Advertisement
ಶಂಕರಮೂರ್ತಿ ಅವರು ರಾಜ್ಯಪಾಲ ರಾಗಲಿದ್ದಾರೆ ಎಂಬ ಮಾತು ಕಳೆದ ಐದು ವರ್ಷಗಳಿಂದ ಕೇಳಿಬರುತ್ತಿತ್ತು. ಅದರಲ್ಲೂ 2014ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರತಿ ಬಾರಿ ರಾಜ್ಯಪಾಲರ ನೇಮಕ ಸಂದರ್ಭದಲ್ಲೂ ಶಂಕರಮೂರ್ತಿ ಅವರ ಹೆಸರು ಕೇಳಿಬರುತ್ತಿತ್ತಾದರೂ ಅಂತಿಮ ಹಂತದಲ್ಲಿ ಅವಕಾಶ ವಂಚಿತರಾಗುತ್ತಿದ್ದರು.ಇತ್ತೀಚೆಗೆ ಮತ್ತೆ ರಾಜ್ಯಪಾಲರ ನೇಮಕದ ಮಾತು ಕೇಳಿಬಂದಾಗ ಶಂಕರಮೂರ್ತಿ ಅವರ ಹೆಸರು ಕೇಳಿಬಂದಿತ್ತು. ಅದರಲ್ಲೂ ಆಂಧ್ರಪ್ರದೇಶ-ತೆಲಂಗಾಣ ರಾಜ್ಯಕ್ಕೆ ಅವರನ್ನು ರಾಜ್ಯಪಾಲರಾಗಿ ನೇಮಕ ಮಾಡಲಾಗುತ್ತದೆ ಎಂದು ಊಹಾಪೋಹ ಸೃಷ್ಟಿಯಾಗಿತ್ತು. ಇದೀಗ ಐದು ರಾಜ್ಯಗಳಿಗೆ ರಾಜ್ಯಪಾಲರನ್ನು ನೇಮಕ ಮಾಡಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆಯಾದರೂ ಅದರಲ್ಲಿ ಶಂಕರಮೂರ್ತಿ ಅವರ ಹೆಸರು ಇರಲಿಲ್ಲ.