ಬದಲಾಯಿಸಿದ್ದಾರೆ. 1914ನೇ ಇಸವಿಯಲ್ಲಿ ಪ್ರಾರಂಭವಾದ ಶಾಲೆಗೆ ಹೊಸ ಕಾಯಕಲ್ಪ ನೀಡಿ, ವಿದ್ಯಾರ್ಥಿಗಳಿಗೆ ಆರೋಗ್ಯಕರ ವಾತಾವರಣ
ನಿರ್ಮಿಸುವ ಮೂಲಕ ಓದಿದ ಶಾಲೆಗೆ ಗೌರವ ನೀಡಿದ್ದಾರೆ.
Advertisement
ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುತ್ತಿದ್ದ ಕಾಲವೊಂದಿತ್ತು. ಕೋವಿಡ್ ಲಾಕ್‌ಡೌನ್‌ನಿಂದ ಸರ್ಕಾರಿ ಶಾಲೆಗಳ ಬೆಲೆ ಹಾಗೂ ಗುಣಮಟ್ಟದ ಬಗ್ಗೆ ಬಹುತೇಕ ಪೋಷಕರಿಗೆ ತಿಳಿಯುತ್ತಿದೆ. ತಾಲೂಕಿನ ಕಂದಿಕೆರೆ ಗ್ರಾಮದಲ್ಲಿ ಗ್ರಾಮಸ್ಥರು ಹಾಗೂ ಹಳೆ ವಿದ್ಯಾರ್ಥಿಗಳು ಒಂದು ಹೆಜ್ಜೆ ಮುಂದೆ ಹೋಗಿ, ಸರ್ಕಾರಿ ಶಾಲೆ ಯಾವ ಖಾಸಗಿ ಶಾಲೆಗೂ ಕಡಿಮೆ ಇರಬಾರದು ಎಂಬ ಮನಸ್ಥಿತಿಯಲ್ಲಿ 107 ವರ್ಷಗಳಹಳೆಯದಾದ ಶಾಲೆಗೆ ಸಂಪೂರ್ಣ ಆಕರ್ಷಕವಾದ ಬಣ್ಣ ಹೊಡೆದು, ಶಾಲೆಯನ್ನು ರಿಪೇರಿ ಮಾಡುವ ಮೂಲಕ ಶಾಲೆಯನ್ನು ಹೊಸ ರೂಪಕ್ಕೆ ತಂದು ನಿಲ್ಲಿಸಿದ್ದಾರೆ.
Related Articles
Advertisement
ಹಳ್ಳಿಯ ಸರ್ಕಾರಿ ಶಾಲೆಗೆ ಹೊಸ ರೂಪದಿಂದ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಆಧುನಿಕದಲ್ಲಿ ಹಳ್ಳಿ ಮಕ್ಕಳು ಓದಿನಲ್ಲಿ ಪೈಪೋಟಿಗೆ ಅನುಕೂಲವಾಗಿದೆ. ಕೋವಿಡ್ ನಂತರ ಹೆಚ್ಚಿನ ಮಕ್ಕಳು ಸರ್ಕಾರಿ ಶಾಲೆಗೆ ಸೇರಿದ್ದು, ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ.-ಕಾತ್ಯಾಹಿನಿ, ಶಿಕ್ಷಣಾಧಿಕಾರಿ, ಚಿ.ನಾ.ಹಳ್ಳಿ -ಚೇತನ್