ಶಿವಮೊಗ್ಗ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಗುರುವಾರ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ವಿಶ್ವ ವಿಖ್ಯಾತ ಜೋಗ ಜಲಪಾತಕ್ಕೆ ಭೇಟಿ ನೀಡಿ, ಜಲಪಾತದ ಧುಮ್ಮಿಕ್ಕುವ ವೈಭವದ ದೃಶ್ಯವನ್ನು ಕಣ್ತುಂಬಿಕೊಂಡರು.
ಜೋಗ ಜಲಪಾತ, ಶರಾವತಿ ಕಣಿವೆ ಬಗ್ಗೆ ರಾಜ್ಯಪಾಲರು ಮಾಹಿತಿ ಪಡೆದುಕೊಂಡರು. ರಾಜ್ಯಪಾಲರಿಗೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಎಸ್ಪಿ ಡಾ. ಸುಮನ್ ಡಿ ಪನ್ನೇಕರ್, ಕುಮುಟಾ ಎಸಿ ರಾಹುಲ್ ಪಾಂಡೆ ಜೋಗದ ಮಾಹಿತಿ ನೀಡಿದರು.
ಇದನ್ನೂ ಓದಿ:ಕೆಂಪು ಅಣಬೆಯ ನೆನಪು…ಪ್ರಕೃತಿ ಸೌಂದರ್ಯದ ಬೊಳ್ಳೆ ಜಲಪಾತದ ಪಯಣ
ರಾಜ್ಯಪಾಲರಾದ ಥಾವರ್ ಛಂದ್ ಗೆಹ್ಲೋಟ್ ಅವರು ಬುಧವಾರದಿಂದ ಶಿವಮೊಗ್ಗ ಜಿಲ್ಲಾ ಪ್ರವಾಸದಲ್ಲಿದ್ದಾರೆ. ಬುಧವಾರ ಪೆಸಿಟ್ ಕಾಲೇಜು ಹಾಗೂ ಶಿವಮೊಗ್ಗದ ಹುಲಿ-ಸಿಂಹಧಾಮಕ್ಕೆ ಭೇಟಿ ನೀಡಿದ್ದರು. ರಾತ್ರಿ ಜೋಗದ ಬ್ರಿಟಿಷ್ ಬಂಗ್ಲೋ ದಲ್ಲಿ ವಾಸ್ತವ್ಯ ಹೂಡಿದ್ದರು.
ಇದನ್ನೂ ಓದಿ:ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವೆ: ಸಚಿವ ಪ್ರಭು ಚವ್ಹಾಣ