Advertisement

ತೈಲೋತ್ಪನ್ನ ಶೀಘ್ರ 5 ಇಳಿಕೆ?

03:50 AM Jun 01, 2018 | Karthik A |

ಹೊಸದಿಲ್ಲಿ: ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯಿಂದ ಕಂಗೆಟ್ಟಿದ್ದೀರಾ? ಹಾಗಿದ್ದರೆ ಇನ್ನು ಕೆಲವೇ ದಿನಗಳಲ್ಲಿ ರೂ.4 ರಿಂದ ರೂ.5ರ ವರೆಗೆ ಇಳಿಕೆಯಾಗುವ ಸಾಧ್ಯತೆ ಇದೆ. ಅಬಕಾರಿ ಸುಂಕ, ಮೌಲ್ಯ ವರ್ಧಿತ ತೆರಿಗೆ (ವ್ಯಾಟ್‌), ತೈಲ ಕಂಪೆನಿಗಳಿಗೆ ನೀಡಲಾಗುವ ಕಮಿಷನ್‌ ಪ್ರಮಾಣದಲ್ಲಿ ತಗ್ಗಿಸುವ ಇರಾದೆಯನ್ನು ಕೇಂದ್ರ ಸರಕಾರ ಹೊಂದಿದೆ. ಈ ಬಗ್ಗೆ ‘ದ ಹಿಂದುಸ್ತಾನ್‌ ಟೈಮ್ಸ್‌’ ವರದಿ ಮಾಡಿದ್ದು, ದಿನದಿಂದ ದಿನಕ್ಕೆ ತುಟ್ಟಿಯಾಗುತ್ತಿರುವ ತೈಲ ಬೆಲೆಯಿಂದಾಗಿ ಕೇಂದ್ರ ಸರಕಾರವೂ ಕಳವಳಗೊಂಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Advertisement

ಕೇಂದ್ರ ಸರಕಾರದ ಜತೆಗೆ ರಾಜ್ಯ ಸರಕಾರಗಳು ಮತ್ತು ತೈಲೋತ್ಪನ್ನಗಳನ್ನು ಮಾರುಕಟ್ಟೆಗೆ ವಿತರಿಸುವವರೂ ತಮ್ಮ ಹೊಣೆ ನಿಭಾಯಿಸಬೇಕು ಎಂದಿದ್ದಾರೆ. ಉದಾಹರಣೆಗೆ ಹೇಳುವುದಿದ್ದರೆ ಪ್ರತಿಯೊಂದು ರಾಜ್ಯದಲ್ಲಿಯೂ ಭಿನ್ನ ರೀತಿಯ ತೆರಿಗೆ ವ್ಯವಸ್ಥೆ ಇದೆ. ದಿಲ್ಲಿಯಲ್ಲಿ ಪೆಟ್ರೋಲ್‌ ಮೇಲೆ ಕೇಂದ್ರ ತೆರಿಗೆ ಪ್ರಮಾಣ ಶೇ.25, ರಾಜ್ಯ ತೆರಿಗೆ ಪ್ರಮಾಣ ಶೇ.21.2 ಮತ್ತು ಡೀಲರ್‌ ಮಾರ್ಜಿನ್‌ ಶೇ.4.7 ಇದೆ.

ಪೆಟ್ರೋಲ್‌ 7 ಪೈಸೆ ಇಳಿಕೆ: ಈ ನಡುವೆ, ಬುಧವಾರ 1 ಪೈಸೆ ಇಳಿಕೆಯಾಗಿದ್ದ ಪ್ರತಿ ಲೀಟರ್‌ ಪೆಟ್ರೋಲ್‌ ದರ ಗುರುವಾರ 7 ಪೈಸೆ ಇಳಿಕೆಯಾಗಿದೆ. ಪ್ರತಿ ಲೀಟರ್‌ ಡೀಸೆಲ್‌ ಮೇಲೆ 5 ಪೈಸೆ ಇಳಿಕೆಯಾಗಿದೆ. ಈ ನಡುವೆ ಕೇರಳದಲ್ಲಿ ಶುಕ್ರವಾರ (ಜೂ.1)ದಿಂದ ಪತ್ರಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ ದರದಲ್ಲಿ 1 ರೂ. ಕಡಿಮೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next