Advertisement

ಸರಕಾರಿ ಕಚೇರಿಗಳು ಪುನರ್ವಸತಿ ಕೇಂದ್ರಗಳಲ್ಲ: ಡಿಸಿ ತರಾಟೆ

11:21 AM Nov 14, 2018 | Harsha Rao |

ಕುಂದಾಪುರ: ಸರಕಾರಿ ಕಚೇರಿಗಳೆಂದರೆ ಪುನರ್ವಸತಿ ಕೇಂದ್ರಗಳಲ್ಲ. ಕೆಲಸ ಮಾಡದಿದ್ದರೆ ಸಕಾರಣ ನೀಡಿ. ಸಬೂಬು ಬೇಡ. ಸರಕಾರದ ಕೆಲಸಗಳು ಕಡ್ಡಾಯ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಗ್ರಾಮಕರಣಿಕ ಹಾಗೂ ಗ್ರಾಮ ಸಹಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Advertisement

ಕುಂದಾಪುರ ತಾ.ಪಂ.ನಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮ ಕರಣಿಕರು ಗ್ರಾಮ ಸಹಾಯಕರನ್ನು ಬಳಸಿಕೊಂಡು ಪಡಿತರ ಚೀಟಿ ದಾಖಲಾತಿ ಪರಿಶೀಲನೆ ಮಾಡಬೇಕು. 2,600 ಪಡಿತರ ಚೀಟಿಗಳು ಪರಿಶೀಲನೆಗೆ ಬಾಕಿ ಇದ್ದು, ನೆಪ ಹೇಳದೆ ವಾರಾಂತ್ಯದೊಳಗೆ ಮುಗಿಸಬೇಕು ಎಂದರು.

ನಿಧಾನಗತಿ ಏಕೆ?
ಸೆ. 7ರಂದು ಮುಖ್ಯಮಂತ್ರಿಗಳು ಪ್ರಗತಿ ಪರಿಶೀಲನೆ ವೇಳೆ ಪಡಿತರ ಚೀಟಿ ತತ್‌ಕ್ಷಣ ವಿತರಣೆಗೆ ಸೂಚಿಸಿದ್ದರೂ ಬೈಂದೂರು ಹಾಗೂ ಕುಂದಾಪುರ ತಾಲೂಕಿನಲ್ಲಿ ಇಷ್ಟು ಪ್ರಮಾಣದ ಅರ್ಜಿ ಬಾಕಿ ಇರುವುದು ಕೆಲಸದ ನಿಧಾನಗತಿಯನ್ನು ಸೂಚಿಸುತ್ತದೆ; ಯಾಕೆ ಹೀಗೆ ಎಂದು ಪ್ರಶ್ನಿಸಿದರು.

ಅಕ್ರಮ ಸಕ್ರಮ ಯೋಜನೆಯಲ್ಲಿ 94ಸಿ ಹಾಗೂ 94ಸಿಸಿಯಲ್ಲಿ ಹಕ್ಕುಪತ್ರ ಆದವರಿಗೆ 45 ದಿನಗಳೊಳಗೆ ಖಾತಾ ಬದಲಾವಣೆ ಮಾಡಬೇಕು. 9/11 ಹಾಗೂ ಖಾತಾ ಜೋಡಣೆಯನ್ನು ಹಕ್ಕುಪತ್ರ ನೀಡುವಾಗಲೇ ಮಾಡಬೇಕು ಎಂದು ಕಂದಾಯ ಸಚಿವರು ಸೂಚಿಸಿದ್ದು, ಕಾರವಾರದಲ್ಲಿ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಫ‌ಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಿದ್ದಾರೆ ಎಂದರು.

ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಬೆಳೆ ಸರ್ವೆ ತತ್‌ಕ್ಷಣ ಮುಗಿಸಬೇಕು, ಗ್ರಾ.ಪಂ.ಗಳಲ್ಲಿ ನಿವೇಶನ ಕಾದಿರಿಸುವಾಗ ಕಂದಾಯ, ಪಂಚಾಯತ್‌ರಾಜ್‌ ಅಧಿಕಾರಿಗಳು ಸ್ಥಳ ಪರಿಶೀಲಿಸಬೇಕು ಎಂದರು.

