ನವ ದೆಹಲಿ : ದೇಶದ ಅತಿದೊಡ್ಡ ವಿಮಾ ಕಂಪನಿ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ (ಎಲ್‌ಐಸಿ) ಲಕ್ಷಾಂತರ ನೌಕರರ ವೇತನ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಎಲ್‌ಐಸಿ ನೌಕರರ ವೇತನ ಹೆಚ್ಚಳದ ಜೊತೆಗೆ ವಾರದಲ್ಲಿ ಐದು ದಿನ ಕೆಲಸಕ್ಕೆ ಅನುಮೋದನೆಯನ್ನು ಕೂಡ ನೀಡಲಾಗಿದೆ ಎಂಬ ವರದಿ ಕೂಡ ಆಗಿದೆ. ಈ ಮೂಲಕ ಎಲ್ ಐ ಸಿ ನೌಕರರಿಗೆ ಕೇಂದ್ರ ಸರ್ಕಾರ ದೊಡ್ಡ ಉಡುಗೊರೆಯನ್ನು ನೀಡಿದೆ.
ಓದಿ : ‘ರಿವೈಂಡ್’ ಚಿತ್ರ ವಿಮರ್ಶೆ: ಮಾಡರ್ನ್ ಟೆಕ್ನಿಕ್‌ನಲ್ಲಿ ಕನಸುಗಳ ಹುಡುಕಾಟ
ಎಲ್ ಐ ಸಿ ಆಡಳಿತ ಮಂಡಳಿ ಪ್ರಸ್ತಾಪಿಸಿದ ವೃತನ ಹೆಚ್ಚಳವನ್ನು ಪರಿಶೀಲಿಸಿದ ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ವರದಿ ತಿಳಿಸಿದ. ಶೇಕಡಾ 16 ರಷ್ಟು ವೇತನ ಹೆಚ್ಚಳವನ್ನು ಎಲ್ ಐ ಸಿ ಆಡಳಿತ ಮಂಡಳಿ ಈ ಹಿಂದೆ ಪ್ರಸ್ತಾಪಿಸಿತ್ತು. ಈ ಕುರಿತು ಪರಿಶೀಲನೆ ನಡೆಸದಿ ಕೇಂದ್ರ ಸರ್ಕಾರ ಶೇಕಡಾ 15 ರಿಂದ 16ರಷ್ಟು ವೇತನ ಹೆಚ್ಚಳಕ್ಕೆ ಅನುಮೋದನೆ ನೀಡಿದೆ.
ಮಾತ್ರವಲ್ಲದೇ, ಐದು ದಿನಗಳ ವಾರ ನೀತಿಯನ್ನು ಅಂತಿಮಗೊಳಿಸಿದೆ ಎಂದು ತಿಳಿದುಬಂದಿದೆ. ಈ ಮೂಲಕ ಪ್ರತಿ ಶನಿವಾರ, ಭಾನುವಾರ ಎಲ್ ಐ ಸಿ ನೌಕರರಿಗೆ ರಜೆ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೇಂದ್ರ ಸರ್ಕಾರವು ಎಲ್ ಐ ಸಿ ಯ ಐಪಿಒನಿಂದ ಸುಮಾರು 1 ಲಕ್ಷ ಕೋಟಿ ರೂಪಾಯಿಗಳನ್ನು ಸಂಗ್ರಹಿಸಲು ಬಯಸಿದ್ದು, ಎಲ್ಐಸಿ ಐಪಿಒ ವಿತರಣೆಯ ಗಾತ್ರದ ಶೇಕಡಾ 10 ರಷ್ಟು ಎಲ್ಐಸಿ ಪಾಲಿಸಿದಾರರಿಗೆ ಮೀಸಲಿಡಲಾಗುತ್ತದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಖಚಿತಪಡಿಸಿದ್ದಾರೆ.
ಪಾಲಿಸಿದಾರರ ಹಿತರಕ್ಷಣೆಯ ಉದ್ದೇಶದಿಂದ ಕೇಂದ್ರ ಸರ್ಕಾರವೇ ಗರಿಷ್ಠ ಷೇರುಪಾಲು ಉಳಿಸಿಕೊಳ್ಳಲಿದ್ದು, ಆಡಳಿತಾತ್ಮಕ ನಿಯಂತ್ರಣವನ್ನೂ ತನ್ನ ಬಳಿಯೇ ಇಟ್ಟುಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ಓದಿ : ಕ್ಯೂಟ್ ಜೋಡಿ ಬೈ ಟು ಲವ್: ಗಮನ ಸೆಳೆಯುತ್ತಿದೆ ಫಸ್ಟ್ ಲುಕ್ ಪೋಸ್ಟರ್