Advertisement

“ವಿದ್ಯುತ್‌ ಹೆದ್ದಾರಿ’ಗಳ ಅಭಿವೃದ್ಧಿಗೆ ಯೋಜನೆ: ಸಚಿವ ನಿತಿನ್‌ ಗಡ್ಕರಿ

08:56 PM Sep 12, 2022 | Team Udayavani |

ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳನ್ನು “ವಿದ್ಯುತ್‌ ಹೆದ್ದಾರಿ’ಗಳಾಗಿ ಅಭಿವೃದ್ಧಿಪಡಿಸಲು ಯೋಜಿಸಲಾಗುತ್ತಿದೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹೇಳಿದರು.

Advertisement

ಈ ಸೌಲಭ್ಯದಿಂದ ಸೌರ ಶಕ್ತಿಯಿಂದ ಉತ್ಪತ್ತಿಯಾಗುವ ವಿದ್ಯುತ್‌ನಿಂದ ಚಲಿಸುತ್ತಿರುವಾಗಲೇ ಭಾರೀ ಟ್ರಕ್‌ಗಳು ಮತ್ತು ಬಸ್‌ಗಳನ್ನು ಚಾರ್ಜ್‌ ಮಾಡಬಹುದಾಗಿದೆ.

ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ವಿದ್ಯುತ್‌ ಆಧಾರದಲ್ಲಿ ಭಾರತೀಯ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿಸಬೇಕೆಂಬುದು ಕೇಂದ್ರ ಸರ್ಕಾರದ ಆಶಯ,’ ಎಂದರು.

“ವಿದ್ಯುತ್‌ ವಾಹನಗಳಿಗೆ ಸೌರ ಮತ್ತು ಪವನ ಶಕ್ತಿ ಆಧಾರಿತ ಚಾರ್ಜಿಂಗ್‌ ಕಾರ್ಯವಿಧಾನಗಳನ್ನು ಸರ್ಕಾರ ಪ್ರೋತ್ಸಾಹಿಸುತ್ತದೆ. “ವಿದ್ಯುತ್‌ ಹೆದ್ದಾರಿ’ಗಳು ಓವರ್‌ಹೆಡ್‌ ಪವರ್‌ ಲೈನ್‌ಗಳನ್ನು ಒಳಗೊಂಡಂತೆ ರಸ್ತೆ ಮೇಲೆ ಸಂಚರಿಸುವ ವಾಹನಗಳಿಗೆ ವಿದ್ಯುತ್‌ ಸರಬರಾಜು ಮಾಡುತ್ತದೆ. ಟೋಲ್‌ ಪ್ಲಾಜಾಗಳನ್ನು ಸೌರಶಕ್ತಿಯಿಂದ ನಡೆಸುವ ನಿಟ್ಟಿನಲ್ಲಿ ಪ್ರೋತ್ಸಾಹಿಸುತ್ತದೆ,’ ಎಂದು ಹೇಳಿದರು.

“ಹೆದ್ದಾರಿ ಸಚಿವಾಲಯದಿಂದ 26 ಗ್ರೀನ್‌ಫೀಲ್ಡ್‌ ಎಕ್ಸ್‌ಪ್ರೆಸ್‌ವೇ ಗಳನ್ನು ನಿರ್ಮಿಸಲಾಗುತ್ತಿದೆ. ಪ್ರಧಾನಮಂತ್ರಿ ಗತಿಶಕ್ತಿ ಯೋಜನೆ ಆರಂಭದಿಂದಾಗಿ ಯೋಜನೆಗಳಿಗೆ ಶೀಘ್ರ ಅನುಮತಿ ದೊರೆಯುತ್ತದೆ ಹಾಗೂ ಲಾಜಿಸ್ಟಿಕ್ಸ್‌ ವೆಚ್ಚವನ್ನು ಕಡಿತಗೊಳಿಸುತ್ತದೆ,” ಎಂದು ಗಡ್ಕರಿ ವಿವರಿಸಿದರು.

Advertisement

ಭಾರತದ ಲಾಜಿಸ್ಟಿಕ್ಸ್‌, ರೋಪ್‌ವೇಗಳು ಮತ್ತು ಕೇಬಲ್‌ ಕಾರ್‌ಗಳ ಕ್ಷೇತ್ರದಲ್ಲಿ ಹೂಡಿಕೆ ಮಾಡುವಂತೆ ಅಮೆರಿಕದ ಖಾಸಗಿ ಹೂಡಿಕೆದಾರರಿಗೆ ಇದೇ ವೇಳೆ ಸಚಿವರು ಮುಕ್ತ ಆಹ್ವಾನ ನೀಡಿದರು.

“ರಾಷ್ಟ್ರೀಯ ಹೆದ್ದಾರಿಯ ಉದ್ದಕ್ಕೂ ಮೂರು ಕೋಟಿ ಗಿಡಗಳನ್ನು ನೆಡಲಾಗುತ್ತದೆ. ಅಲ್ಲದೇ ಹೆದ್ದಾರಿ ನಿರ್ಮಾಣ ಮತ್ತು ವಿಸ್ತರಣೆ ಸಂದರ್ಭದಲ್ಲಿ ಮರಗಳನ್ನು ಸ್ಥಳಾಂತರಿಸಲಾಗುತ್ತದೆ. ಇದುವರೆಗೂ ಈ ರೀತಿಯ 27,000 ಮರಗಳನ್ನು ಸ್ಥಳಾಂತರಿಸಲಾಗಿದೆ. ಮರಗಳನ್ನು ಕಡಿಯುವುದು ಮತ್ತು ಸ್ಥಳಾಂತರಕ್ಕೆ ಸರಕಾರ “ಟ್ರೀ ಬ್ಯಾಂಕ್‌’ ಎಂಬ ಹೊಸ ನೀತಿಯನ್ನು ರೂಪಿಸುತ್ತಿದೆ,’ ಎಂದು ನಿತಿನ್‌ ಗಡ್ಕರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next