Advertisement
ಬುಧವಾರ ನಡೆದ ರಾಜ್ಯ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಂಡಿದ್ದು, ನೇಮಕಾತಿ ನಿರೀಕ್ಷೆಯಲ್ಲಿದ್ದ 362 ಅಭ್ಯರ್ಥಿಗಳು ನಿಟ್ಟು ಸಿರು ಬಿಡುವಂತಾಗಿದೆ. ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯ ಚಂದ್ರ, 2011ರ 362 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ಸಂಬಂಧ ಕೆಎಟಿ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸದಿರಲು ಸಂಪುಟ ತೀರ್ಮಾನಿಸಿದೆ. ಆದರೆ ಬೇರೆ ಅಭ್ಯರ್ಥಿಗಳು ಬೇಕಾದರೆ ಮೇಲ್ಮನವಿ ಸಲ್ಲಿಸಬಹುದು ಎಂದು ಅವರು ಸ್ಪಷ್ಟಪಡಿಸಿದರು. ಸಂಪುಟದಲ್ಲಿ ಈ ಕುರಿತು ಸುದೀರ್ಘ ಚರ್ಚೆ ನಡೆದು ಸಿಐಡಿ ತನಿಖೆ, ಕಾನೂನು ಇಲಾಖೆ ಅಭಿಪ್ರಾಯ, ನೇಮಕಗೊಂಡ ಅಭ್ಯರ್ಥಿಗಳ ಬಗ್ಗೆ ಮನವಿ, ಖಾಲಿ ಹುದ್ದೆ ಭರ್ತಿಯ ಅನಿವಾರ್ಯ ಕುರಿತೂ ಸಮಾಲೋಚನೆ ನಡೆಸಿ ಈ ತೀರ್ಮಾನಕ್ಕೆ ಬರ ಲಾಗಿದೆ. 362 ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ತತ್‌ಕ್ಷಣದಿಂದಲೇ ಪ್ರಾರಂಭವಾಗಲಿದೆ ಎಂದು ತಿಳಿಸಿದರು.
ಪ್ರೊಬೆಷನರಿ ಹುದ್ದೆಗಳ ನೇಮಕಾತಿ ವಿಚಾರದಲ್ಲಿ ರಾಜ್ಯ ಸರಕಾರ ಯೂ ಟರ್ನ್ ಹೊಡೆದಿದೆ. ಈ ದ್ವಂದ್ವ ನೀತಿಯ ಬಗ್ಗೆ ಸರಕಾರವೇ ಉತ್ತರಿಸಬೇಕು. ಅವರಿಗೆ ನೇಮಕಾತಿ ಆದೇಶ ನೀಡಬೇಕಿದ್ದರೆ, 362 ಜನರ ನೇಮಕಾತಿ ಸರಿಯಿಲ್ಲ ಎಂದು 2011 ರ ಅಧಿಸೂಚನೆಯನ್ನು ವಾಪಸ್ ಪಡೆಯುವ ಅಗತ್ಯವೇನಿತ್ತು. ಈಗ ತೆಗೆದುಕೊಂಡಿರುವ ತೀರ್ಮಾನದ ಬಗ್ಗೆಯೂ ಸಾರ್ವಜನಿಕರಲ್ಲಿ ಸಾಕಷ್ಟು ಅನುಮಾನಗಳು ಮೂಡಿವೆ.
ಸುರೇಶ್‌ಕುಮಾರ್, ಬಿಜೆಪಿ ವಕ್ತಾರ