Advertisement
ವಿದೇಶಿ ವಿವಿಗಳು ರಾಜ್ಯದಲ್ಲಿ ತಮ್ಮ ಪ್ರತ್ಯೇಕ ಕ್ಯಾಂಪಸ್ ತೆರೆಯುವುದರ ಬದಲಾಗಿ ನಮ್ಮಲ್ಲಿ ಈಗಿರುವ ವಿವಿಗಳ ಜೊತೆ ಸಹಭಾಗಿತ್ವ ತೋರಿ ಕೆಲಸ ನಿರ್ವಹಿಸಿದರೆ ಉತ್ತಮ ಎಂಬುದು ರಾಜ್ಯ ಸರ್ಕಾರದ ಅಭಿಪ್ರಾಯ.
Related Articles
Advertisement
ರಾಜ್ಯದಲ್ಲಿ ಸರ್ಕಾರಿ, ಖಾಸಗಿ, ಡೀಮ್ಡ್, ಕೇಂದ್ರಿಯ ವಿವಿಗಳಿವೆ. ಮತ್ತೆ ವಿದೇಶಿ ವಿವಿಗಳಿಗೆ ಅವಕಾಶ ನೀಡುವುದಕ್ಕಿಂತ ಇರುವ ವಿವಿಗಳನ್ನೇ ಸದೃಢಗೊಳಿಸುವುದು ರಾಜ್ಯದ ಶೈಕ್ಷಣಿಕ ಹಿತದೃಷ್ಟಿಯಿಂದ ಉತ್ತಮ ಎಂಬ ಅಭಿಪ್ರಾಯ ರಾಜ್ಯ ಸರ್ಕಾರದ್ದು.
ಈ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್‌ನ ಎಂಟು ವಿವಿಗಳು ರಾಜ್ಯದ ಹತ್ತು ವಿವಿಗಳ ಜತೆ ಸಹಭಾಗೀದಾರಿಕೆ ಒಪ್ಪಂದ ನಡೆಸುವಂತೆ ಉನ್ನತ ಶಿಕ್ಷಣ ಇಲಾಖೆ ಹೆಚ್ಚಿನ ಮುತುವರ್ಜಿ ವಹಿಸಿತ್ತು.
ಯಾವ್ಯಾವ ವಿವಿ ಆಸಕ್ತಿ?ಆಸ್ಟ್ರೇಲಿಯಾದ ವೆಸ್ಟರ್ನ್ ಸಿಡ್ನಿ ವಿಶ್ವವಿದ್ಯಾಲಯ ಬೆಂಗಳೂರಿನಲ್ಲಿ ಕೃಷಿ ವಿಜ್ಞಾನಕ್ಕೆ ಮೀಸಲಾದ ಶಿಕ್ಷಣ ಸಂಸ್ಥೆ ಆರಂಭಿಸಲು ಉತ್ಸುಕವಾಗಿದೆ. ಉನ್ನತ ಶಿಕ್ಷಣ ಇಲಾಖೆ ಜತೆ ಒಂದು ಸುತ್ತಿನ ಮಾತುಕತೆಯು ನಡೆಸಿದ್ದು ಬೆಂಗಳೂರಿನಲ್ಲಿ ತನ್ನ ಕ್ಯಾಂಪಸ್ ತೆರೆಯಲು ಐದು ಎಕರೆ ಜಾಗಕ್ಕೆ ಅದು ಹುಡುಕುತ್ತಿದೆ. ಲೆಕ್ಕಚಾರ ಫಲಿಸಿದರೆ 2025ಕ್ಕೆ ಮೊದಲ ಬ್ಯಾಚ್ ಆರಂಭವಾಗಲಿದೆ. ಇದರ ಜತೆಗೆ ಆಸ್ಟ್ರೇಲಿಯದ ಜೇಮ್ಸ್ ಕುಕ್ ವಿವಿ, ಗ್ರಿಫಿತ್ ವಿವಿ, ಕ್ಯಾನ್‌ಬೆರಾ ವಿವಿ, ಲಾ ಟ್ರೊಬೆ ವಿವಿ ಮತ್ತು ಫ್ಲಿಂಡರ್ ವಿವಿಗಳು ಒಕ್ಕೂಟವೊಂದನ್ನು ರೂಪಿಸಿಕೊಂಡು ಭಾರತದಲ್ಲಿ ತಮ್ಮ ಕ್ಯಾಂಪಸ್ ತೆರೆಯುವ ಒಲವು ವ್ಯಕ್ತಪಡಿಸಿದ್ದು ರಾಜ್ಯದತ್ತ ಹೆಚ್ಚಿನ ಆಸಕ್ತಿ ತೋರಿವೆ ಎಂದು ತಿಳಿದು ಬಂದಿದೆ. ವಿದೇಶಿ ವಿವಿಗಳು ತಮ್ಮದೆ ಪ್ರತ್ಯೇಕ ವಿವಿ ತೆರೆಯುವುದಕ್ಕಿಂತ ನಮ್ಮಲ್ಲಿರುವ ವಿವಿಗಳ ಜೊತೆ ಕೈಜೋಡಿಸಲು ನಾವು ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ.
–ಡಾ. ಎಂ. ಸಿ. ಸುಧಾಕರ್, ಉನ್ನತ ಶಿಕ್ಷಣ ಸಚಿವ -ರಾಕೇಶ್ ಎನ್.ಎಸ್.