Advertisement

ಧಾರವಾಡ-ಅಂಕೋಲಾ ಸರ್ಕಾರಿ ಶಾಲೆಗೆ ಗೋವಿಂದೇಗೌಡ ಪ್ರಶಸ್ತಿ

09:25 AM Sep 04, 2019 | Team Udayavani |

ಧಾರವಾಡ: ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗದ ಅಪರ ಆಯುಕ್ತರ ಕಚೇರಿ ವ್ಯಾಪ್ತಿಯ ಧಾರವಾಡ, ಉತ್ತರ ಕನ್ನಡ ಜಿಲ್ಲೆಯ ಎರಡು ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳಿಗೆ ಪ್ರಸಕ್ತ ಸಾಲಿನ ಮಲೆನಾಡ ಗಾಂಧಿ ಎಚ್.ಜಿ. ಗೋವಿಂದೆಗೌಡ ರಾಜ್ಯ ಪ್ರಶಸ್ತಿ ಲಭಿಸಿದೆ.

Advertisement

ಮಲೆನಾಡ ಗಾಂಧಿ ಎಂದೇ ಪರಿಚಿತರಾಗಿದ್ದ ಗಾಂಧಿವಾದಿ, ಮಾಜಿ ಶಿಕ್ಷಣ ಸಚಿವ ದಿ|ಎಚ್. ಜಿ. ಗೋವಿಂದೇಗೌಡ ಅವರ ಹೆಸರಿನಲ್ಲಿ ವಿಭಿನ್ನ ನೆಲೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಶಾಲೆಗಳಿಗೆ ನೀಡಲಾಗುವ ಈ ರಾಜ್ಯ ಪ್ರಶಸ್ತಿ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬು.ಕೊಪ್ಪ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಹಿಲ್ಲೂರು ಸರ್ಕಾರಿ ಪ್ರೌಢಶಾಲೆಗೆ ಲಭಿಸಿದೆ.

ಪ್ರಶಸ್ತಿ ನಗದು ಬಹುಮಾನ ಒಳಗೊಂಡಿದ್ದು, ಪ್ರಶಸ್ತಿ ಮೊತ್ತವನ್ನು ಶಾಲೆಯ ಮೂಲಭೂತ ಸೌಕರ್ಯಗಳಾದ ಗ್ರಂಥಾಲಯ, ಕಂಪ್ಯೂಟರ್‌, ಪ್ರಯೋಗಾಲಯ ಮತ್ತು ವಿದ್ಯಾರ್ಥಿಗಳ ಸೃಜನಶೀಲತೆಯನ್ನು ರೂಪಿಸುವ ವಿಧಾಯಕ ಚಟುವಟಿಕೆಗಳಿಗೆ ಬಳಸಲು ಸೂಚಿಸಲಾಗಿದೆ. ಬೆಂಗಳೂರು ವಸಂತನಗರ ಮಿಲ್ಲರ್‌ ರಸ್ತೆಯಲ್ಲಿರುವ ಡಾ|ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ಸೆ.5ರಂದು ಜರುಗಲಿರುವ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ರಾಜ್ಯ ಪ್ರಶಸ್ತಿಗೆ ಭಾಜನವಾದ ಎರಡೂ ಶಾಲೆಗಳ ಮುಖ್ಯಾಧ್ಯಾಪಕರು ಹಾಗೂ ಅಲ್ಲಿಯ ಸಹ ಶಿಕ್ಷಕ-ಶಿಕ್ಷಕಿಯರನ್ನು, ಜತೆಗೆ ಮಾರ್ಗದರ್ಶನ ಮಾಡಿದ ತಾಲೂಕುಗಳ ಬಿಇಒ ಅವರನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗದ ಅಪರ ಆಯುಕ್ತ ಮೇಜರ್‌ ಸಿದ್ದಲಿಂಗಯ್ಯ ಹಿರೇಮಠ ಅಭಿನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next