Advertisement
ಇಲ್ಲಿನ ಶಾಲೆಗೆ ಗ್ರಾಮಸ್ಥರು, ಶಿಕ್ಷಣ ಪ್ರೇಮಿಗಳು, ದಾನಿಗಳೇ ಆಧಾರವಾಗಿದ್ದು, ಶಾಲೆಗೆ ಸುಣ್ಣ ಬಣ್ಣ , ಬಸ್ ವ್ಯವಸ್ಥೆ, ಉತ್ತಮ ಕಟ್ಟಡ ಹೀಗೆ ಸೌಕರ್ಯ ಒದಗಿಸಿ ಕೊಟ್ಟಿದ್ದರಿಂದ ಕಡಿಮೆ ಶುಲ್ಕ, ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಸಿಗುವ ಕಾರಣಕ್ಕೆ ಕೊರೊನಾ ಬಳಿಕ ಹೆಚ್ಚಿನ ದಾಖಲಾತಿ ನಡೆದಿದೆ. 2018ರಲ್ಲಿ ಶಾಲೆಯಲ್ಲಿ ಕೇವಲ 45 ಮಕ್ಕಳಿದ್ದರೆ, 2019ರಲ್ಲಿ 180, 2020ರಲ್ಲಿ 230ಕ್ಕೇರಿತು. ಇದೀಗ ಕೊರೊ ನಾ ಹಾವಳಿಯ ನಡುವೆ 2021ರಲ್ಲಿ 170 ವಿದ್ಯಾರ್ಥಿಗಳು ದಾಖಲಾಗಿದ್ದು, ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 400ರ ಗಡಿ ದಾಟಿದೆ.
Related Articles
Advertisement
ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದ್ದ ಸಂದರ್ಭ 5 ಸರಕಾರಿ ಶಿಕ್ಷಕರು ಇದ್ದರೆ, 4 ಮಂದಿ ಶಿಕ್ಷಕರನ್ನು ಆಡಳಿತ ಮಂಡಳಿ ನೇಮಿಸಿತ್ತು. ಶಾಲೆಯ ಸ್ವತ್ಛತೆ ಮತ್ತಿತರ ಕಾರ್ಯಗಳಿಗಾಗಿ ಇಬ್ಬರು ಸಹಾಯಕರೂ ಇದ್ದಾರೆ. ಅತಿಥಿ ಶಿಕ್ಷಕರ ವೇತನ ಬಟವಾಡೆ, ಸಹಾಯಕರ ನೇಮಕ ಇತ್ಯಾದಿಗಳಿಗೆ ಹೆಚ್ಚಿನ ಅನುದಾನ ಸಂಗ್ರಹಿಸ ಬೇಕಿರುವುದರಿಂದ ಸರಕಾರ ಖಾಯಂ ಶಿಕ್ಷಕರನ್ನು ನೇಮಿಸಿ ಆಡಳಿತ ಮಂಡಳಿಗೆ ನೆರವು ನೀಡಬೇಕಿದೆ. ಈ ಮೂಲಕ ಶಾಲೆಯನ್ನು ಬಲಪಡಿಸಬೇಕಿದೆ.
ಈಗ ಶಾಲೆಯಲ್ಲಿ 10 ತರಗತಿ ಕೊಠಡಿ:
ಗಳಿವೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿ ರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಕೊಠಡಿ ಮತ್ತೂಂದು ಒಂದು ಬೇಡಿಕೆಯಾಗಿದೆ.
ಹೆಚ್ಚುವರಿ ಪಿಠೊಪಕರಣ ಅಗತ್ಯ :
ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರು ವುದರಿಂದ ಮೂಲ ಸೌಕರ್ಯಗಳಲ್ಲಿ ಒಂದಾದ ಬೆಂಚು, ಡೆಸ್ಕ್, ಕುರ್ಚಿ, ಮೇಜು ಇತ್ಯಾದಿಗಳ ಆವಶ್ಯಕತೆಯಿದೆ.
ಸರಕಾರಿ ಶಾಲೆಯತ್ತ ಮಕ್ಕಳು, ಹೆತ್ತವರು ಆಕರ್ಷಿತರಾಗುತ್ತಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ. ಉತ್ತಮ ಸರಕಾರಿ ಶಾಲೆಗಳಲ್ಲಿ ಒಂದಾದ ಮಧ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಊರಿನ ಸುತ್ತಮುತ್ತಲಿನ ಮಕ್ಕಳ ಸೇರ್ಪಡೆ ಹೆಚ್ಚಿರುವುದರಿಂದ ಶಿಕ್ಷಕರ ನೇಮಕಾತಿ ಆಗಬೇಕಿದೆ. ಇದರ ಜತೆಗೆ ಮೂಲಸೌಕರ್ಯಗಳಲ್ಲಿ ಒಂದಾದ ಪೀಠೊಪಕರಣ ವ್ಯವಸ್ಥೆ ಮಾಡಬೇಕಿದೆ. ಕನ್ನಡದ ಜತೆ ಜತೆಗೆ ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಶಿಕ್ಷಣ ನೀಡಲು ಇಲ್ಲಿನ ವಿದ್ಯಾಭಿಮಾನಿಗಳು, ಟ್ರಸ್ಟ್, ಅಡಳಿತ ಮಂಡಳಿ ಆಸಕ್ತಿ ವಹಿಸಿದೆ. ಸರಕಾರವೂ ಮೂಲಸೌಕರ್ಯ ಒದಗಿಸುತ್ತದೆ ಎಂಬ ವಿಶ್ವಾಸವಿದೆ. –ಕುಸುಮಾ, ಪ್ರಭಾರ ಮುಖ್ಯ ಶಿಕ್ಷಕಿ
-ಲಕ್ಷ್ಮೀನಾರಾಯಣ ರಾವ್