Advertisement
Related Articles
Advertisement
ಈ ಶಾಲೆಯಲ್ಲಿ ಸಿಗುತ್ತೆ ಇಂಗ್ಲೀಷ್,ದೂರದರ್ಶನ ಮೂಲಕ ಶಿಕ್ಷಣನೀವು ನಂಬಲೇಬೇಕಾದ ಸಂಗತಿ ಒಂದಿದೆ. ಇಲ್ಲಿನ ಮಕ್ಕಳ ಮುಂದೆ ನಿಂತು ಇಂಗ್ಲೀಷ್ ಮಾತನಾಡಿದರೆ, ಅವರು ಪಟ ಪಟ ಅಂತ ತಮ್ಮ ಹಿನ್ನೆಲೆ, ಮುನ್ನೆಲೆಯನ್ನು ಇಂಗ್ಲೀಷಿನಲ್ಲಿ ಹೇಳಿಬಿಡುತ್ತವೆ. ಆ ಮಟ್ಟಿಗೆ ಎಲ್ಲಾ ಸರ್ಕಾರಿ ಶಾಲೆಯಲ್ಲಿರುವ ಇಂಗ್ಲೀಷ್ ಭಾಷಾ ಸಮಸ್ಯೆ ಇಲ್ಲಿ ಕಾಣೆಯಾಗಿದೆ. ಮಕ್ಕಳು ಗೋಲಾಕಾರದಲ್ಲಿ ಕುಳಿತು ವಿವಿಧ ಕಲಿಕಾ ಸಾಮರ್ಥ್ಯ ಗಳಿಸುತ್ತಾರೆ. ಅಷ್ಟೇ ಅಲ್ಲದೆ ದೂರದರ್ಶನದ ಮೂಲಕ ಕಥೆಗಳನ್ನ ನೋಡುತ್ತಾರೆ. ಜೊತೆಗೆ ರೈಮ್ಸ್ ಗಳಿಗೆ ನೃತ್ಯ ಮಾಡುವುದನ್ನು ಕಲಿಯುತ್ತಿದ್ದಾರೆ. ಖಾಸಗಿ ಶಾಲೆಗೆ ವಿದ್ಯಾರ್ಥಿಗಳನ್ನು ದಾಖಲಿಸಿಬೇಕೆಂದಿದ್ದ ಪೋಷಕರು, ಇಲ್ಲಿನ ಪರಿಸರ ಕಂಡು ಶಾಲೆಯನ್ನು ಬಿಟ್ಟು ಹೋಗುತ್ತಿಲ್ಲ. ಇಲ್ಲಿನ ಕಲಿಕೆ ಪರಿಸರ ಕಂಡು ಖಾಸಗಿ ಶಾಲೆಯ ಮಕ್ಕಳು ಕೂಡಾ ಈ ಶಾಲೆಯ ಕಡೆ ಬರುತ್ತಿದ್ದಾರೆ. “ನನಗೆ ಮಾದರಿ ಶಾಲೆ ಮಾಡುವ ಕನಸಿತ್ತು.ಬಡಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗುವಂತಾಗಲು ಶ್ರಮಿಸುತ್ತಿದ್ದೇವೆ. ಇಂಗ್ಲಿಷ್ ಕಲಿಕೆ ಸೇರಿದಂತೆ ದೃಶ್ಯ ಆಧರಿತ ಕಲಿಕೆ ನಮ್ಮ ಶಾಲೆಯಲ್ಲಿ ನಡೆಯುತ್ತಿದೆ. ಸಮುದಾಯ ಸಹಭಾಗಿತ್ವದಲ್ಲಿ ಮಾದರಿ ಶಾಲೆ ಮಾಡಲಾಗುತ್ತಿದೆ. ಖಾಸಗಿ ಶಾಲೆಗಿಂತಲೂ ನಮ್ಮ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿರುವುದಕ್ಕಿಂತ ಬೇರೆ ಖುಷಿ ಬೇಕೆ’ ಎನ್ನುತ್ತಾರೆ ಮುಖ್ಯ ಶಿಕ್ಷಕಿ ಪಾರ್ವತಿ ಚಳಗೇರಿ, ಕಣ್ಮನ ಸೆಳೆಯುವ ಕೈದೋಟ
ಶಾಲಾ ಆವರಣ ಹಚ್ಚುಹಸಿರಿನ ಪರಿಸರದಿಂದ ಕಂಗೊಳಿಸುತ್ತಿದೆ. ಒಳಗೆ ಕಾಲಿಟ್ಟರೆ ಯಾವುದೋ ಅರಣ್ಯ ಪ್ರದೇಶದೊಳಗೆ ಹೋಗುತ್ತಿದ್ದೇವೆ ಎಂಬಂತೆ ಭಾಸವಾಗುತ್ತೆ. ಕೈದೋಟವನ್ನು ಶಾಲಾ ವಿದ್ಯಾರ್ಥಿಗಳೇ ನಿರ್ವಹಿಸುತ್ತಾರೆ. ಇದರಲ್ಲಿ ನಾನಾ ಬಗೆಯ ಔಷಧ ಸಸ್ಯಗಳಿವೆ. ಅಲಂಕಾರಿಕ ಹೂಗಳಿವೆ. ಕೈತೋಟದಲ್ಲಿ ಬೆಳೆಯುವ ತರಕಾರಿಯನ್ನು ಬಿಸಿಯೂಟಕ್ಕೆ ಬಳಸುವುದು. ಕೈದೋಟದಲ್ಲಿ ಸ್ಪ್ರಿಂಕಲರ್ ಮೂಲಕ ನೀರನ್ನು ಒದಗಿಸುತ್ತಾರೆ. ಎರೆಹುಳ ಗೊಬ್ಬರ ತಯಾರಿಸಿ ಕೈದೋಟದಲ್ಲಿ ಬಳಸುತ್ತಾರೆ. ಒಟ್ಟಾರೆ ಮಕ್ಕಳು ಹಸಿರ ಪರಿಸರದ ಮಧ್ಯೆ ಕಲಿಯುತ್ತಿದ್ದಾರೆ. ಶಾಲೆಯಲ್ಲಿ ಔಷಧಿ ಸಸ್ಯಗಳಿವೆ. ಪ್ರತಿಯೊಂದು ಗಿಡದ ಮುಂದೆ ನೇಮ್ ಪ್ಲೇಟ್ ನೇತುಹಾಕಿದ್ದಾರೆ. ಗಿಡಗಳಲ್ಲಿ ಪಕ್ಷಿ$ಗಳಿಗೆ ಆಶ್ರಯದ ವ್ಯವಸ್ಥೆ ಮಾಡಲಾಗಿದೆ. ಬಿಸಿಯೂಟದಿಂದ ಉಳಿದ ಆಹಾರ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಿ, ವಿದ್ಯಾರ್ಥಿಗಳು ಪಶುಪಕ್ಷಿ$ಗಳನ್ನು ಸಲಹುತ್ತಿದ್ದಾರೆ. ಅಡುಗೆದಾರರಿಗೂ ಐಡಿಕಾರ್ಡು
ಈ ಶಾಲೆಯಲ್ಲಿ ಮಕ್ಕಳಿಗೆ ಚೆನ್ನಾಗಿ ಶಿಸ್ತು ರೂಢಿಸಿದ್ದಾರೆ. ಬಿಸಿಯೂಟದ ಅಡುಗೆದಾರರಿಗೂ ಐಡಿ ಕಾರ್ಡು ಸೇರಿದಂತೆ ಬಾಣಸಿಗರ ಡ್ರೇಸ್ ಕೋಡ್ ವ್ಯವಸ್ಥೆ ಮಾಡಡಿರುವುದರಿಂದ ಅದನ್ನು ಧರಿಸಿಯೇ ಪ್ರತಿದಿನ ಬಿಸಿಯೂಟ ತಯರಾಗುತ್ತದೆ. ಜೊತೆಗೆ ಶಿಸ್ತುಬದ್ಧವಾಗಿ ಕುಳಿತುಕೊಂಡು ಶಾಲಾ ಮಕ್ಕಳು ಪ್ರಾರ್ಥನೆಯೊಂದಿಗೆ ಭೋಜನ ಸವಿಯುತ್ತಿದ್ದಾರೆ. ವಿದ್ಯಾರ್ಥಿಗಳು ಶಾಲೆಗೆ ತೋಟದಿಂದ ಎರಡು, ಮೂರು ಕಿ.ಮೀ. ನಡೆದುಕೊಂಡು ಮಕ್ಕಳು ಬರುತ್ತಿರುವುದರಿಂದ, ಮಕ್ಕಳಿಗೆ ವಾಹನ ಸೌಕರ್ಯ ಜೊತೆಗೆ ಶಾಲೆಯಲ್ಲಿ ಸ್ಮಾಟ್ ì ಕ್ಲಾಸ್ ಮಾಡುವ ಉದ್ದೇಶವೂ ಇದೆ. ಒಟ್ಟಿನಲ್ಲಿ ಸರಕಾರಿ ಶಾಲೆ ಯಾವುದೇ ಖಾಸಗಿ ಶಾಲೆಗೆ ಕಡಿಮೆಯಿಲ್ಲ ಅನ್ನುವದಕ್ಕೆ ಈ ಸರಕಾರಿ ಶಾಲೆ ಮಾದರಿಯಾಗಿದೆ. “ನಮ್ಮೂರು ಶಾಲೆ ಈಗ ಇತರೆ ಶಾಲೆಗಳಿಗೆ ಮಾದರಿಯಾಗಿದೆ. ಮೊದಲು ಇಲ್ಲಿ ಮಕ್ಕಳನ್ನು ಸೇರಿಸಲು ಪೋಷಕರು ಹಿಂದುಮುಂದೆ ನೋಡುತ್ತಿದ್ದರು.ಈಗ ಕಲಿಕೆ ಬದಲಾದ ಬಳಿಕ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿದೆ.ದುಡಿಯುವ ಕೂಲಿಕಾರ್ಮಿಕರ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗುತ್ತಿರುವುದಕ್ಕೆ ನಮಗೆ ಖುಷಿಯಿದೆ ‘ಎನ್ನುತ್ತಾರೆ. ಎಸ್.ಇಡಿಎಂಸಿ ಅಧ್ಯಕ್ಷ ಮಂಜುನಾಥ್ ಈಳಗೇರಿ. ” ಬನಶಂಕರಿಯ ಮಾದರಿಶಾಲೆ ನೋಡಿ ನಮಗೂ ಖುಷಿಯಾಗಿದೆ. ಕೂಲಿಕಾರ್ಮಿಕರ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯುತ್ತಿರುವುದು ಬದುಕಿನ ದೊಡ್ಡ ಸಾಧನೆ.
ಎಸ್ ಪಿ ಬೆಟಗೇರಿ, ಪ್ರಾಂಶುಪಾಲ, ಶಿಕ್ಷಣ ಮತ್ತು ತರಬೇತಿ ಸಂಸ್ಥೆ( ಡೈಟ್ ) ಇಲಕಲ್. ಶಶಿಧರ್ ವಸ್ತ್ರದ