ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 8ರಂದು 1000, 500 ರೂಪಾಯಿ ಮುಖಬೆಲೆಯ ನೋಟುಗಳನ್ನು ದಿಢೀರ್ ಆಗಿ ನಿಷೇಧಿಸಿ, ಕೆಲವು ತಿಂಗಳು ಕಳೆಯುತ್ತಾ ಬಂದಿದೆ. ಏತನ್ಮಧ್ಯೆ ಒಂದು ಸಾವಿರ ರೂಪಾಯಿ ನೋಟನ್ನು ಹೊಸ ರೂಪದಲ್ಲಿ ಮತ್ತೆ ಚಲಾವಣೆಗೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
1ಸಾವಿರ ರೂ. ಮುಖಬೆಲೆಯ ನೋಟುಗಳ ಮುದ್ರಣ ಈಗಾಗಲೇ ಆರಂಭಗೊಂಡಿದೆ. ಶೀಘ್ರವೇ ಅದನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ವಿವರಿಸಿದೆ.
ಜನವರಿ ತಿಂಗಳಿನಲ್ಲಿಯೇ ಹೊಸ ರೂಪದ 1 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡುವ ಬಗ್ಗೆ ಆರ್ ಬಿಐ ಸಿದ್ಧತೆ ನಡೆಸಿತ್ತು. ಅದೀಗ ತಾಂತ್ರಿಕ ಕಾರಣಗಳಿಂದ ಮುಂದೂಡಿದೆ ಎಂದು ಹೇಳಿದೆ. ಆ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ರೂಪದ 1 ಸಾವಿರ ರೂ. ನೋಟು ಹರಿದಾಡುತ್ತಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಫೋಟನ್ನೇ ಬಿಡುಗಡೆ ಮಾಡಲಿದ್ದಾರೆ ಎಂಬುದನ್ನು ನಾವು ಖಚಿತಪಡಿಸುವುದಿಲ್ಲ ಎಂದು ವರದಿ ಹೇಳಿದೆ.
ಈಗಾಗಲೇ ಬಿಡುಗಡೆಯಾಗಿರುವ 2ಸಾವಿರ ರೂ.ಮುಖಬೆಲೆಯ ನೋಟಿನಂತೆಯೇ 1 ಸಾವಿರ ರೂ. ಹೊಸ ನೋಟಿಗೆ ಹೋಲಿಕೆ ಇದೆ. ಕುತೂಹಲಕಾರಿ ವಿಷಯ ಏನಪ್ಪಾ ಅಂದರೆ 2 ಸಾವಿರ ಮುಖಬೆಲೆಯ ಹೊಸ ನೋಟು ಬಿಡುಗಡೆ ಆಗುವ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿತ್ತು ಎಂದು ವರದಿ ತಿಳಿಸಿದೆ.