Advertisement
ಶಿಫಾರಸ್ಸು ಬಂದು ಪ್ರಯೋಜನ ಏನು?ವಿಪರ್ಯಾಸದ ಸಂಗತಿಯೆಂದರೆ, ಆಳುವ ವರ್ಗವಾಗಲಿ, ಆರ್ಥಿಕವಾಗಿ ಸಬಲವಾಗಿರುವ ಶ್ರೀಮಂತ ವರ್ಗವಾಗಲಿ ಮತ್ತು ಆಡಳಿತದ ಚುಕ್ಕಾಣಿ ಹಿಡಿದಿರುವ ಅಧಿಕಾರಿ ಶಾಹಿಯಾಗಲಿ ಶಿಕ್ಷಣ ಆಯೋಗದ ಸಮಾನ ಶಾಲಾ ಶಿಕ್ಷಣ ವ್ಯವಸ್ಥೆಯ ಮಹತ್ವ ಪೂರ್ಣ ಶಿಫಾರಸ್ಸನ್ನು ಅರ್ಥೈಸಿಕೊಳ್ಳುವ ಗೋಜಿಗೆ ಹೋಗಲಿಲ್ಲ. ಅರ್ಥೈಸಿಕೊಂಡ ಪಟ್ಟಭದ್ರ ಹಿತಾಸಕ್ತಿಯುಳ್ಳ ಅಧಿಕಾರಶಾಹಿ ಸಮಾನಶಾಲಾ ಶಿಕ್ಷಣ ವ್ಯವಸ್ಥೆಯ ಹಿಂದಿರುವ ಸಮಾನತೆಯ ತತ್ವವನ್ನು ತಿಳಿದು ಶ್ರೇಣಿಕೃತ ಮತ್ತು ವರ್ಗಾಧಾರಿತ ವ್ಯವಸ್ಥೆಯಲ್ಲಿ ತಾವು ಅನುಭವಿಸುತ್ತಿರುವ ಸವಲತ್ತುಗಳಿಗೆ ಧಕ್ಕೆಯಾಗಬಹುದಾದ ಶಿಫಾರಸ್ಸನ್ನು ಅನುಷ್ಠಾನಗೊಳ್ಳಲು ಬಿಡುವುದಿಲ್ಲವೆಂಬ ಸಂಕಲ್ಪ ತೊಟ್ಟಿತು. ಇನ್ನೊಂದೆಡೆ, ಅಧಿಕಾರಿ ಶಾಹಿಗಳ ಹಿಡಿತದಿಂದ ಹೊರಬಂದು ವಿದೇಶದ ಭವಿಷ್ಯದ ಬಗ್ಗೆ ತಮ್ಮ ಸ್ವಂತ ಅನುಭವದ ಹಿನ್ನೆಲೆಯಲ್ಲಿ ಸ್ವತಂತ್ರವಾಗಿ ಚಿಂತಿಸುವ ಪ್ರಯತ್ನವನ್ನು ಆಳುವ ವರ್ಗದ ರಾಜಕಾರಣಿಗಳು ಸಹ ಮಾಡಲಿಲ್ಲ. ಹೀಗಾಗಿ, ಆಯೋಗದ ಸಂಧಾನ ಬದ್ಧ ಆಶಯವಾದ ಸಮಾನ ಶಾಲಾ ಶಿಕ್ಷಣ ವ್ಯವಸ್ಥೆಯ ಪರಿಕಲ್ಪನೆಯ ಶಿಫಾರಸ್ಸು ಕನಸಾಗಿಯೇ ಉಳಿಯಿತು. ಇಂದು, ನಮ್ಮ ರಾಜ್ಯವೂ ಸೇರಿದಂತೆ ದೇಶದಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿ ಇದಕ್ಕೆ ಕೈಗನ್ನಡಿಯಾಗಿದೆ.
