Advertisement

ತೀರ್ಥಕ್ಷೇತ್ರ ದರ್ಶನಕ್ಕೆ ಸರ್ಕಾರದ ಯೋಜನೆ “ಪುನೀತ ಯಾತ್ರೆ’

06:30 AM Jul 31, 2017 | Team Udayavani |

ಬೆಂಗಳೂರು: ಚುನಾವಣೆಗಳು ಸಮೀಪಿಸಿದಂತೆಲ್ಲ ಆಡಳಿತರೂಢ ಸರ್ಕಾರಗಳು ಜನರನ್ನು ಸೆಳೆಯುವ
ಸಲುವಾಗಿ ಜನಪ್ರಿಯ ಯೋಜನೆಗಳನ್ನು ಘೋಷಿಸುವುದು, ಜಾರಿಗೆ ತರುವುದು ಸಹಜ. ಅಂತೆಯೇ ಕರ್ನಾಟಕ ರಾಜ್ಯ
ಸರ್ಕಾರವು ಇದುವರೆಗೆ ಜಾರಿಗೊಳಿಸಿರುವ “ಭಾಗ್ಯ’ಗಳ ಜತೆಗೆ ಪ್ರವಾಸೋದ್ಯಮ ಇಲಾಖೆ ಮೂಲಕ “ಪುನೀತ ಯಾತ್ರೆ’ ಎಂಬ ನೂತನ ಯೋಜನೆಯೊಂದನ್ನು ಸದ್ಯದಲ್ಲೇ ಘೋಷಣೆ ಮಾಡಲಿದೆ.

Advertisement

ಜೀವನ ಯಾತ್ರೆ ಮುಗಿಸುವುದರೊಳಗೆ ಒಮ್ಮೆ ಪ್ರಸಿದ್ಧ ಪುಣ್ಯಕ್ಷೇತ್ರಗಳ ತೀರ್ಥಯಾತ್ರೆ ಮಾಡಬೇಕೆಂಬ ಬಯಕೆ
ಎಲ್ಲಾ ಆಸ್ತಿಕರಿಗೂ ಇರುತ್ತದೆ. ಆದರೆ, ಬಹುತೇಕರಿಗೆ ತಮ್ಮ ಬಯಕೆಯನ್ನು ಈಡೇರಿಸಿಕೊಳ್ಳಲು ಸಾಧ್ಯವಾಗದೆ
ಕೊರಗುತ್ತಿರುತ್ತಾರೆ. ಈ ಕೊರಗನ್ನು ನಿವಾರಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಪ್ರವಾಸೋದ್ಯಮ ಇಲಾಖೆ ಮೂಲಕ ರಾಜ್ಯ ಪ್ರವಾಸೋದ್ಯಮ ಅಭಿವೃದಿಟಛಿ ನಿಗಮದ ಉಸ್ತುವಾರಿಯಲ್ಲಿ “ಪುನೀತ ಯಾತ್ರೆ’ ಎಂಬ ತೀರ್ಥಕ್ಷೇತ್ರಗಳ ಪ್ರವಾಸ ಯೋಜನೆಯನ್ನು ಸಿದ್ಧಪಡಿಸಿದೆ.

ಶೇ.25 ಸಹಾಯಧನ: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಪುನೀತ ಯಾತ್ರೆಯ ಉಸ್ತುವಾರಿ ವಹಿಸಿಕೊಳ್ಳಲಿದ್ದು, ಪುನೀತ ಯಾತ್ರೆಯ ಪ್ರತಿ ಯಾತ್ರಾರ್ಥಿಗೆ 2,844 ರೂ. ವೆಚ್ಚವನ್ನು ಆಂದಾಜು ಮಾಡಲಾಗಿದೆ. ಅದರಲ್ಲಿ ಸರ್ಕಾರವು ಶೇ.25 ಸಹಾಯಧನ ನೀಡಲಿದೆ. ಉಳಿದ ವೆಚ್ಚವನ್ನು ಯಾತ್ರಾರ್ಥಿಗಳೇ ಭರಿಸಬೇಕು. ಮೊದಲ ವರ್ಷದಲ್ಲಿ 1,38,648 ಯಾತ್ರಾರ್ಥಿಗಳು ಪುನೀತ ಯಾತ್ರೆಗೆ ತೆರಳಲಿದ್ದು, ಪುನೀತ ಯಾತ್ರೆಗೆ ನಿಗಮವು ತನ್ನ ಬಸ್‌ಗಳನ್ನೇ ಬಳಸಲಿದೆ.

