Advertisement

ಕಲಬುರಗಿಗೆ ಹೋಗಿ ಅಡುಗೆ ಮಾಡೋದು ಇರಲ್ಲ: ಕಾರಜೋಳ

10:14 AM Jan 27, 2020 | Team Udayavani |

ಬಾಗಲಕೋಟೆ: ಕಲಬುರಗಿಯಲ್ಲಿ ನಡೆಯಲಿರುವ 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಉಸ್ತುವಾರಿ ಸಚಿವನಾಗಿ ಈಗಾಗಲೇ 3-4 ಬಾರಿ ಹೋಗಿದ್ದೇನೆ. ಸಮಿತಿಗಳ ಸಭೆಯೂ ನಡೆಸಿದ್ದು, ಸರ್ಕಾರದಿಂದ ಅಗತ್ಯ ಅನುದಾನ ಕೊಡಿಸಿದ್ದೇನೆ. ನಾವೇನು ಅಲ್ಲಿ ಹೋಗಿ ಅಡುಗೆ ಮಾಡೋದು ಇರುವುದಿಲ್ಲ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.

Advertisement

ಭಾನುವಾರ ಗಣರಾಜ್ಯೋತ್ಸವ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಕಲಬುರಗಿ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವ ಸಿದ್ಧತೆ ಕುರಿತು ಮುತುವರ್ಜಿ ವಹಿಸಲಿಲ್ಲ ಎಂಬುದು ಸರಿಯಲ್ಲ. ಸಿಎಂ ಜತೆಗೆ ಚರ್ಚಿಸಿ ಈಗಾಗಲೇ ಸರ್ಕಾರದಿಂದ ಅನುದಾನ ಕೊಡಿಸಿದ್ದೇನೆ. ನಾನೂ ಹಲವು ಬಾರಿ ಅಲ್ಲಿ ವಿವಿಧ ಸಮಿತಿಗಳ ಸಭೆ ನಡೆಸಿ, ಪೂರ್ವ ತಯಾರಿ ಕುರಿತು ಚರ್ಚಿಸಿದ್ದೇನೆ ಎಂದರು.

ವಿಶ್ವನಾಥ ಅವರಿಗೆ ಸಚಿವ ಸ್ಥಾನ ಕೊಡಲು ಎಸ್‌.ಟಿ. ಸೋಮಶೇಖರ್‌ ವಿರೋಧ ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಪಕ್ಷದಲ್ಲಿ ಪ್ರಧಾನಿ, ರಾಷ್ಟ್ರೀಯ ಅಧ್ಯಕ್ಷರು, ರಾಜ್ಯಾಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳು ಕೈಗೊಳ್ಳುವ ನಿರ್ಧಾರವೇ ಅಂತಿಮ ಎಂದರು.

ವಸತಿ ಶಾಲೆಗಳಲ್ಲಿನ್ನು ಪಿಯು ಶಿಕ್ಷಣ
ಬಾಗಲಕೋಟೆ: ಸಮಾಜ ಕಲ್ಯಾಣ ಇಲಾಖೆಯಡಿ ನಡೆಯುವ ರಾಜ್ಯದ ವಸತಿ ಶಾಲೆಗಳನ್ನು ಮೇಲ್ದರ್ಜೆಗೇರಿಸಿ ಪಿಯು ಶಿಕ್ಷಣ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ, ಡಿಸಿಎಂ ಗೋವಿಂದ ಕಾರಜೋಳ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಇಲಾಖೆಯಡಿ ವಸತಿ ನಿಲಯ ಹಾಗೂ ವಸತಿ ಶಾಲೆಗಳಿದ್ದು, ಇಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಶೇ.100 ಫಲಿತಾಂಶ ನೀಡಬೇಕು ಎಂಬುದು ನಮ್ಮ ಗುರಿ. ಸದ್ಯ ವಸತಿ ನಿಲಯದ ಶೇ.96, ವಸತಿ ಶಾಲೆಗಳ ಶೇ.86ರಷ್ಟು ವಿದ್ಯಾರ್ಥಿಗಳು ಪಾಸಾಗುತ್ತಿದ್ದಾರೆ. ಅದನ್ನು ಶೇ.100ಕ್ಕೆ ತರಲು ಎಲ್ಲ ರೀತಿಯ ಪ್ರೇರಣೆ ನೀಡಲಾಗುವುದು ಎಂದರು.

ವಸತಿ ನಿಲಯಗಳಲ್ಲಿ 2.01 ಲಕ್ಷ, ವಸತಿ ಶಾಲೆಗಳಲ್ಲಿ 1.69 ಲಕ್ಷ ವಿದ್ಯಾರ್ಥಿಗಳು ಸೇರಿ ಸದ್ಯ ಸಮಾಜ ಕಲ್ಯಾಣ ಇಲಾಖೆಯಡಿಯ ಶಾಲೆ-ವಸತಿ ನಿಲಯಗಳಲ್ಲಿ 3.70 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸ್ವಂತ ಕಟ್ಟಡ ಹೊಂದಿರುವ ವಸತಿ ನಿಲಯಗಳನ್ನು ಮೇಲ್ದರ್ಜೆಗೇರಿಸಿ, ಅಲ್ಲಿ ಪಿಯು ಶಿಕ್ಷಣ ಕೂಡ ಒದಗಿಸಲಾಗುವುದು. ಇದರಿಂದ ರಾಜ್ಯದ ಸುಮಾರು 3.70 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next