Advertisement

ಗುಣಾತ್ಮಕ ಶಿಕ್ಷಣಕ್ಕೆ ಸರ್ಕಾರಿ ಶಾಲೆ ಯಶಸ್ಸು

04:54 PM Oct 30, 2020 | Suhan S |

ಕೋಲಾರ: ಜಿಲ್ಲೆಯ ಒಟ್ಟು 36 ಸರ್ಕಾರಿ ಶಾಲೆಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫ‌ಲಿತಾಂಶದ ಸಾಧನೆಯೊಂದಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಯಶಸ್ಸನ್ನು ಸಾಧಿಸಿ ಪೋಷಕರ ಖಾಸಗಿ ವ್ಯಾಮೋಹಕ್ಕೆ ಕಡಿವಾಣ ಹಾಕಿವೆ ಎಂದು ಡಿಡಿಪಿಐ ಕೆ.ಎಂ.ಜಯರಾಮರೆಡ್ಡಿ ತಿಳಿಸಿದರು.

Advertisement

ಕೋಲಾರ ತಾಲೂಕಿಗೆ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ಕ್ಯಾಲನೂರು ಸರ್ಕಾರಿ ಪ್ರೌಢಶಾಲೆಯ ನಿಖೀಲ್‌ ಕುಮಾರ್‌, ಆಶಾ, ಚೈತ್ರಾಬಾಯಿ ಈ ಮೂವರು ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ಕೊಡುಗೆಯಾಗಿ ನೀಡಿದ್ದ ಲ್ಯಾಪ್‌ಟಾಪ್‌ ವಿತರಿಸಿ ಮಾತನಾಡಿದರು.

ಸಾಧನೆಯ ಫ‌ಲಿತಾಂಶ: ಈ ಸಾಲಿನಲ್ಲಿ ಸರ್ಕಾರಿ ಶಾಲೆಗಳಿಂದ 7863 ಮಂದಿ ಪರೀಕ್ಷೆಗೆ ಕುಳಿತಿದ್ದು, 6799 ಮಂದಿ ಉತ್ತೀರ್ಣರಾಗಿ ಶೇ.86.47 ಫ‌ಲಿತಾಂಶ ಬಂದಿದೆ. 36 ಶಾಲೆ ಶೇ.100 ಸಾಧನೆ ಮಾಡುವ ಮೂಲಕ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದಿವೆ ಎಂದರು.

ಈ ಫ‌ಲಿತಾಂಶ ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಳಕ್ಕೂ ಕಾರಣವಾಗಿದೆ ಎಂದ ಡಿಡಿಪಿಐ, ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಸಿಲುಕಿದ್ದ ಪೋಷಕರ ಮನಸ್ಸಿನಲ್ಲಿ ಸರ್ಕಾರಿ ಶಾಲೆಗಳ ಕುರಿತು ಉತ್ತಮ ಭಾವನೆ ಬಲಗೊಳ್ಳಲು ಕಾರಣವಾಗಿದೆ ಎಂದರು.

ಎಸ್ಸೆಸ್ಸೆಲ್ಸಿ ಫ‌ಲಿತಾಂಶದಲ್ಲಿ ಸಂತಸದ ವಿಷಯ ಎಂದರೆ ಶೇ.60 ಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳೇ ಶೇ.80 ರಷ್ಟಿದ್ದಾರೆ. ಗುಣಾತ್ಮಕತೆಗೆ ಇದು ಕನ್ನಡಿಯಾಗಿದೆ. ಸರ್ಕಾರಿ ಲ್ಯಾಪ್‌ಟಾಪ್‌ ನೀಡುತ್ತಿರುವುದು ಇತರೆ ಮಕ್ಕಳಿಗೂ ಪ್ರೇರಣೆಯಾಗಲಿ, ನಿಮ್ಮ ಮುಂದಿನ ಶೈಕ್ಷಣಿಕಜೀವನವೂ ಉತ್ತಮ ಹಾದಿಯಲ್ಲಿ ಸಾಗಲಿ ಎಂದು ಸಾಧಕ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

