ರಬಕವಿ-ಬನಹಟ್ಟಿ: ಸರ್ಕಾರ ಯಾವುದೆ ಇರಲಿ ನಾಡಿನ ಜನರ ಹಿತರಕ್ಷಣೆಗಾಗಿ ಕಾರ್ಯ ಮಾಡುತ್ತಿವೆ. ಸರ್ಕಾರದ ಯೋಜನೆಗಳ ಸದ್ಬಳಕೆಯಾಗಲಿ. ಸರ್ಕಾರ ಘೋಷಣೆ ಮಾಡಿದಂತೆ ಆದಷ್ಟು ಬೇಗನೆ ನಿರುದ್ಯೋಗ ಯುವಕರಿಗೆ ಸಹಾಯ ಧನ ದೊರೆಯವಂತೆ ಕ್ರಮ ತೆಗೆದುಕೊಳ್ಳಲಿ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಬುಧವಾರ ಇಲ್ಲಿನ ಈಶ್ವರಲಿಂಗ ಮೈದಾನದಲ್ಲಿ ನಡೆದ ಗೃಹ ಲಕ್ಷ್ಮಿ ಯೋಜನೆ ಅಡಿಯಲ್ಲಿಯ ಸೌಲಭ್ಯ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತೀಯ ಜನತಾ ಪಕ್ಷ ಸರ್ಕಾರವಿದ್ದಾಗ ಭಾಗ್ಯ ಲಕ್ಷ್ಮಿ ಯೋಜನೆ, ಸಂಧ್ಯಾ ಸುರಕ್ಷತಾ, ವಿಧವಾ ವೇತನ ಸೇರಿದಂತೆ ಉಳಿದ ಪಿಂಚಣಿ ಸೌಲಭ್ಯಗಳ ಹಣವನ್ನು ಹೆಚ್ಚಿಗೆ ಮಾಡುವುದರ ಜೊತೆಗೆ ಪಿಂಚಣಿ ಸೌಲಭ್ಯಗಳನ್ನು ಮನೆ ಮನೆಗೆ ತಲುಪುವಂತೆ ಮಾಡಿದ್ದರು. ಈಗ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಿಲೆಂಡರ್ ದರವನ್ನು ರೂ. ೨೦೦ ಕಡಿಮೆ ಮಾಡುವುದರ ಮೂಲಕ ಕುಟುಂಬಗಳಿಗೆ ಮತ್ತಷ್ಟು ಅನುಕೂಲ ಮಾಡಿದ್ದಾರೆ.
ಕ್ಷೇತ್ರದ ರಬಕವಿ ಬನಹಟ್ಟಿ ನಗರದ ಐದು, ಮಹಾಲಿಂಗಪುರದಲ್ಲಿ ಮೂರು, ತೇರದಾಳ ಪಟ್ಟಣದಲ್ಲಿ ಮೂರು ಮತ್ತು ೧೭ ಗ್ರಾಮ ಪಂಚಾಯ್ತಿಗಳ ಕಾರ್ಯವ್ಯಾಪ್ತಿಯಲ್ಲಿ ಯೋಜನೆಯ ಸೌಲಭ್ಯ ವಿತರಣೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಅಧಿಕಾರಿ ಆನಂದ ಪಿ, ಮಾತನಾಡಿ, ರಾಜ್ಯ ಸರ್ಕಾರ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಈ ಯೋಜನೆಯನ್ನು ಜಾರಿ ಮಾಡಿದೆ. ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಲಿ ಎಂದರು. ನೋಡಲ್ ಅಧಿಕಾರಿ ಅನಿಲ ಬಗತಿ ಇದ್ದರು.
ತಹಶೀಲ್ದಾರ್ ಎಸ್.ಬಿ.ಕಾಂಬಳೆ, ಶಿರಸ್ತೆದಾರ ಎಸ್. ಎಲ್ ಕಾಗಿಯವರ, ನಗರಸಭೆಯ ಸದಸ್ಯರಾದ ಸಂಜಯ ತೆಗ್ಗಿ, ಶ್ರೀಶೈಲ ಬೀಳಗಿ, ಪ್ರಭಾಕರ ಮುಳದೆ, ಯುನಿಸ್ ಚೌಗಲಾ, ವಿದ್ಯಾ ಧಬಾಡಿ, ಗೌರಿ ಮಿಳ್ಳಿ, ಶಿವಾನಂದ ಬುದ್ನಿ, ರಾಜು ಶಾಸ್ತ್ರಿಗೊಲ್ಲರ, ಪೌರಾಯುಕ್ತ ಜಗದೀಶ ಈಟಿ, ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಇದ್ದರು.
ಇದನ್ನೂ ಓದಿ:
Police ಠಾಣೆಯಲ್ಲಿ ರಾಖಿ ಕಟ್ಟಿ ಶುಭ ಕೋರಿದ ಮಹಿಳಾ ಪೊಲೀಸರು