Advertisement

ಆಧಾರಿಕಾ ಸಮಾಜ ವಿಕಾಸ್‌ ಸಂಸ್ಥೆಗೆ ರಾಜ್ಯಪಾಲರ ಭೇಟಿ: ಸಂವಹನ

12:38 PM Feb 21, 2021 | Team Udayavani |

ಮುಂಬಯಿ, ಫೆ. 20: ರಾಜ್ಯಪಾಲ ಭಗತ್‌ ಸಿಂಗ್‌ ಕೋಶ್ಯಾರಿ ಅವರು ಫೆ. 19ರಂದು ಕಾಂದಿವಲಿಯ ಮಹಾವೀರ ನಗರದ ಆಧಾರಿಕಾ ಸಮಾಜ ವಿಕಾಸ್‌ ಸಂಸ್ಥೆಗೆ ಭೇಟಿ ನೀಡಿ ಮಹಿಳಾ ಕೌಶಲ ತರಬೇತಿ ಮತ್ತು ಉದ್ಯಮಶೀಲತಾ ಕೇಂದ್ರವನ್ನು ಪರಿಶೀಲಿಸಿ ಹಾಜರಿದ್ದ ಮಹಿಳೆಯರೊಂದಿಗೆ ಸಂವಾದ ನಡೆಸಿದರು.

Advertisement

ಈ ಸಂದರ್ಭ ಮಾತನಾಡಿದ ರಾಜ್ಯಪಾಲರು, ತಾಯಿಯ ಶಕ್ತಿಯೇ ದೊಡ್ಡ ಶಕ್ತಿ. ಅಪಾರ ಕಷ್ಟಗಳನ್ನು ಸಹಿಸಿಕೊಳ್ಳುವ ಮೂಲಕ, ತಾಯಿಯ ಶಕ್ತಿಯು ಪ್ರಪಂಚವನ್ನು ಮುನ್ನಡೆಸುತ್ತದೆ. ಇಂದು ಮಹಿಳಾ ಅಭಿವೃದ್ಧಿಗೆ ಮುದ್ರಾ, ಸ್ಟಾರ್ಟ್‌ಅಪ್‌, ಪ್ರೈಮ್‌ ಸ್ಕಿಲ್‌ ಡೆವಲಪೆ¾ಂಟ್‌ ಮುಂತಾದ ವಿವಿಧ ಯೋಜನೆಗಳು ಲಭ್ಯವಿದೆ. ಮಹಿಳೆಯರು ಈ ಯೋಜನೆಗಳ ಲಾಭವನ್ನು ಪಡೆದುಕೊಂಡು ತಮ್ಮನ್ನು ತಾವು ಉನ್ನತೀಕರಿಸಬೇಕು. ತಮ್ಮ ಜೀವನೋಪಾಯಕ್ಕಾಗಿ ಮಾತ್ರವಲ್ಲ ಇತರ ಮಹಿಳೆಯರನ್ನು ಮುಂದೆ ತರಬೇಕೆಂದು ರಾಜ್ಯಪಾಲರು ಮನವಿ ಮಾಡಿದರು.

ಚಾಲಕ ತರಬೇತಿ, ಬ್ಯೂಟಿ ಪಾರ್ಲರ್‌ ಕೋರ್ಸ್‌, ಹೊಲಿಗೆ ಕೆಲಸ ಇತ್ಯಾದಿಗಳನ್ನು ಪೂರೈಸುವ ಮೂಲಕ ಉದ್ಯೋಗ ಮತ್ತು ಸ್ವಯಂ ಉದ್ಯೋಗ ಪಡೆದ ಮಹಿಳೆಯರನ್ನು ರಾಜ್ಯಪಾಲರು ಸಮ್ಮಾನಿಸಿದರು. ಸಂಸದ ಗೋಪಾಲ್‌ ಶೆಟ್ಟಿ, ಶಾಸಕ ಮನೀಷಾ ಚೌಧರಿ, ಆಧರಿಕ ಸಮಾಜದ ನಿರ್ದೇಶಕ ವಿಕಾಸ್‌ ಸಂಸ್ಥಾ, ರುಚಿ ಮಾನೆ, ನಗರ ಸೇವಕಿ ಬಿನಾ ದೋಶಿ, ಸ್ತ್ರೀರೋಗತಜ್ಞ ಡಾ| ರನ್ನಾ ದೋಶಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next