Advertisement

ಬಿಇಒ ಕೆ.ಎಸ್‌.ನಾಗರಾಜಗೌಡ, ಕೋಲಾರ ತಾಲೂಕಿನ ಕರ್ನಾಟಕ ಪಬ್ಲಿಕ್‌ ಶಾಲೆ ಕ್ಯಾಲನೂರು ಈ ಶಾಲೆಯ ಮೂವರು ವಿದ್ಯಾರ್ಥಿಗಳು ಮಾಡಿರುವ ಸಾಧನೆ ಶ್ಲಾ ಸಿ, ಇದೇ ಹಾದಿಯಲ್ಲಿಸರ್ಕಾರಿ ಶಾಲೆಗಳ ಗುಣಮಟ್ಟ ವೃದ್ಧಿಗೊಳಿಸಿ ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.

ಈ ಸಾಲಿನ ಪರೀಕ್ಷೆಯಲ್ಲಿ ಇಡೀ ಕೋಲಾರ ತಾಲೂಕಿಗೆ ಅತೀ ಹೆಚ್ಚಿನ ಅಂಕ ಗಳಿಸಿದ್ದಕ್ಕೆ ಸರ್ಕಾರದ ವತಿಯಿಂದ ಉಚಿತ ಲ್ಯಾಪ್‌ ಟ್ಯಾಪ್‌ ನೀಡಲಾಯಿತು. ವಿದ್ಯಾರ್ಥಿಗಳಾದ ನಿಖೀಲ್‌ಕುಮಾರ್‌, ಚೈತ್ರಾಬಾಯಿ, ತಾಲೂಕಿಗೆ ಮೊದಲ  ಮೂರು ಸ್ಥಾನ ಪಡೆಯುವ ಮೂಲಕ ಲ್ಯಾಪ್‌ಟಾಪ್  ಪಡೆದುಕೊಂಡರು.

ಕ್ಷೇತ್ರ ಸಮನ್ವಯಾಧಿಕಾರಿ ರಾಮಕೃಷ್ಣಪ್ಪ ಹಾಗೂ ಕರ್ನಾಟಕ ಪಬ್ಲಿಕ್‌ ಶಾಲೆ ಮುಖ್ಯ ಶಿಕ್ಷಕಓ.ಮಲ್ಲಿಕಾರ್ಜುನ, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಗಂಗಾಧರ್‌, ಮಕ್ಕಳು ಹಾಜರಿದ್ದು ಶುಭ ಕೋರಿದರು.

ಸೌಲಭ್ಯಗಳೆಲ್ಲವೂ ಉಚಿತ : ಕೋವಿಡ್‌ ಸಂಕಷ್ಟದಲ್ಲೂ ಸರ್ಕಾರಿ ಪ್ರೌಢಶಾಲೆ ಶಿಕ್ಷಕರು ಮಕ್ಕಳ ಕಲಿಕೆಗೆ ನೆರವಾಗಿದ್ದಾರೆ. ವಿದ್ಯಾಗಮ ಮಾತ್ರವಲ್ಲ, ಆನ್‌ಲೈನ್‌ ಕಲಿಕೆಗೂ ಒತ್ತು ನೀಡಿದ್ದಾರೆ. ಶಿಕ್ಷಕರ ಪರಿಶ್ರಮದಿಂದ ಜಿಲ್ಲೆಗೆ ಉತ್ತಮ ಫ‌ಲಿತಾಂಶದ ಗೌರವವೂ ಸಿಗುವಂತಾಯಿತು. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಜತೆಗೆ ಪೌಷ್ಟಿಕವಾದ ಬಿಸಿ ಯೂಟ, ಹಾಲು, ಉಚಿತ ಪಠ್ಯಪುಸ್ತಕ, ಸಮ ವಸ್ತ್ರದ ಕೊಡುಗೆ ನೀಡಲಾಗುತ್ತಿದೆ. ಶುಲ್ಕವೂ ಇಲ್ಲ, ಕೋವಿಡ್‌ ಸಂಕಷ್ಟದಲ್ಲಿರುವ ಪೋಷಕರು ಇದೀಗ ಸರ್ಕಾರಿ ಶಾಲೆಗಳತ್ತ ಬರುತ್ತಿದ್ದಾರೆ ಎಂದು ಡಿಡಿಪಿಐ ಜಯರಾಮರೆಡ್ಡಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next