Advertisement
ಸರ್ಕಾರಿ ಶಾಲಾ ಸ್ಥಿತಿಗತಿ ದಯನೀಯ: ತಾಲೂಕಿನಲ್ಲಿ ಜೂನ್‌ನಿಂದ ಆರಂಭಗೊಳ್ಳುವ ಶಾಲೆಗಳಿಗೆ ಈಗಾಗಲೇ ಬಹಳಷ್ಟು ಖಾಸಗಿ ಶಾಲೆಗಳಲ್ಲಿ ಶಾಲಾ ದಾಖಲಾತಿಗಳು ಮುಗಿದಿವೆ. ಆದರೆ, ಶಿಕ್ಷಣ ಇಲಾಖೆ ಶಾಲಾ ಮಕ್ಕಳಿಗೆ ದಾಖಲಾತಿ ಆಂದೋಲನ ನಡೆಸಿ, ಸರ್ಕಾರಿ ಶಾಲೆಗಳ ಬಗ್ಗೆ ಪ್ರಚಾರ ಮಾಡುತ್ತಿದ್ದರೂ ಸರ್ಕಾರಿ ಶಾಲೆಗಳಲ್ಲಿ ಮಾತ್ರ ದಾಖಲಾತಿ ಕಡಿಮೆಯಾಗುತ್ತಿವೆ. ಆ ಶಾಲೆಯಲ್ಲಿ ಇರುವುದೇ ಒಬ್ಬ ವಿದ್ಯಾರ್ಥಿ. ಆ ವಿದ್ಯಾರ್ಥಿ ಗೊಬ್ಬ ಶಿಕ್ಷಕ. ವಿದ್ಯಾರ್ಥಿ ಬರದಿದ್ದರೆ ಶಾಲೆಗೇ ರಜೆ. ಸರ್ಕಾರ ಕಡಿಮೆ ವಿದ್ಯಾರ್ಥಿಗಳಿರುವ ಸರ್ಕಾರಿ ಶಾಲೆಯನ್ನು ಮುಚ್ಚ ಬಾರದೆಂಬ ನಿಯಮ ಮಾಡಿರುವುದರಿಂದ ಆ ಶಾಲೆ ಯನ್ನು ಹೇಗಾದರೂ ಮಾಡಿ ಮುಂದುವರೆ ಸಲೇಬೇಕು. ಆದರೆ, ವಿದ್ಯಾರ್ಥಿಗಳಿಲ್ಲದಿದ್ದರೆ ಹೇಗೆ ಎನ್ನುವುದು ಶಿಕ್ಷಣ ಇಲಾಖೆಗೆ ತಲೆಬಿಸಿ ಯಾಗಿದೆ. ಇದು ಸರ್ಕಾರಿ ಶಾಲೆಗಳ ಸ್ಥಿತಿಗತಿಗೆ ಹಿಡಿದ ಕೈಗನ್ನಡಿಯಾಗಿದೆ.
Related Articles
Advertisement
ಸರ್ಕಾರಿ ಹಾಗೂ ಖಾಸಗಿ ಶಾಲೆಯ ಮಕ್ಕಳ ಅಂಕಿ-ಅಂಶಗಳನ್ನು ಗಮನಿಸಿದರೆ ತಾಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ 8916 ವಿದ್ಯಾರ್ಥಿಗಳು ದಾಖಲಾಗಿದ್ದರೆ, ಅನುದಾನಿತ ಶಾಲೆಗಳಲ್ಲಿ 709 ಹಾಗೂ ಅನುದಾನರಹಿತ ಶಾಲೆಗಳ ಲ್ಲಿಯೇ 18929 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 5,688ವಿದ್ಯಾರ್ಥಿಗಳು ದಾಖಲಾಗಿದ್ದರೆ, ಅನುದಾನಿತ ಶಾಲೆಗಳಲ್ಲಿ 1,145ಹಾಗೂ ಅನುದಾನರಹಿತ ಶಾಲೆ ಗಳಲ್ಲಿಯೇ 9,112 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಅಂದರೆ, ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ದಾಖಲಾತಿ ಸರಾಸರಿ ಹೆಚ್ಚಿದ್ದು, ಖಾಸಗಿ ಪ್ರಾಥಮಿಕ ಶಾಲೆಗಳಲ್ಲಿ ವರ್ಷ ದಿಂದ ವರ್ಷಕ್ಕೆ ದಾಖಲಾತಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ.