Related Articles
Advertisement
ಮಕ್ಕಳ ದಾಖಲಾತಿಯನ್ನು ನೋಡುವುದಾದರೆ- 2010-11 ನೇ ಶೈಕ್ಷಣಿಕ ಅವಧಿಯಲ್ಲಿ, (ಸರ್ಕಾರಿ ಶಾಲೆಗಳಲ್ಲಿ) 1 ರಿಂದ 10ನೇ ತರಗತಿಯಲ್ಲಿನ ಮಕ್ಕಳ ದಾಖಲಾತಿ ಸಂಖ್ಯೆ 54.54 ಲಕ್ಷ. ಇದು 2015-16 ನೇ ಸಾಲಿನಲ್ಲಿ ಮತ್ತು 47.46 ಲಕ್ಷಕ್ಕೆ ಇಳಿದಿದೆ. ಇದೇ ಅವಧಿಯಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಮಕ್ಕಳ ದಾಖಲಾತಿ 28.76 ಲಕ್ಷದಿಂದ 36.51 ಲಕ್ಷಕ್ಕೆ ಏರಿದೆ. ಏನು ಇದರ ಅರ್ಥ? ಶಿಕ್ಷಕರ ಲಭ್ಯತೆ ವಿಚಾರಕ್ಕೆ ಬಂದರೆ, 2010-11ರ ಎಲಿಮೆಂಟರಿ ಶಾಲೆಗಳಲ್ಲಿ ಒಟ್ಟು ಮುಂಜೂರಾದ ಮತ್ತು ಕಾರ್ಯನಿರ್ವಸುತ್ತಿದ್ದ ಶಿಕ್ಷಕರ ಸಂಖ್ಯೆ 2,02,483 ಮತ್ತು 1,89,451. ಇದು 2015-16 ನೇ ಸಾಲಿನಲ್ಲಿ ಕ್ರಮವಾಗಿ 2,03,658 ಮತ್ತು 1,66,083. ಅಂದರೆ, 2015-16 ನೇ ಸಾಲಿನಲ್ಲಿ ಎಲಿಮೆಂಟರಿ ಶಾಲೆಗಳಲ್ಲಿ ಮುಂಜೂರಾದ ಹುದ್ದೆಗಳ ಪೈಕಿ ಖಾಲಿ ಇರುವ ಶಿಕ್ಷಕರ ಹುದ್ದೆಗಳ ಸಂಖ್ಯೆ 37,575. ಇದನ್ನು ಗಮನಿಸಿದರೆ, ಸರ್ಕಾರಿ ಶಾಲೆಗಳು ಗುಣಾತ್ಮಕ ಶಿಕ್ಷಣ ನೀಡಲು ಅಸಾಧ್ಯವಾಗದಿರುವುದು ಏಕೆ, ಸರ್ಕಾರಿ ಶಾಲೆಗಳು ಶೋಚನೀಯ ಸ್ಥಿತಿ ತಲುಪಲು ನಿಜವಾದ ಕಾರಣವೇನೆಂಬುದು ತಿಳಿಯುತ್ತದೆ. ಇನ್ನು ಮೂಲಭೂತ ಸೌಕರ್ಯಗಳನ್ನು ಅದರಲ್ಲೂ ವಿಶೇಷವಾಗಿ ಕಲಿಕೆಗೆ ಅಗತ್ಯವಾದ ಕಲಿಕಾ ಕೋಣೆಗಳ ಸ್ಥಿತಿಯನ್ನು ನೋಡುವುದಾದರೆ 2010-11ರಲ್ಲಿ ರಾಜ್ಯದ ಎಲಿಮೆಂಟರಿ ಶಾಲೆಗಳಲ್ಲಿ ಒಟ್ಟು ಕೊಠಡಿಗಳು 1,98,415. ಅವುಗಳಲ್ಲಿ ಕಲಿಕೆಗೆ ಬಳಸಬಹುದಾದ ಕೊಠಡಿಗಳು 1,35,000. ಅಂದರೆ ಸರಿಸುಮಾರು 63,415 ಕೊಠಡಿಗಳು ಕಲಿಕೆಗೆ ಪೂರಕವಾಗಿಲ್ಲ. 2015-16 ರಲ್ಲಿ ಎಲಿಮೆಂಟರಿ ಶಾಲೆಗಳಲ್ಲಿ ಲಭ್ಯವಿದ್ದ ಒಟ್ಟು ಕೊಠಡಿಗಳು 2,12,037. ಅವುಗಳಲ್ಲಿ ಕಲಿಕೆಗೆ ಬಳಸಬಹುದಾದ ಕೊಠಡಿಗಳು 1,46,020. ಸರಿಸುಮಾರು 66,017 ಕೊಠಡಿಗಳು ಕಲಿಕೆಗೆ ಪೂರಕವಾಗಿಲ್ಲ. ಒಟ್ಟಾರೆ, ಕಲಿಕೆ ಯೋಗ್ಯವಲ್ಲದ ಕೊಠಡಿಗಳ ಸಂಖ್ಯೆ 63415 ರಿಂದ 66017 ಹೆಚ್ಚಿದೆ. ಪರಿಸ್ಥಿತಿ ಹೀಗಿದ್ದಲ್ಲಿ ಸರ್ಕಾರಿ ಶಾಲೆ ಉಳಿದು-ಬೆಳೆಯುವ ಬಗೆಯಾದರು ಹೇಗೆ ಎಂಬ ಪ್ರಶ್ನೆ ಎಲ್ಲಾ ಪ್ರಜಾnವಂತ ನಾಗರಿಕರನ್ನು ಕಾಡುತ್ತಿದೆ. ಒಟ್ಟಾರೆ, ಸಂವಿಧಾನದ ನಾಲ್ಕನೇ ಭಾಗದ ನಿರ್ದೇಶಕ ತತ್ವಗಳಲ್ಲಿದ್ದ ಶಿಕ್ಷಣದ ಅವಕಾಶವನ್ನು ಸಂಧಾನದ ಮೂರನೇ ಭಾಗದಲ್ಲಿ ಮೂಲಭೂತ ಹಕ್ಕಾಗಿ ಸೇರಿದರೂ ಪ್ರಭುತ್ವಗಳಿಗೆ ಅದು ಇನ್ನೂ ಮೂಲಭೂತವೆನಿಸದಿರುವುದು ದುರದೃಷ್ಟಕರ. ಏನು ಮಾಡಬೇಕು?
1. ಈ ಶೈಕ್ಷಣಿಕ ವರ್ಷದಿಂದಲೇ ರಾಜ್ಯದ ಎಲ್ಲಾ ಕಿರಿಯ-ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ-ಪ್ರಾಥಮಿಕ ತರಗತಿಗಳನ್ನು ಆರಂಭಿಸುವ ಅಧಿಕೃತ ಅಧಿಸೂಚನೆ ಹೊರಡಿಸುವುದು. ಪ್ರಾರಂಭಿಕವಾಗಿ ಪೂರ್ವ ಪ್ರಾಥಮಿಕ ತರಗತಿಗಳಿಗೆ ಕಲಿಕಾ ಬೋಧನಾ ಉಪಕರಣಗಳಿಗಾಗಿ ಪ್ರತಿ ಶಾಲೆಗೆ ಕನಿಷ್ಠ 10 ಸಾವಿರ ಹಣವನ್ನು ತಕ್ಷಣ ಒದಗಿಸುವುದು. 