Advertisement

35 ಸಾವಿರ ಯುವಜನತೆ
ಉಡುಪಿ ಜಿಲ್ಲೆಯಲ್ಲಿ 18ರ ವಯೋಮಾನದ ಆಸುಪಾಸಿನಲ್ಲಿ 35 ಸಾವಿರ ಮಂದಿ ಇದ್ದು,
ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭ ಅವರನ್ನು ಸೇರಿಸಬೇಕು. ಇದಕ್ಕೆ ಪ್ರಚಾರ ವ್ಯವಸ್ಥೆಗಳನ್ನು ಮಾಡಿ, ನ. 20ರ ವರೆಗೆ ಕುಂದಾಪುರ, ಡಿ. 20ರ ವರೆಗೆ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಹೆಸರು ಸೇರಿಸಬಹುದು. ನ. 15ರಂದು ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿ ವೀಕ್ಷಕರು ಬರಲಿದ್ದಾರೆ. 7,000 ಇವಿಎಂಗಳನ್ನು ಪರಿಶೀಲನೆಗೆ ಒಳಪಡಿಸಲಾಗುವುದು ಎಂದರು.

ಸಹಾಯಕ ಕಮಿಷನರ್‌ ಟಿ. ಭೂಬಾಲನ್‌, ಕುಂದಾಪುರ ತಹಶೀಲ್ದಾರ್‌ ತಿಪ್ಪೆಸ್ವಾಮಿ, ಬೈಂದೂರು ತಹಶೀಲ್ದಾರ್‌ ಕಿರಣ್‌ ಗೋರಯ್ಯ, ತಾ.ಪಂ. ಇಒ ಕಿರಣ ಪೆಡೆ°àಕರ್‌ ಉಪಸ್ಥಿತರಿದ್ದರು.

ಎಲ್ಲ ಗ್ರಾ.ಪಂ.ಗಳಲ್ಲಿ ಆರ್‌ಟಿಸಿ
ಕೆಲವು ಗ್ರಾ.ಪಂ.ಗಳಲ್ಲಿ ಪಹಣಿ ಪತ್ರಿಕೆ ವಿತರಿಸಲು ಸಮಸ್ಯೆ ಉಂಟಾಗಿದೆ ಎನ್ನುವುದು ಡಿಸಿಯವರ ಗಮನಕ್ಕೆ ಬಂತು. ಪಹಣಿ ತೆಗೆಯಲು ಎಸ್‌ಬಿಐಯಲ್ಲಿ ರಿಚಾರ್ಜ್‌ ಮಾಡಲಾಗುತ್ತಿಲ್ಲ. ತೆಕ್ಕಟ್ಟೆ ಮತ್ತು ಕೆಲವೆಡೆ ಶೂನ್ಯ ಮೊತ್ತದ ಖಾತೆಗಳನ್ನು ಆರ್‌ಬಿಐ ನಿಯಮದಂತೆ ಎಸ್‌ಬಿಐ ರದ್ದು ಮಾಡಿದ್ದು, 10 ಸಾವಿರ ರೂ. ಹಣ ಕಟ್ಟಿ ಪ್ರತ್ಯೇಕ ಚಾಲ್ತಿ ಖಾತೆ ತೆರೆಯಬೇಕಿದೆ ಎಂದು ಪಿಡಿಒಗಳು ಸಮಸ್ಯೆ ಬಿಚ್ಚಿಟ್ಟರು. ಇದಕ್ಕೆ ಪರಿಹಾರ ಸೂಚಿಸಿದ ಡಿಸಿ, ಎಲ್ಲ ಪಂಚಾಯತ್‌ಗಳಲ್ಲೂ ಆರ್‌ಟಿಸಿ ನೀಡಬೇಕೆಂದು ತಾಕೀತು ಮಾಡಿದರು. ಬಡ್ಡಿ ಹಣದ ದುರ್ಬಳಕೆ ತಡೆಗಾಗಿ ಸರಕಾರಿ ಇಲಾಖೆಗಳ ಬ್ಯಾಂಕ್‌ ಖಾತೆಗಳನ್ನು ಉಳಿತಾಯ ಖಾತೆಯಲ್ಲಿ ತೆರೆಯದೆ ಬಡ್ಡಿ ಬರದ ಚಾಲ್ತಿ ಖಾತೆಯಲ್ಲಿಯೇ ತೆರೆಯುವಂತೆ ನಿಯಮ ಮಾಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next