ಆರ್‌ಟಿಇ ಕಾಯಿದೆ ಸಡಿಲ: ಇಷ್ಟು ದಿನಗಳ ಕಾಲ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ)ಯಿಂದ ಸರ್ಕಾರಿ ಶಾಲೆಗಳಿಗೆ ದಾಖಲಾತಿಗೆ ತೊಡಕಾಗಿತ್ತು. ಸಮೀಪದ ಖಾಸಗಿ ಶಾಲೆಗಳಲ್ಲಿಯೇ ಸೀಟು ಸಿಗುವಾಗ ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರು ಒಲವು ತೋರಿಸುತ್ತಿರಲಿಲ್ಲ. ಈಗ ಸರ್ಕಾರಿ ಶಾಲೆಗಳು ಆ ಪ್ರದೇಶದಲ್ಲಿದ್ದರೆ ಆರ್‌ಟಿಇ ಅನ್ವಯಿಸುವುದಿಲ್ಲ.
ಆಂಗ್ಲ ಮಾಧ್ಯಮ ಆರಂಭ: ಈ ಹಿಂದಿನ ಸರ್ಕಾರದಲ್ಲಿ ಜಾರಿಯಾಗಿದ್ದಂತೆ ತಾಲೂಕಿನಲ್ಲಿ ಈಗಾಗಲೇ 4ಶಾಲೆಗಳಲ್ಲಿ 6ನೇ ತರಗತಿಯಿಂದ ಆಂಗ್ಲ ಮಾಧ್ಯಮ ನಡೆಯುತ್ತಿದೆ. ಈ ಸಾಲಿನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೈಗೊಂಡ ನಿರ್ಧಾರದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 1,000 ಆಂಗ್ಲ ಮಾಧ್ಯಮ ಶಾಲೆಗಳು ಆರಂಭವಾಗಿದ್ದು, ತಾಲೂಕಿನ ದೊಡ್ಡಬೆಳವಂಗಲ, ಕೊನಘಟ್ಟ, ಬಾಶೆಟ್ಟಿಹಳ್ಳಿ, ತೂಬಗೆರೆಯಲ್ಲಿ 1ರಿಂದ 12ನೇ ತರಗತಿ ವರೆಗೆ ಕರ್ನಾಟಕ ಪಬ್ಲಿಕ್ ಶಾಲೆಗಳು ಆರಂಭವಾಗಿವೆ.
ಸರ್ಕಾರಿ ಶಾಲೆಗಳ ಉತ್ತಮ ಸಾಧನೆ: ಏಪ್ರಿಲ್ನಲ್ಲಿ ನಡೆದ 2019ನೇ ಸಾಲಿನ ಎಸ್‌ಎಸ್‌ಎಲ್ಸಿಯಲ್ಲಿ ಸರ್ಕಾರಿ ಪ್ರೌಢಶಾಲೆಗಳು ಶೇ.79.31, ಅನುದಾನಿತ ಶಾಲೆಗಳು ಶೇ.73.10, ಅನುದಾನ ರಹಿತ ಶಾಲೆಗಳು ಶೇ.87.48 ಫಲಿತಾಂಶ ಗಳಿಸಿವೆ. ಕೆಲವು ಖಾಸಗಿ ಶಾಲೆಶೇ.65ಕ್ಕಿಂತ ಕಡಿಮೆ ಫಲಿತಾಂಶ ಗಳಿಸಿದ್ದರೆ, ಸರ್ಕಾರಿ ಶಾಲೆಗಳು ಶೇ.90ಕ್ಕೂ ಹೆಚ್ಚು ಫಲಿತಾಂಶ ಗಳಿಸಿವೆ.
ಡಿ.ಶ್ರೀಕಾಂತ್