Advertisement
ಯಾದಗಿರಿ ಜಿ.ಪಂ. ಸಭಾಂಗಣದಲ್ಲಿ ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಬಿ.ಚವ್ಹಾಣ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಶಾಸಕರು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
Related Articles
Advertisement
ಸರ್ಕಾರದ ಮಟ್ಟದಲ್ಲಿ ಜಿಲ್ಲೆಯ ಸಮಸ್ಯೆಯ ಕುರಿತು ಬೆಳಕು ಚೆಲ್ಲಿ, ತಾನು ಆಡಳಿತ ಪಕ್ಷದ ಶಾಸಕನಾಗಿ ಸರ್ಕಾರಕ್ಕೆ ಕೆಟ್ಟ ಹೆಸರು ತರಿವುದು ತನಗೂ ಇಷ್ಟವಿಲ್ಲ ಎಂದು ಸಚಿವರೆದುರು ಬೇಸರದ ಮಾತುಗಳನ್ನಾಡಿದರು.
ಬೇರೆ ಜಿಲ್ಲೆಯಿಂದ ಕಾರ್ಮಿಕರನ್ನು ಕರೆತರಲು ಸರ್ಕಾರ ಉಚಿತ ಬಸ್ ವ್ಯವಸ್ಥೆ ಮಾಡಿತ್ತು ಆದರೆ ಯಾದಗಿರಿ ಜಿಲ್ಲೆಯಲ್ಲಿ ಕೇವಲ 15 ಬಸ್ ಉಚಿತ ಸೇವೆ ನೀಡಿದ್ದು 18 ಬಸ್ ಗಳಿಗೆ ತಾನು ಸ್ವತಾ ದುಡ್ಡು ಪಾವತಿಸಿ ಕಾರ್ಮಿಕರನ್ನು ಕರೆಯಿಸಿದ್ದೇನೆ ಎಂದರು.
ಮೊದಲೇ ಜನರ ಬಳಿ ದುಡ್ಡಿಲ್ಲ ಈ ಸಂದರ್ಭದಲ್ಲಿ ದುಪ್ಪಟ್ಟು ದುಡ್ಡು ಪಡೆಯುವುದು ಸರಿಯಲ್ಲ ಸಾರಿಗೆ ಇಲಾಖೆ ಮಾನವೀಯತೆ ತೋರಬೇಕು,ಅದು ಸರ್ಕಾರದ ಅಂಗ ಇದರಿಂದ ಸರ್ಕಾರಕ್ಕು ಒಳ್ಳೆಯ ಹೆಸರು ಬರಲ್ಲ ಎಂದರು.
ವಿಜಯಪುರದ ಇಂಡಿಯಿಂದ ಸುರಪುರಕ್ಕೆ ಉಚಿತ ಬಸ್ ಬರಲು ತಯಾರಿರಲಿಲ್ಲ .ತಾನು ಸ್ವತಃ 18 ಸಾವಿರ ಪಾವತಿಸಿದ ಬಳಿಕ ಬಸ್ ಬಿಡಲಾಯಿತು ಎಂದು ಸಚಿವರ ಗಮನಕ್ಕೆ ತಂದರು
ಇಂತಹದ್ದರಿಂದ ಸರ್ಕಾರಗಳು ಘೋಷಿಸಿರುವ ನೆರವು ಪ್ಯಾಕೇಜ್ ಗಳು ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗುತ್ತದೆ ಎಂದು ಸಚಿವರೆದುರು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಕೂರ್ಮಾರಾವ್ ಮಾತನಾಡಿ, 363 ಉಚಿತ ಬಸ್ ಗಳ ಮೂಲಕ ಬೆಂಗಳೂರಿನಿಂದ ಕಾರ್ಮಿಕರು ಜಿಲ್ಲೆಗೆ ಆಗಮಿಸಿದ್ದು, ಜಿಲ್ಲೆಯಲ್ಲಿ 72 ಉಚಿತ ಬಸ್ ಸಂಚಾರವಾಗಿದೆ ಹಾಗೂ ಕಲಬುರಗಿಯಿಂದ 17 ಬಸ್ ಗಳು ಜಿಲ್ಲೆಗೆ ಬಂದಿದ್ದು ಸರ್ಕಾರದ ನಿರ್ದೇಶನದಂತೆ ಉಚಿತ ಸಾರಿಗೆ ವ್ಯವಸ್ಥೆ ಯಾಗಿದೆ ಎಂದು ಸ್ಪಷ್ಟನೆ ನೀಡಿದರು.