Advertisement
ದರ್ಬೆ ನಿರೀಕ್ಷಣಾ ಮಂದಿರದಲ್ಲಿ ಮಂಗಳವಾರ ದೂರು ಪರಿಶೀಲನೆ ನಡೆಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಸರಕಾರಿ ಜಾಗಗಳಂತೆ ಅರಣ್ಯ ಇಲಾಖೆ ಜಾಗವೂ ಒತ್ತುವರಿಯಾಗಿರುವುದು ಕಳವಳಕಾರಿ. ಸರಕಾರಿ ಯೋಜನೆಗಳನ್ನು ಜಾರಿಗೆ ತರುವುದಾದರೂ ಹೇಗೆ? ಈ ಬಗ್ಗೆಜಿಲ್ಲಾಧಿಕಾರಿ ಮೌನ ವಹಿಸಿರುವುದೇಕೆ ಎಂದು ಪ್ರಶ್ನಿಸಿದರು.
ಮಾತನಾಡಿದ ಆಡಿ, ಮೊಗ್ರು ಗ್ರಾಮದ ಕ್ರಷರ್‌ಗೆ ಖುದ್ದಾಗಿ ಭೇಟಿ ನೀಡಿದ್ದೇನೆ. ಅರಣ್ಯ ಇಲಾಖೆ ಹಾಗೂ ಕಂದಾಯ
ಇಲಾಖೆ, ಕ್ರಷರ್ ನಡೆಯುತ್ತಿದ್ದ ಜಾಗ ಪರಸ್ಪರ ತಮ್ಮದೆಂದು ಹೇಳಿಕೊಳ್ಳುತ್ತಿವೆ. ಈ ಹಿಂದೆ ಭೇಟಿ ನೀಡಿದಾಗ ಜಂಟಿ ಸರ್ವೆ ನಡೆಸಲು ಸೂಚಿಸಿದ್ದೆ. ಆದರೆ ಇದುವರೆಗೆ ಜಂಟಿ ಸರ್ವೆ ನಡೆಸಿ, ಇಲಾಖೆಗಳ ನಡುವಿನ ಗೊಂದಲ ಬಗೆಹರಿಸಿಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬುಧವಾರ ಮಂಗಳೂರಿನಲ್ಲಿ ನಡೆಯುವ ದೂರು ಪರಿಶೀಲನಾ ಸಭೆಯಲ್ಲಿ ಕ್ರಷರ್‌ಗಳ ಬಗ್ಗೆ ವಿಚಾರಣೆ ನಡೆಸಲಾಗುವುದು. ಜಿಲ್ಲಾಧಿಕಾರಿ ಎಲ್ಲ ಮಾಹಿತಿ ನೀಡಬೇಕು ಎಂದು ಸಹಾಯಕ ಆಯುಕ್ತರಿಗೆ ಸೂಚಿಸಿದರು. ಬಜ್ಪೆ ಜಲ್ಲಿ ಕ್ರಷರ್ ಬಗ್ಗೆಯೂ ವಿಚಾರಣೆ ಮಾಡಲಾಗುವುದು, ಕ್ರಷರ್ ಮಾಲಕರು ಸ್ವತಃ ಹಾಜರಿರುವ ಜತೆಗೆ, ವಕೀಲರನ್ನೂ ಕರೆತಂದು ವಾದ ಮಂಡಿಸಬೇಕು ಎಂದು ಸೂಚಿಸಿದರು.
Related Articles
ಒಟ್ಟು 22 ಪ್ರಕರಣಗಳ ವಿಚಾರಣೆ ನಡೆಯಿತು. ವಿಚಾರಣೆ 8ರ ಅಪರ ನಿಬಂಧಕ ಮಹಮ್ಮದ್ ಅಶ್ರಫ್, ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಜಗದೀಶ್, ಪೊಲೀಸ್ ನಿರೀಕ್ಷಕರಾದ ಎಸ್. ವಿಜಯ ಪ್ರಸಾದ್, ಸುಭಾಶ್ಚಂದ್ರ, ಸಿಬಂದಿ
ಶಶಿಧರ್, ಸುರೇಂದ್ರ, ಹರಿಶ್ಚಂದ್ರ, ಪ್ರದೀಪ್, ದೇವಯ್ಯ, ಲೋಕೇಶ್, ರಾಧೇಶ್, ಶಾರ್ಲೆಟ್, ಅಮಿತಾ ಮುಂತಾದವರು ಉಪಸ್ಥಿತರಿದ್ದರು.
Advertisement
ಚಿಕ್ಕಮುಡ್ನೂರಿನ ಎಂ.ಕೆ. ಭಟ್ ಎಂಬವರು ಏಕನಿವೇಶನದ 20 ಸೆಂಟ್ಸ್ ಜಾಗವನ್ನು ಇಬ್ಭಾಗ ಮಾಡಿ ಇಬ್ಬರಿಗೆ ಮಾರಿದ್ದಾರೆ. ಅಲ್ಲಿ ನಿರ್ಮಿಸಿರುವ ಕಟ್ಟಡವೂ ಅಕ್ರಮವಾಗಿದೆ. 20 ದಿನಗಳೊಳಗೆ ಕ್ರಮ ಕೈಗೊಳ್ಳುವಂತೆ ಪೌರಾಯುಕ್ತೆಗೆ ನ್ಯಾ| ಆಡಿ ಸೂಚಿಸಿದರು.
