Advertisement
ಗುಡ್ಡದರಂಗವ್ವನಹಳ್ಳಿ ಗ್ರಾಮದಲ್ಲಿ ರೈತಸಂಘದ ಗ್ರಾಮ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ಕಳೆದ 20 ವರ್ಷಗಳಿಂದೀಚೆಗೆ 3 ಲಕ್ಷಕ್ಕೂ ಅಧಿಕ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದಕ್ಕೆ ಕಾರಣಗಳು ಒಂದರೆಡಲ್ಲ. ಕೇಂದ್ರ ಸರ್ಕಾರ ವಿಶ್ವ ವಾಣಿಜ್ಯ ಸಂಸ್ಥೆಯೊಂದಿಗೆ ಮಾಡಿಕೊಂಡ ವ್ಯಾಪಾರದ ಒಪ್ಪಂದದ ಕೃಷಿ ಉತ್ಪನ್ನಗಳಿಗೂ ಹಾಗೂ ಕೈಗಾರಿಕೆಯ ಉತ್ಪನ್ನಗಳಿಗೂ ಇರುವ ಬೆಲೆ ವ್ಯತ್ಯಾಸ. ಬೆಳೆ ಬೆಳೆಯಲು ನೀರು ಮುಂತಾದ ಮೂಲ ಸೌಕರ್ಯ, ಮಾರುಕಟ್ಟೆಯಲ್ಲಿ ಬೆಲೆ ಭದ್ರತೆ ಇಲ್ಲದಾಗಿದೆ ಎಂದರು.
ದುಡಿದ ರೈತ ಹೆಚ್ಚೆಚ್ಚು ಸಾಲಗಾರನಾಗುತ್ತಿದ್ದಾನೆ. ರೈತ ಬೆಳೆದ ಎಲ್ಲ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಕೊಂಡು ಉದ್ದಿಮೆದಾರರು ಶ್ರೀಮಂತಿಕೆಯಲ್ಲಿ ಬೀಗುತ್ತಿದ್ದಾರೆ. ಕೃಷಿ ಉಳಿಸುವ ಯಾವುದೇ ಆಲೋಚನೆಗಳು ಸರ್ಕಾರಗಳಿಗಿಲ್ಲ ಎಂದು ಹೇಳಿದರು. ಭದ್ರಾ ಮೇಲ್ದಂಡೆ ಒಳಗೊಂಡತೆ ಎಲ್ಲಾ ಮೂಲಗಳನ್ನು ಬಳಸಿ ಎಲ್ಲಾ ಗ್ರಾಮಗಳ ರೈತರ ಜಮೀನಿಗೆ ನೀರು ಹಾಯಿಸಲು ಸಮಗ್ರ ನೀರಾವರಿ ಪೂರೈಸಬೇಕು ಎಂದು ಒತ್ತಾಯಿಸಿದರು. ಪಟೇಲ್ ಚಂದ್ರಶೇಖರಪ್ಪ, ಹೊನ್ನೂರು ಮುನಿಯಪ್ಪ, ರಾಜು, ರೆಡ್ಡಿಹಳ್ಳಿ ವೀರಣ್ಣ, ಕಬ್ಬಿಗೆರೆ ನಾಗರಾಜ್, ಮಲ್ಲಿಕಾರ್ಜುನ್, ಡಿ.ಎಸ್.ಹಳ್ಳಿ, ಬಸವನ ಗೌಡ್ರು, ರಾಮರೆಡ್ಡಿ, ಶ್ರೀನಿವಾಸ್ ಸುಲ್ತಾನಿಪುರ, ಬೈಲಪ್ಪ, ಕರಿಸಿದ್ದಯ್ಯ, ಮುರಿಗೇಂದ್ರಯ್ಯ,
ಶಿವುಕುಮಾರ್, ಮಂಜಣ್ಣ ಪ್ರವೀಣ, ಶಿವಕುಮಾರ್, ಮಾರುತಿ, ಮಲ್ಲಿಕಾರ್ಜುನಪ್ಪ, ಪಾತಣ್ಣ, ನಾಗರಾಜ್, ಸುನೀಲ್, ಎಸ್.ಟಿ. ರವಿ, ದರ್ಶನ್ ಕೆ.ಆರ್.ನವೀನ್ ಕುಮಾರ್, ವಿರೂಪಾಕ್ಷಪ್ಪ, ಆಶೋಕರೆಡ್ಡಿ, ರುದ್ರಸ್ವಾಮಿ ಗ್ರಾಮಸ್ಥರು ಇದ್ದರು.