ರಾಯಭಾಗ: ಶಾಸಕರೇ ಎಲ್ಲಿ ಇದ್ದಿರಿ ಯಾವ ಮೂಲೆಯಲ್ಲಿ ಇದ್ದಿರಿ ಒಂದು ಸಾರಿ ಇತ್ತ ಕಡೆ ಕಣ್ಣು ತೆರೆದು ನೋಡಿ ,ನಿಮ್ಮ ಕ್ಷೇತ್ರದ ರಾಯಭಾಗ ಗ್ರಾಮೀಣ ಭಾಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪರಿಸ್ಥಿತಿ.
ಸರ್ಕಾರಿ ಶಾಲೆಯ ಮಕ್ಕಳ ಹಣೆಬರಹ
ಪಟ್ಟಣದ ಹಾರೂಗೇರಿ ಕಡೆಗೆ ಹೊಗುವ ರಸ್ತೆಯ ಕೆನಾಲ್ ಹತ್ತಿರ ಇರುವ ಗ್ರಾಮೀಣ ಪ್ರದೇಶದ ಪೂಜಾರಿ ತೋಟದಲ್ಲಿರುವ ಸರ್ಕಾರಿ ಶಾಲೆಯ ಮಕ್ಕಳ ದುರಸ್ತಿ ಇದು. ಮಕ್ಕಳಿಗೆ ಬೇಕಾಗಿರುವ ಮೂಲಭೂತ ಸೌಕರ್ಯ ಇಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮಾನ್ಯ ಶಾಸಕರೆ ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ ಎನ್ನುವ ಗಾದೆ ಮಾತು ನಿಜ ಆಗಿದೆ.1986 ರಲ್ಲಿ ಪ್ರಾರಂಭವಾದ ಸರ್ಕಾರಿ ಶಾಲೆ ಪೂಜಾರಿ ತೋಟ ಒಂದೇ ಕೊಠಡಿ ಇದ್ದು ಮಳೆ ಬಿಸಿಲು ಎನ್ನದೆ ಶಾಲಾ ಮಕ್ಕಳು ಆಸರೆ ಕಾಣದೆ ಶಾಲೆಯಿಂದ ಹೊರಗಡೆ ಕುಳಿತು ಅಭ್ಯಾಸ ಮಾಡುವ ಪರಿಸ್ಥಿತಿ ಎದುರಾಗಿದೆ.
ಸುಮಾರು 35 ಶಾಲಾ ಮಕ್ಕಳು ಇರುವ ಈ ಶಾಲೆ ಒಂದರಿಂದ ಐದರವರೆಗೆ ತರಗತಿಗಳು ನಡೆಯುತ್ತಿವೆ.ಆದರೆ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ದೋರಣೆ ತೋರಿದ್ದು,ದುರದೃಷ್ಟಕರ ಸಂಗತಿಯಾಗಿದೆ.
ಈ ಶಾಲೆಯಲ್ಲಿ ಮಕ್ಕಳಿಗೆ ಕುಡಿಯಲು ನೀರಿಲ್ಲ ಶೌಚಾಲಯ ಅಂತೂ ಮೊದಲೇ ಇಲ್ಲ.ಇನ್ನೂ ಕುಳಿತು ಅಭ್ಯಾಸ ಮಾಡಬೇಕಾದರೆ ಆಸರೆ ಇಲ್ಲ,ಶಾಲೆಯ ಹೊರಗೆ ಕುಳಿತು ಮಳೆ ಬಿಸಿಲು ಎನ್ನದೆ ವಿದ್ಯಾಭ್ಯಾಸ ಮಾಡುತ್ತಿರುವ ಶಾಲಾ ಮಕ್ಕಳು. ಅಷ್ಟಕ್ಕೂ ಶಾಲೆ ಈ ಸ್ಥಿತಿಗೆ ಅಸಲಿ ಕಾರಣ ಕೊಟ್ಟ ಪಾಲಕರು,ಅಸಲಿ ಮಾಲೀಕರ ಹಾಗೂ ಅಧಿಕಾರಿಗಳ ನಡುವೆ ಶಾಲೆಯ ಜಾಗದ ತಕರಾರು,ಏನೇ ಯಾಗಲಿ ಶಾಲೆಯ ಮಕ್ಕಳಿಗೆ ಶಾಲಾ ಕೊಠಡಿ ಕುಡಿಯುವ ನೀರು, ಶೌಚಾಲಯ ಬೇಕಾಗಿದ್ದು ಅಧಿಕಾರಿಗಳು ಬೇಗನೆ ಈ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎನ್ನುವುದು ನಮ್ಮ ಆಶಯ.
ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಸಮಸ್ಯೆಯನ್ನು ಬಗೆಹರಿಸುತ್ತಾರೆ ಅಥವಾ ಇಲ್ಲ ಎಂಬುದನ್ನು ಕಾಯ್ದು ನೋಡಬೇಕಾಗಿದೆ.