ಉಜಿರೆ ಸಮೀಪ ನಿರ್ಮಿಸಿದ ಜಲ ಶುದ್ಧೀಕರಣ ಘಟಕದ ಸಮಗ್ರ ತನಿಖೆಗೆ ಉಪಲೋಕಾಯುಕ್ತರು ಆದೇಶಿಸಿದರು.ಸಹಾಯಕ ಆಯುಕ್ತ, ತಹಶೀಲ್ದಾರ್ ಮೊದಲಾದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸುವಂತೆ ಸೂಚಿಸಿದರು. ನೀರು ಶುದ್ಧೀಕರಣ ಘಟಕ ನಿರ್ಮಾಣ ಮಾಡಿದ ಬಳಿಕ ಬಾವಿ ನೀರು ಹಾಳಾಗಿದೆ. ಮಾತ್ರವಲ್ಲ ಘಟಕಕ್ಕೆ ನಮ್ಮ ಆಕ್ಷೇಪವೂ ಇತ್ತು ಎಂದು ದೂರುದಾರ ರಂಜನ್ ತಿಳಿಸಿದರು. ಸುಳ್ಯದ ಅಲೆಕ್ಕಾಡಿ ಪ. ಜಾತಿಗೆ ಸೇರಿದ ಮನೆಗಳಿಗೆ ತೆರಳಲು ರಸ್ತೆಯೇ ಇಲ್ಲ. ಕೆಲ ಸಮಯಗಳ ಹಿಂದೆ ರಸ್ತೆಯಿತ್ತು. ಇದೀಗ ಕಾಲುದಾರಿ ಮಾತ್ರವಿದೆ. ಮಕ್ಕಳಿಗೆ, ನಾಗರಿಕರಿಗೆ ಸಮಸ್ಯೆಯಾಗಿದೆ ಎಂದು ದೂರು ನೀಡಲಾಗಿತ್ತು. ಪರಿಶೀಲಿಸಿದ ಉಪಲೋಕಾಯುಕ್ತರು, ಜಾಗ ಬಿಟ್ಟು ಕೊಡಲು ಸ್ಥಳೀಯರಲ್ಲಿ ಪಿಡಿಒ ಮನವಿ ಮಾಡಿಕೊಳ್ಳಬೇಕು. ಆಗದೇ ಇದ್ದರೆ ಭೂ ಸ್ವಾಧೀನಕ್ಕೆ ಬರೆಯಬೇಕು ಎಂದು ಸೂಚಿಸಿದರು. ನೀರು ಬಿಡುವ ವೇಳೆ, ವ್ಯಕ್ತಿಯ ವಿವರ ನೀಡದಿರುವ ಬಗ್ಗೆ ದೂರೊಂದು ಬಂದಿತ್ತು. ಇಂತಹ ಕ್ಷುಲ್ಲಕ ದೂರು ಸಲ್ಲಿಸಲು ಅವಕಾಶ ಏಕೆ ನೀಡಬೇಕಿತ್ತು? ಅಲ್ಲಿಯೇ
ವಿವರ ನೀಡುತ್ತಿದ್ದರೆ ಲೋಕಾಯುಕ್ತಕ್ಕೆ ದೂರು ಬರುತ್ತಲೇ ಇರಲಿಲ್ಲ. ಅಧಿಕಾರಿಗಳು ಅಸಡ್ಡೆ ಮಾಡುತ್ತಿದ್ದಾರೆ ಎಂದು ಉಪ ಲೋಕಾಯುಕ್ತರು ಅಸಹನೆ ವ್ಯಕ್ತಪಡಿಸಿದರು. ಮರುಪರಿಶೀಲನೆ ಮಾಡಿ
ಗಣಿ ಇಲಾಖೆಯ ಅಧಿಕಾರಿಯಿಂದ ಮಾಹಿತಿ ಪಡೆದು ಮಾತನಾಡಿದ ಉಪಲೋಕಾಯುಕ್ತರು, ಜಿಲ್ಲೆ ಯಲ್ಲಿ 84 ಕ್ರಷರ್‌ಗೆ ಅನುಮತಿ ನೀಡಲಾಗಿದೆ. ಮೊಗ್ರು ಕ್ರಷರ್ ಘಟನೆ ಸಾಂಕೇತಿಕ ಅಷ್ಟೇ. ಇಂತಹ ಅದೆಷ್ಟೋ ಕ್ರಷರ್ ಇರಬಹುದು. ಸ್ವಲ್ಪ ಜಾಗ ತೋರಿಸಿ, ಹೆಚ್ಚಿನ ಜಾಗದಲ್ಲಿ ಕ್ರಷರ್ ನಡೆಸುತ್ತಿರಬಹುದು. ಈ ಬಗ್ಗೆ ತನಿಖೆ ನಡೆಸುವ, ಜಿಲ್ಲೆಯ ಎಲ್ಲ ಕ್ರಷರ್‌ಗಳ ಪರವಾನಿಗೆಯನ್ನು ಮರು ಪರಿಶೀಲಿಸುವ ಅಗತ್ಯವಿದೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ದೂರುದಾರ ಕೇಶವ ಅಗರ್ತ ಅವರಿಗೆ ತಿಳಿಸಿದರು.