Advertisement

ಪಾಕ್‌ ಗುಂಡಿನ ದಾಳಿಯಿಂದ ರಕ್ಷಣೆಗಾಗಿ 14,460 ಬಂಕರ್‌ ನಿರ್ಮಾಣ

04:03 PM Feb 06, 2018 | udayavani editorial |

ಹೊಸದಿಲ್ಲಿ : ಪಾಕ್‌ ಪಡೆಗಳು ಜಮ್ಮು ಕಾಶ್ಮೀರ ಗಡಿಯಲ್ಲಿ ನಿರಂತರ ಗುಂಡಿನ ದಾಳಿಯಲ್ಲಿ ತೊಡಗಿರುವುದರಿಂದ ಗಡಿ ಪ್ರದೇಶದಲ್ಲಿ ವಾಸವಾಗಿರುವ ಭಾರತೀಯರಿಗೆ ಸುರಕ್ಷಿತ ನೆಲೆ ಕಾಣಿಸುವ ಸಲುವಾಗಿ ಭಾರತದ ಸರಕಾರ 14,460 ಬಂಕರ್‌ಗಳ ನಿರ್ಮಾಣಕ್ಕೆ ಅನುಮತಿ ನೀಡಿದೆ.

Advertisement

ಅಂತಾರಾಷ್ಟ್ರೀಯ ಗಡಿ ಮತ್ತು ನಿಯಂತ್ರಣ ರೇಖೆಯಲ್ಲಿ ವಾಸಿಸಿಕೊಂಡಿರುವ ಪ್ರಾಣ ರಕ್ಷಣೆಗಾಗಿ 14,460 ಬಂಕರ್‌ ಗಳನ್ನು ನಿರ್ಮಿಸಲು ಸರಕಾರ ನಿರ್ಧರಿಸಿದೆ ಎಂದು ಕೇಂದ್ರ ಗೃಹ ಖಾತೆ ಸಹಾಯಕ ಸಚಿವ  ಹಂಸರಾಜ್‌ ಆಹಿರ್‌ ತಿಳಿಸಿದರು. 

ಸಾಂಬಾ, ಜಮ್ಮು, ಕಥುವಾ, ಪೂಂಚ್‌ ಮತ್ತು ರಾಜೋರಿ ಜಿಲ್ಲೆಯಗಳಲ್ಲಿ ಗಡಿ ಭಾಗಗಳಲ್ಲಿ ನಿರ್ಮಿಸಲ್ಪಡುವ ಈ ಬಂಕರ್‌ಗಳ ಪೈಕಿ 1,431 ಬಂಕರ್‌ಗಳು ಸಮುದಾಯ ಬಂಕರ್‌ಗಳಾಗಿರುತ್ತವೆ; ಉಳಿದ 13,029 ಬಂಕರ್‌ ಗಳು ವೈಯಕ್ತಿಕ ಬಂಕರ್‌ಗಳಾಗಿರುತ್ತವೆ; ಜಮ್ಮು ಕಾಶ್ಮೀರ ಸರಕಾರ ಈ ಯೋಜನೆಯನ್ನೀಗ ಅನುಷ್ಠಾನಿಸುತ್ತಿದೆ ಎಂದವರು ಲೋಕಸಭೆಯಲ್ಲಿ  ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next