Advertisement

ನಿರಾಶ್ರಿತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದನೆ

10:39 AM Aug 10, 2019 | Team Udayavani |

ಹಾನಗಲ್ಲ: 25 ವರ್ಷಗಳ ಹಿಂದಿನಂತೆ ಧಾರಾಕಾರ ಸುರಿಯುತ್ತಿರುವ ಮಳೆಗೆ ಬೆಳೆ ಹಾನಿ, ನೆರೆ ಹಾವಳಿ, ಮನೆಗಳು ಹಾನಿಯಾಗಿದ್ದು, ಊರುಗಳೆಲ್ಲ ಜಲಾವೃತಗೊಂಡು ಜನ ನಿರಾಶ್ರಿತರಾಗಿದ್ದಾರೆ. ಈ ಎಲ್ಲ ಸಮಸ್ಯೆಗಳಿಗೆ ಸೂಕ್ತ ಪರಿಹಾರೋಪಾಯ ನೀಡುವಲ್ಲಿ ಸರಕಾರಿ ಆಡಳಿತ ಚೆನ್ನಾಗಿ ಸ್ಪಂದಿಸುತ್ತಿದೆ ಎಂದು ಮಾಜಿ ಮುಖ್ಯ ಮಂತ್ರಿ ಜಗದೀಶ ಶೆಟ್ಟರ ತಿಳಿಸಿದರು.

Advertisement

ಶುಕ್ರವಾರ ಹಾನಗಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಲವು ಹಳ್ಳಿಗಳ ಜನರು ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದಾರೆ. ಅವರ ರಕ್ಷಣೆಗೆ ಪೂರ್ಣ ಪ್ರಮಾಣದ ಕಾರ್ಯ ನಡೆದಿದೆ. ಅಗತ್ಯವಿರುವಲ್ಲಿ ಬೋಟ್‌ಗಳನ್ನು ಒದಗಿಸಲಾಗಿದೆ. ವಿಳಂಬವಿಲ್ಲದೆ ಸರಿಯಾದ ರಕ್ಷಣೆ ಕಾರ್ಯ ನಡೆಯುತ್ತಿದೆ. ಮನೆ ಕಳೆದುಕೊಂಡವರಿಗೆ ಕೂಡಲೇ ಪರಿಹಾರ ನೀಡಲಾಗುತ್ತಿದೆ ಎಂದರು. ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮಂತ್ರಿಮಂಡಲ ರಚನೆಯಾಗದಿರುವುದಕ್ಕೂ, ಇಂತಹ ಸಂಕಷ್ಟದಲ್ಲಿ ಜನರಿಗೆ ಸಹಾಯಕ್ಕೆ ನಿಲ್ಲುವ ವಿಷಯಕ್ಕೂ ತಳುಕು ಹಾಕುವ ಅಗತ್ಯವಿಲ್ಲ. ಯಾರಿಗೆ ಯಾವುದೇ ಅಧಿಕಾರ ಇರಲಿ, ಇಲ್ಲದಿರಲಿ ನಾವೆಲ್ಲ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರೂ ಸಹ ಯದ್ಧೋಪಾದಿಯಲ್ಲಿ ಸರಕಾರದ ಪರವಾಗಿ ಕಾರ್ಯ ಕೈಗೊಂಡಿದ್ದಾರೆ. ಅವರೊಂದಿಗಿರುವ ಮಾಜಿ ಮಂತ್ರಿಗಳು, ಹಾಲಿ ಶಾಸಕರು, ಎಲ್ಲರೂ ಈ ಕಾರ್ಯದಲ್ಲಿ ತೊಡಿಗಿದ್ದೇವೆ ಎಂದರು.

ಐದಾರು ದಿನಗಳಿಂದ ಸಂಪೂರ್ಣ ವಾಗಿ ಈ ಕಾರ್ಯದಲ್ಲಿ ನಾನು ತೊಡಿಗಿಕೊಂಡಿದ್ದೇನೆ. ಧಾರವಾಡ, ಗದಗ, ಹಾವೇರಿ ಜಿಲ್ಲೆಗಳ ಸಂತ್ರಸ್ತರ ಪ್ರದೇಶಗಳಿಗೆ, ಆತಂಕದ ಸ್ಥಳಗಳಿಗೆ ಭೇಟಿ ನೀಡಿ ಪರಿಹಾರ ಕಾರ್ಯಕ್ಕಾಗಿ ಸರಕಾರಿ ಆಡಳಿತದ ಮೂಲಕ ನಮ್ಮ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದೇವೆ. ಶನಿವಾರ ಕಾರವಾರ ಜಿಲ್ಲೆಯ ಮಳೆ ಹಾನಿ ಸ್ಥಳಗಳಿಗೆ ಭೇಟಿ ನೀಡುತ್ತಿದ್ದೇನೆ ಎಂದರು. ಸರಕಾರದ ಜತೆಗೆ ಸಾರ್ವಜನಿಕರ ಸಹಕಾರವೂ ಅಗತ್ಯವಿದೆ. ಇದೇ ಹಾನಗಲ್ಲಿನಲ್ಲಿ ಚನ್ನಪ್ಪ ಶಂಕ್ರಪ್ಪ ಮಲ್ಲಾಡದ ಅವರು 1 ಲಕ್ಷ ರೂ.ಗಳನ್ನು ಮಳೆಯಿಂದಾಗಿ ಹಾನಿಗೊಳಗಾದ ಸಂತ್ರಸ್ತರಿಗೆ ನೀಡಿರುವುದು ಸಾಕ್ಷಿಯಾಗಿದೆ. ಇಂಥ ಸಂದರ್ಭಗಳಲ್ಲಿ ಎಲ್ಲರೂ ಒಟ್ಟಾಗಿ ನೇರವು ನೀಡಿ ಸೇವೆಗೆ ಮುಂದಾಗೋಣ ಎಂದರು.

ಸಂಸದ ಶಿವಕುಮಾರ ಉದಾಸಿ, ಶಾಸಕ ಸಿ.ಎಂ.ಉದಾಸಿ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನ, ಸವಣೂರು ಉಪವಿಭಾಗಾಧಿಕಾರಿ ಹರ್ಷದ ಬೋಯರ್‌ ನಾರಾಯಣರಾವ, ತಹಸೀಲ್ದಾರ್‌ ಎಂ.ಗಂಗಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next