾಜರಿದ್ದರು. ರವಿ ಪಟ್ಟಣಶೆಟ್ಟಿ, ಅಶೋಕ ಗುಳೇದ, ಪ್ರವೀಣ ಪವಾರ, ನಾಗವ್ವ ಗುಂಡಿ, ನಿಂಗಪ್ಪ ಗುಂಡಳ್ಳಿ, ಪ್ರವೀಣ ಪೂಜಾರಿ, ರವಿ ನಾಯ್ಕೋಡಿ, ಗೀತಾ ಬಾಗೇವಾಡಿ, ಪರಜಾನ್ ಚೌಧರಿ ಸೇರಿದಂತೆ ಅನೇಕ ಸದಸ್ಯರು ಭಾಗವಹಿಸಿದ್ದರು.