Advertisement

ಸರ್ಕಾರಿ ಭೂಮಿ ಒತ್ತುವರಿ ತೆರವಿಗೆಸಿಎಂ ಸೂಚನೆ

08:16 AM Nov 08, 2017 | |

ಬೆಂಗಳೂರು: ಎ.ಟಿ.ರಾಮಸ್ವಾಮಿ ವರದಿ ಆಧರಿಸಿ ರಾಜಧಾನಿ ಬೆಂಗಳೂರಿನಲ್ಲಿ ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಿದಂತೆ ವಿ. ಬಾಲಸುಬ್ರಮಣ್ಯಂ ವರದಿ ಆಧರಿಸಿ ರಾಜ್ಯದ ಇತರೆಡೆಗಳಲ್ಲಿ ಆಗಿರುವ ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಸಿಇಒಗಳ ಸಭೆಯಲ್ಲಿ ಮಾತನಾಡಿದ ಅವರು, ಖಾಸಗಿಯವರು ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಭೂಮಿ ಯನ್ನು ಅವರಿಂದ ತೆರವುಗೊಳಿಸಿ ಸರ್ಕಾರದ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳ  ಬೇಕೆಂದು ಹೇಳಿದರು.

ರಾಜಧಾನಿ ಬೆಂಗಳೂರಿನಲ್ಲಿ 34,111 ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿದೆ. ಅದರಲ್ಲಿ 7781 ಎಕರೆ ಸಾರ್ವಜನಿಕ ಉದ್ದೇಶಕ್ಕೆ ಆಗಿದೆ ಎಂದು ಎ.ಟಿ.ರಾಮಸ್ವಾಮಿ ವರದಿ ನೀಡಿದ್ದರು. ಇದುವರೆಗೆ ಒತ್ತುವರಿಯಾಗಿರುವ 11,960 ಎಕರೆ ಸರ್ಕಾರಿ ಜಮೀನಿನಲ್ಲಿ 11,660 ಎಕರೆ ಸರ್ಕಾರಿ ಭೂಮಿಯನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ತೆರವುಗೊಳಿಸಿದ್ದಾರೆ. ಇದಲ್ಲದೆ, ಇತರೆ
ಒತ್ತುವರಿಯಾಗಿರುವ 6000 ಎಕರೆಯನ್ನೂ ತೆರವುಗೊಳಿಸಲಾಗಿದೆ. ಇದೇ ಮಾದರಿಯಲ್ಲಿ ವಿ.ಬಾಲಸುಬ್ರಮಣ್ಯಂ ವರದಿಯಲ್ಲಿ ಹೇಳಿರುವಂತೆ ರಾಜ್ಯದ ಇತರೆಡೆ ಆಗಿರುವ ಒತ್ತುವರಿಯನ್ನೂ ಆದ್ಯತೆ ಮೇಲೆ ತೆರವುಗೊಳಿಸಬೇಕು ಎಂದು ಸೂಚಿಸಿದರು.

ಒತ್ತುವರಿ ತೆರವಾದರೆ ಆ ಭೂಮಿಯನ್ನು ರೈಲ್ವೆ, ರಸ್ತೆ, ಶಾಲಾ ಕಟ್ಟಡ ಹಾಗೂ ವಸತಿ ನಿಲಯಗಳಂತಹ ಸಾರ್ವಜನಿಕ ಹಿತದೃಷ್ಠಿಯ ಸರ್ಕಾರದ ವಿವಿಧ ಯೋಜನೆ ಹಾಗೂ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಬಳಸಿಕೊಳ್ಳ ಬಹುದು ಎಂದು ಹೇಳಿದರು.

ಈ ಹಿಂದೆ ಜಿಲ್ಲಾಧಿಕಾರಿಗಳೇ ನಿರ್ವಹಿಸುತ್ತಿದ್ದ ಹಲವು ಜವಾಬ್ದಾರಿಗಳು ಹೆಚ್ಚುವರಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಹಂಚಿಕೆ ಯಾಗಿ ಜಿಲ್ಲಾಧಿಕಾರಿಗಳ ಮೇಲಿನ ಒತ್ತಡ ಕಡಿಮೆಯಾಗಿದೆ. ಆದ್ದರಿಂದ ಅವರು ಸರ್ಕಾರಿ ಭೂಮಿ ಮಂಜೂರಾಗಿರುವ ಸಂಘ-ಸಂಸ್ಥೆಗಳ ಬಗ್ಗೆ ನಿಗಾ ಇಟ್ಟು ಮಂಜೂರಾದ ಭೂಮಿ ಅದೇ ಉದ್ದೇಶಕ್ಕೆ
ಬಳಕೆಯಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಜತೆಗೆ ಸರ್ಕಾರಿ ಜಮೀನು ಹಾಗೂ ವಕ್ಫ್ ಆಸ್ತಿಗಳ ಒತ್ತುವರಿ, ರಸ್ತೆಗಳು ಹಾಗೂ
ಕೆರೆ-ಕುಂಟೆಗಳ ಅತಿಕ್ರಮಣದಂತಹ ಪ್ರಕರಣಗಳತ್ತ ಆಧ್ಯ ಗಮನ ಹರಿಸಬೇಕು ಎಂದು ಸೂಚಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next