Advertisement
ಒಂದು ವೇಳೆ ಲಸಿಕೆ ನೀಡಿದ ನಂತರ ವ್ಯಕ್ತಿ ಮೃತಪಟ್ಟರೆ, ಅಂತಹ ಪ್ರಕರಣಗಳಲ್ಲಿ ಪರಿಹಾರಕ್ಕಾಗಿ ಅರ್ಜಿದಾರರು ಸಿವಿಲ್ ಕೋರ್ಟ್‌ನಲ್ಲಿ ದಾವೆ ಹೂಡಬಹುದಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.ಕಳೆದ ವರ್ಷ ಕೊರೊನಾ ಲಸಿಕೆ ನೀಡಿದ ನಂತರ ಇಬ್ಬರು ಯುವತಿಯರು ಮೃತಪಟ್ಟ ಹಿನ್ನೆಲೆಯಲ್ಲಿ ಅವರು ಪೋಷಕರು ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯೆಯಾಗಿ ಕೇಂದ್ರ ಸರ್ಕಾರ ಈ ಅಫಿಡೆವಿಟ್ ಸಲ್ಲಿಸಿದೆ.