21 ಮಾರ್ಗ ಅಂತಿಮ: ಈ ಸಂಬಂಧ ರಾಜ್ಯ ಸರ್ಕಾರ ಜು.11ರಂದೇ ಅದೇಶ ಹೊರಡಿಸಿದ್ದು, ಆಗಸ್ಟ್‌ ಅಂತ್ಯದೊಳಗೆ
ಯೋಜನೆಗೆ ಚಾಲನೆಯೂ ಸಿಗಲಿದೆ. ಪುನೀತ ಯಾತ್ರೆಗೆ ಪ್ರಯಾಣಿಕರನ್ನು ಸೆಳೆಯಬಲ್ಲ ಧಾರ್ಮಿಕ ಮತ್ತು ಸಾಮಾಜಿಕವಾಗಿ ಪ್ರಭಾವ ಬೀರುವ ಮಾರ್ಗಗಳನ್ನು ಸೇರಿಸಿ ರಾಜ್ಯ ಮತ್ತು ಹೊರರಾಜ್ಯದ 21 ಪ್ರಮುಖ ಸ್ಥಳಗಳ ಮಾರ್ಗವನ್ನು ಅಂತಿಮಗೊಳಿಸಲಾಗಿದೆ.

ಈ ಮಾರ್ಗದಲ್ಲಿ ಎಲ್ಲಾ ಜಾತಿ ಧರ್ಮದವರಿಗೂ ಅವಕಾಶ ನೀಡುವ ಉದ್ದೇಶದಿಂದ ಎಲ್ಲಾ ಜಾತಿ ಧರ್ಮದವರ
ಪುಣ್ಯಕ್ಷೇತ್ರಗಳನ್ನೊಳಗೊಂದ 21 ಮಾರ್ಗವನ್ನು ಗುರುತಿಸಲಾಗಿದೆ. ಆದರೆ ಸಂದರ್ಭಕ್ಕನುಗುಣವಾಗಿ ಸಣ್ಣಪುಟ್ಟ
ಬದಲಾವಣೆ ಮಾಡಿಕೊಳ್ಳಬಹುದು. ಪ್ರವಾಸಕ್ಕೆ ಹೋಗುವವರು ತಮ್ಮಿಷ್ಟದ ಕ್ಷೇತ್ರ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬಹುದು. ಆ ಸ್ಥಳಕ್ಕೆ ಬೇರೆಯವರೂ ಹೋಗುವುದಕ್ಕೆ ಯಾವುದೇ ನಿರ್ಬಂಧವಿಲ್ಲ. ಅಂತಿಮವಾಗಿ ಸಣ್ಣಪುಟ್ಟ ಬದಲಾವಣೆ ಮಾಡಲಾಗುತ್ತದೆ. ಪುನೀತ ಯಾತ್ರೆಯ ಸ್ಥಳ ಹಾಗೂ ಮಾರ್ಗವನ್ನು ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರ ಸಮ್ಮುಖದಲ್ಲೇ ಅಂತಿಮಗೊಳ್ಳಲಿದೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Advertisement

ಪುನೀತ ಯಾತ್ರೆ ಯೋಜನೆಯನ್ನು ಆದಷ್ಟು ಶೀಘ್ರದಲ್ಲೇ ಘೋಷಣೆ ಮಾಡಲಿದ್ದೇವೆ. ಇದು ಯಾವುದೇ ಜಾತಿ, ಧರ್ಮದವರನ್ನು ಪ್ರೇರೇಪಿಸುವ ಯೋಜನೆಯಲ್ಲ. 21 ಮಾರ್ಗವನ್ನು ಅಂತಿಮಗೊಳಿಸಿದ್ದೇವೆ. ಯೋಜನೆ
ಯಲ್ಲಿರುವ ಕೆಲವೊಂದು ನ್ಯೂನತೆಯನ್ನು ಸರಿಪಡಿಸಿ, ಮುಖ್ಯಮಂತ್ರಿಯರ ಅನುಮತಿ ಪಡೆದು, ಅವರ ಮೂಲಕವೇ ಚಾಲನೆ ನೀಡಲಾಗುತ್ತದೆ.

– ಪ್ರಿಯಾಂಕ ಖರ್ಗೆ,
ಪ್ರವಾಸೋದ್ಯಮ ಸಚಿವ.

Advertisement

Udayavani is now on Telegram. Click here to join our channel and stay updated with the latest news.

Next