Advertisement

ತ್ರಿವಳಿ ತಲಾಖ್‌ ಜಾರಿಗೆ ಸುಗ್ರೀವಾಜ್ಞೆ ಜಾರಿ?

06:00 AM May 03, 2018 | Team Udayavani |

ನವದೆಹಲಿ: ಮುಸ್ಲಿಂ ಸಮುದಾಯದಲ್ಲಿನ ತ್ರಿವಳಿ ತಲಾಖ್‌ ನಿಷೇಧಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಶೀಘ್ರದಲ್ಲಿಯೇ ಸುಗ್ರೀವಾಜ್ಞೆ ಹೊರಡಿಸಲಿದೆ. ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕುಗಳ ವಿಧೇಯಕಕ್ಕೆ ಲೋಕಸಭೆ ಈಗಾಗಲೇ ಅಂಗೀಕಾರ ನೀಡಿದೆ. ಆದರೆ ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರಕ್ಕೆ ಬಹುಮತವಿಲ್ಲ. ಹೀಗಾಗಿ ಕೇಂದ್ರ ಸುಗ್ರೀವಾಜ್ಞೆ ದಾರಿ ಮೂಲಕ ಕಾನೂನು ಜಾರಿಗೊಳಿಸಲು ಮುಂದಾಗಿದೆ. 2017ರ ಆ.22ರಂದು ಸುಪ್ರೀಂಕೋರ್ಟ್‌ ತ್ರಿವಳಿ ತಲಾಖ್‌ ನಿಷೇಧಿಸಿ ತೀರ್ಪು ನೀಡಿತ್ತು.

Advertisement

ಮುಸ್ಲಿಂ ಸಮುದಾಯದ ಪುರುಷರು ಮೂರು ಬಾರಿ ತಲಾಖ್‌ ಹೇಳುವ ಮೂಲಕ ಪತ್ನಿಯರಿಗೆ ವಿಚ್ಛೇದನ ನೀಡಬಾರದು. ತಲಾಖ್‌ ನೀಡುವಿಕೆಯನ್ನು ಗಂಭೀರ ಸ್ವರೂಪದ ಅಪರಾಧ ಎಂದು ಪರಿಗಣಿಸಿ, ಅಂಥವರಿಗೆ ಜಾಮೀನು ಕೂಡ ನೀಡಬಾರದು ಹಾಗೂ  ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ಒದಗಿಸಲು ಕಾನೂನಿನಲ್ಲಿ ಅವಕಾಶ ಉಂಟು. ಕೋರ್ಟ್‌ ಮೊರೆ ಹೋಗಿ ಪತಿಯಿಂದ ಪರಿಹಾರ ಕೋರುವ ಅವಕಾಶವೂ ಪ್ರಸ್ತಾವಿತ ಸುಗ್ರೀವಾಜ್ಞೆಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next