2. ಪೂರ್ವ -ಪ್ರಾಥಮಿಕ ತರಗತಿಗಳಿಂದಲೇ ಆಂಗ್ಲ ಭಾಷೆಯನ್ನು ಒಂದು ಭಾಷೆಯನ್ನಾಗಿ ವೈಜಾnನಿಕವಾಗಿ ಮತ್ತು ಶಿಸ್ತುಬದ್ಧವಾಗಿ ಪ್ರಭುತ್ವದ ಮಟ್ಟಕ್ಕೆ ಕಲಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು. ಇದಕ್ಕೆ ಪೂರಕವಾಗುವಂತೆ ಪ್ರತಿಯೊಂದು ಸರ್ಕಾರಿ ಶಾಲೆಗೂ ಸಮರ್ಥರಾದ ಇಂಗ್ಲಿಷ್ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು. 3. ಶಾಲಾ ಹಂತದಲ್ಲಿ ಅಭಿವೃದ್ಧಿ, ನಿರ್ವಹಣೆಯ ಹೊಣೆ ಹೊತ್ತಿರುವ ಎಸ್‌ಡಿಎಮ್‌ಸಿಗಳು ಶೈಕ್ಷಣಿಕ ವರ್ಷದಿಂದಲೇ ಕನಿಷ್ಟ ಮೂಲಭೂತ ಸೌಕರ್ಯಗಳನ್ನು ಖಾತರಿಗೊಳಿಸಬೇಕು. ಕಲಿಕೆಗೆ ಪೂರಕವಾದ ವಾತಾವರಣವನ್ನು ಕಟ್ಟಿಕೊಡಲು ಅನುವಾಗುವಂತೆ ಪ್ರತಿ ಕಿರಿಯ ಪ್ರಾಥಮಿಕ ಶಾಲೆಗೆ ಕನಿಷ್ಠ ವಾರ್ಷಿಕ ರೂ.50 ಸಾವಿರ ಮತ್ತು ಹಿರಿಯ ಪ್ರಾಥಮಿಕ ಶಾಲೆಗೆ ವಾರ್ಷಿಕ ಒಂದು ಲಕ್ಷ ರೂಗಳನ್ನು ಶಾಲಾ ಅನುದಾನಕ್ಕೆ ನೀಡುವುದು. 4. ಈಗಿರುವ ಶಿಕ್ಷಕ -ಮಕ್ಕಳ ಅನುಪಾತವನ್ನು ಸಡಿಲಿಸಿ, ಕನಿಷ್ಠ ಕಿರಿಯ -ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಶಿಕ್ಷಕ-ಮಕ್ಕಳ ಅನುಪಾತಕ್ಕೆ ನಿಗದಿತ ಸಂಖ್ಯೆ ತಲುಪವರೆಗೆ (ಮಕ್ಕಳ ಸಂಖ್ಯೆ ಎಷ್ಟೇ ಇದ್ದರೂ )ಕನಿಷ್ಠ ವಿಷಯಕೊಬ್ಬ$ಶಿಕ್ಷಕರನ್ನು ನೇಮಿಸಲಿ. ಕಿರಿಯ
ಪ್ರಾಥಮಿಕ ಶಾಲೆಗಳಲ್ಲಿ 100 ಮಕ್ಕಳು ದಾಟಿದ ನಂತರ 1:20ರ ಅನ್ವಯ ಶಿಕ್ಷಕ -ಮಕ್ಕಳ ಅನುಪಾತದಲ್ಲಿ , ಹಿರಿಯ ಪ್ರಾಥುಕ ಶಾಲೆಗಳಲ್ಲಿ 140 ಮಕ್ಕಳು ದಾಟಿದ ನಂತರ 1:25ರ ಅನ್ವಯ ಶಿಕ್ಷಕ -ಮಕ್ಕಳ ಅನುಪಾತದಲ್ಲಿ, ಪೌಢ ಶಾಲೆಯಲ್ಲಿ 90 ಮಕ್ಕಳು ದಾಟಿದ ನಂತರ 1:30ರ ಅನ್ವಯ ಶಿಕ್ಷಕ -ಮಕ್ಕಳ ಅನುಪಾತದಲ್ಲಿ ಶಿಕ್ಷಕರನ್ನು ಒದಗಿಸಬೇಕು. ಡಾ. ನಿರಂಜನಾರಾಧ್ಯ . ಪಿ.