Advertisement

Governer Procicution: ರಾಜ್ಯಪಾಲರನ್ನು “ಕೇಂದ್ರಪಾಲ’ ಎನ್ನುವುದು ಸೂಕ್ತ: ಹಂಸಲೇಖ

03:08 AM Aug 25, 2024 | Team Udayavani |

ಮೈಸೂರು: ಕೇಂದ್ರ ಸರ್ಕಾರದ ಅಣತಿಯಂತೆ ಕರ್ನಾಟಕ ರಾಜ್ಯಪಾಲರು ನಡೆದುಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯಪಾಲರನ್ನು “ಕೇಂದ್ರಪಾಲ’ ಎಂದು ಕರೆಯುವುದು ಸೂಕ್ತ. ನಮಗೆ ಇಂತಹ ‘ಕೇಂದ್ರಪಾಲ’ರ ಅವಶ್ಯಕತೆ ಇಲ್ಲ ಎಂದು ಸಂಗೀತ ನಿರ್ದೇಶಕ ಹಂಸಲೇಖ ಅಭಿಪ್ರಾಯಪಟ್ಟರು.

Advertisement

ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಖಂಡಿಸಿ ಕರ್ನಾಟಕ ಜನರಂಗ ಸಂಸ್ಥೆ ವತಿಯಿಂದ ನಗರದ ಚಿಕ್ಕಗಡಿಯಾರ ವೃತ್ತ ಬಳಿ ಶನಿವಾರ ಹಮ್ಮಿಕೊಂಡಿದ್ದ ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ನಂತರ ರಾಜ್ಯಪಾಲರಿಗೆ ಜೆಡ್‌ ಶ್ರೇಣಿ ಭದ್ರತೆ ನೀಡಲಾಗಿದೆ. ನಿಜವಾಗಿಯೂ ಭದ್ರತೆ ನೀಡಬೇಕಾಗಿರುವುದು ರಾಜ್ಯಪಾಲರಿಗೆ ಅಲ್ಲ, ಸಂವಿಧಾನಕ್ಕೆ. ಸಂವಿಧಾನ ಇರುವುದು ನಿರ್ಬಂಧಿಸಲು ಅಲ್ಲ. ನಿರ್ಮಿಸಲು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಸಿದ್ದರಾಮಯ್ಯ ನಿನ್ನೆ ಮೊನ್ನೆ ಹುಟ್ಟಿದ ಪುಡಾರಿ ರಾಜಕಾರಣಿ ಅಲ್ಲ. ಅವರು ಬಡವರ ಪರವಾಗಿ ಧ್ವನಿ ಎತ್ತುತ್ತಾ ಕನ್ನಡ ನನ್ನ ಉಸಿರು ಎಂದು ಬೆಳೆದ ರಾಜಕಾರಣಿ. ಅವರನ್ನು ಅಧಿಕಾರದಿಂದ ಕೆಳಗಿಳಿಸಿದರೆ ಅವರಂತಹ ತೂಕದ ವ್ಯಕ್ತಿ  ಮತ್ತೊಬ್ಬರು ಎಲ್ಲಿದ್ದಾರೆ? ಅಂತಹವರು ಸಿಗುವುದು ಕಷ್ಟ. ಹಾಗಾಗಿ ರಾಜ್ಯಪಾಲರ ನಡೆ ವಿರುದ್ಧ ಹೋರಾಟದ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನನಗೂ ಯಾವುದೇ ಸಂಬಂಧ ಹಾಗೂ ಆತ್ಮೀಯತೆ ಇಲ್ಲ. ಹಾಗಿದ್ದರೂ ಅವರು ನನಗೆ ಕಳೆದ ಬಾರಿ ದಸರಾ ಉದ್ಘಾಟನೆಗೆ ಆಹ್ವಾನ ನೀಡಿದ್ದರು. ಅಂತಹ ಸಹೃದಯ ಹಾಗೂ ಸಶಕ್ತ ನಾಯಕರ ವಿರುದ್ಧ ಸಣ್ಣಪುಟ್ಟ ಕೆಲಸಕ್ಕೆ ಬಾರದ ಜನರು ಮಾತನಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next