ಕಲಬುರಗಿ: ಮಾರುಕಟ್ಟೆ ಪ್ರವೇಶಿಸಿ ಕಡಲೆ ಖರೀದಿಸಲು ಸರ್ಕಾರ ಮುಂದಾಗಿದೆ. ಮಾರುಕಟ್ಟೆಯಲ್ಲಿ ಕಡಲೆ ಬೆಲೆಯು ಬೆಂಬಲ ಬೆಲೆಗಿಂತ ಕುಸಿತವಾಗಿದ್ದರಿಂದ ಸರ್ಕಾರ ಖರೀದಿ ಕೇಂದ್ರ ಸ್ಥಾಪಿಸಿ, ರೈತರಿಂದ ಕಡಲೆ ಖರೀದಿಸಲು ಮುಂದಾಗಿದೆಯಲ್ಲದೇ ಖರೀದಿ ಕೇಂದ್ರಗಳನ್ನು ಸ್ಥಾಪಿಸಿ ಆದೇಶ ಹೊರಡಿಸಲಾಗಿದೆ.
ಕಡಲೆ ಕ್ವಿಂಟಾಲ್ ಗೆ 5230 ರೂ. ದರದಲ್ಲಿ ಖರೀದಿ ಮಾಡಲು ಹಾಗೂ ಪ್ರತಿ ರೈತನಿಂದ ಎಕರೆಗೆ 4 ಕ್ವಿಂಟಾಲ್ ದಂತೆ ಗರಿಷ್ಟ 15 ಕ್ವಿಂಟಾಲ್ ವರೆಗೂ ಖರೀದಿಸಲು ನಿರ್ಧರಿಸಲಾಗಿದೆ.
ಉದಯವಾಣಿ ವರದಿ ಫಲಶ್ರುತಿ: ಕಡಲೆ ಬೆಲೆಯು ಮಾರುಕಟ್ಟೆಯಲ್ಲಿ ಬೆಂಬಲ ಬೆಲೆಗಿಂತ ಕಡಿಮೆಯಾಗಿದೆ. ಕ್ವಿಂಟಾಲ್ ಗೆ 4400- 4500 ರೂ.ಗೆ ಇಳಿದಿದೆ. ಇದರಿಂದ ರೈತರಿಗೆ ಕ್ವಿಂಟಾಲ್ ದಿಂದ ಸಾವಿರ ರೂ ಹಾನಿಯಾಗುತ್ತಿದೆ. ಹೀಗಾಗಿ ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿಗೆ ಮುಂದಾಗದ ಸರಕಾರ ಎಂಬುದಾಗಿ ಉದಯವಾಣಿ ಯಲ್ಲಿ ಕಳೆದ ಫೆ. 7ರಂದು ವಿಶೇಷ ವರದಿ ಪ್ರಕಟಿಸಲಾಗಿತ್ತು.
ಇದನ್ನೂ ಓದಿ:ಎನ್‌ಎಸ್ಎಸ್ ಸ್ವಯಂಸೇವಕರನ್ನು 10 ಲಕ್ಷಕ್ಕೆ ಹೆಚ್ಚಿಸುವ ಗುರಿ: ಸಚಿವ ಡಾ.ನಾರಾಯಣಗೌಡ
ಬೆಂಬಲ ಬೆಲೆಯಲ್ಲಿ ಕಡಲೆ ಮಾರಾಟ ಮಾಡಲು ರೈತರು ಇಂದಿನಿಂದ 45 ದಿನಗಳ ಕಾಲ ನೊಂದಣಿ ಜತೆಗೆ 90 ದಿನಗಳವರೆಗೂ ಕಾಲಾವಧಿ ನಿಗದಿ ಮಾಡಲಾಗಿದೆ. ಹೀಗಾಗಿ ರೈತರು ಈ ಸದುಪಯೋಗಪಡೆದುಕೊಳ್ಳಬೇಕೆಂದು ಕೋರಲಾಗಿದೆ.