Advertisement

Koppala; ಹಿಜಾಬ್ ನಿಷೇಧ ಹಿಂಪಡೆದಿದ್ದು ಕಾಂಗ್ರೆಸ್ ಕುತಂತ್ರ: ಗೋವಿಂದ ಕಾರಜೋಳ

01:22 PM Dec 23, 2023 | Team Udayavani |

ಕೊಪ್ಪಳ: ಹಿಜಾಬ್ ನಿಷೇಧ ಹಿಂಪಡೆದಿದ್ದು ಕಾಂಗ್ರೆಸ್ಸಿನವರ ಕುತಂತ್ರ. ಸಿಎಂ ಸಿದ್ದರಾಮಯ್ಯಗೆ ಅಭಿವೃದ್ದಿ ಬಗ್ಗೆ ಹೇಳಲು ಏನೂ ಇಲ್ಲ. ಹೀಗಾಗಿ ಭಾವಾತ್ಮಕ ವಿಷಯ ಎತ್ತಿದ್ದಾರೆ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಎಂದೂ ದೀನ ದಲಿತರನ್ನು ಸರಿಯಾಗಿ ನೋಡೊಕೊಂಡಿಲ್ಲ. ಖರ್ಗೆ ಅವರು 50 ವರ್ಷ ರಾಜಕಾರಣ ಮಾಡಿದ್ದಾರೆ. ಅವರನ್ನು ಹೇಗೆ ನಡೆಸಿಕೊಂಡಿದ್ದಾರೆ ಎನ್ನುವುದನ್ನು ನೋಡಿದ್ದೇವೆ. ಈಗ ಬಿ ಕೆ ಹರಿಪ್ರಸಾದ್ ರನ್ನು ನಡೆಸಿಕೊಳ್ಳುತ್ತಿರುದರಿಂದ ಅವರ ಬದಲಾವಣೆ ಬಯಸಿರಬಹುದು ಎಂದರು.

ನಾರಾಯಣಸ್ವಾಮಿ ರಾಜಕೀಯ ನಿವೃತ್ತಿ ಘೋಷಣೆ ಮಾಡಿಲ್ಲ. ತಮ್ಮ ನಿರ್ಧಾರ ಪಕ್ಷದ ಮೇಲೆ ಬಿಟ್ಟಿದ್ದಾರೆ. ಈ ಬಗ್ಗೆ ಪಕ್ಷ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.

ಐಎನ್ ಡಿಐಎ ಈಗ ಛಿದ್ರವಾಗಿದೆ. ಕಾಂಗ್ರೆಸ್ ಎಂದು ದಲಿತರಿಗೆ ಸ್ಥಾನ ನೀಡುವುದಿಲ್ಲ. ಒಕ್ಕೂಟ ಮಾಡಿದರೂ ಐದು ರಾಜ್ಯದ ಫಲಿತಾಂಶ ನೋಡಿದರೆ ಗೊತ್ತಾಗುತ್ತದೆ ಎಂದು ಟೀಕಿಸಿದರು.

ಮಾಜಿ ಶಾಸಕ ಬಸವರಾಜ ದಡೆಸಗೂರು ಮಾತನಾಡಿ, ಕಾಂಗ್ರೆಸ್ ನಿಂದ ಧರ್ಮ ಧರ್ಮಗಳ ಮಧ್ಯೆ ಜಗಳ ಹಚ್ಚುವ ಕೆಲಸ ನಡೆದಿದೆ. ಸಂಸತ್ ಚುನಾವಣೆ ಬರುತ್ತಿದೆ. ಹೀಗಾಗಿ ಧರ್ಮ ಧರ್ಮಗಳ ಮಧ್ಯೆ ಜಗಳ ಹಚ್ಚುವ ಕೆಲಸ ಸಿಎಂ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಸಿಎಂಗೆ ಮಾಡುವುದಕ್ಕೆ ಏನೂ ಕೆಲಸವಿಲ್ಲ.  ಹೀಗಾಗಿ ಹಿಜಾಬ್ ಎನ್ನುವಂಥ ವಿಷಯ ಎತ್ತುತ್ತಿದ್ದಾರೆ ಎಂದರು.

Advertisement

ಹಿಜಾಬ್ ವಿಷಯ ಕಾಂಗ್ರೆಸ್ಸಿಗೆ ಅವಶ್ಯವಿದೆ. ಅವರು ಸಮಾಜದಲ್ಲಿ ಗೊಂದಲ ಸೃಷ್ಠಿಸುತ್ತಾರೆ. ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬರದಿಂದ ಜನ ಕಣ್ಣೀರು ಹಾಕುತ್ತಿದ್ದಾರೆ. ರೈತರಿಗೆ ಪರಿಹಾರ ನೀಡಿಲ್ಲ. ಹಿಂದಿನ ಸರಕಾರದಲ್ಲಿ ಕೇಂದ್ರ ಹಾಗು ರಾಜ್ಯ ಸರಕಾರದಿಂದ 25 ಸಾವಿರ ರೂಪಾಯಿ ನೀಡಿದ್ದೆವು. ಈಗ 2 ಸಾವಿರ ರೂಪಾಯಿ ನೀಡಿದರೆ ಯಾವುದಕ್ಕೆ ಸಾಲುತ್ತದೆ.  ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನವರು ಹಳ್ಳಿಗಳಿಗೆ ಹೋದರೆ ಕಲ್ಲು ಹೊಡೆದು ಓಡಿಸುತ್ತಾರೆ ಎಂದರು,

Advertisement

Udayavani is now on Telegram. Click here to join our channel and stay updated with the latest news.

Next