Advertisement

ನಿರ್ದಿಷ್ಟ ಔಷಧ ಕೊಟ್ಟಿದ್ದಕ್ಕೆ ವೈದ್ಯರಿಗೆ ಗಿಫ್ಟ್ ಕೊಡುವಂತಿಲ್ಲ

09:30 AM Aug 03, 2017 | Team Udayavani |

ಹೊಸದಿಲ್ಲಿ: ನಿರ್ದಿಷ್ಟ ಔಷಧ ಕಂಪೆನಿಯೊಂದರ ಔಷಧಗಳನ್ನೇ ಬರೆದುಕೊಡುವುದಕ್ಕೆ, ಅದರ ಮಾರಾಟ ಹೆಚ್ಚಳಕ್ಕೆ ನೆರವಾದದ್ದಕ್ಕೆ ಇನ್ನು ವೈದ್ಯರಿಗೆ ಕಂಪೆನಿ ಪ್ರತಿನಿಧಿಗಳು ಯಾವುದೇ ಉಡುಗೊರೆಗಳನ್ನು ಕೊಡುವಂತಿಲ್ಲ ಎಂಬ ಕಾನೂನು ಶೀಘ್ರ ಬರಲಿದೆ. ಈವರೆಗೆ ತಮ್ಮ ಕಂಪೆನಿ ಔಷಧಗಳನ್ನು ವೈದ್ಯರು ಚೀಟಿಯಲ್ಲಿ ಅಥವಾ ಹೆಚ್ಚಾಗಿ ರೋಗಿಗಳಿಗೆ ನೀಡುತ್ತಿದ್ದಲ್ಲಿ ಕಂಪೆನಿಗಳು ಪ್ರತಿನಿಧಿಗಳ ಮೂಲಕ ಉಡುಗೊರೆ, ವಿದೇಶ ಪ್ರವಾಸದ ಟಿಕೆಟ್‌ ಇತ್ಯಾದಿಗಳನ್ನು ನೀಡುವ ಪರಿಪಾಠವಿತ್ತು. ಇಂತಹ ಅನೈತಿಕ ಕ್ರಮದ ವಿರುದ್ಧ ಕಾನೂನು ತರಲು ಕೇಂದ್ರ ಸರಕಾರ ಮುಂದಾಗಿದೆ. ವಿಶ್ವಾದ್ಯಂತ ವೈದ್ಯರಿಗೆ ಹೀಗೆ ಕಂಪೆನಿಗಳು ಉಡುಗೊರೆಯ ಆಮಿಷ ನೀಡುವುದಕ್ಕೆ ಅವಕಾಶವಿಲ್ಲ. ಭಾರತದಲ್ಲೂ ಇದೀಗ ಇಂತಹ ಮಾರ್ಕೆಟಿಂಗ್‌ ತಂತ್ರಗಳ ವಿರುದ್ಧ ಕಾನೂನು ನಿಯಮ ತರಲಾಗುತ್ತಿದೆ. ಕಾನೂನು ಇಲಾಖೆ, ಔಷಧ ಇಲಾಖೆ ಜಂಟಿಯಾಗಿ ನಿಯಮ ರೂಪಿಸುತ್ತಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next