Advertisement
ಪರಿಸ್ಥಿತಿಯ ಬಗ್ಗೆ ವಿಶ್ಲೇಷಿಸಲು ಫಡ್ನವೀಸ್ ಅವರು ಕಲ್ಯಾಣ್-ಡೊಂಬಿವಲಿಯ ಕೋವಿಡ್ -19 ಆಸ್ಪತ್ರೆಗಳಿಗೆ ಭೇಟಿ ನೀಡಿದರು. ಕಲ್ಯಾಣ್ ಪಶ್ಚಿಮದ ಹೋಲಿಕ್ರಾಸ್ ಕೋವಿಡ್ -19 ಆಸ್ಪತ್ರೆಗೆ ಭೇಟಿ ನೀಡಿದ ಅವರು ರೋಗಿಗಳ ಯೋಗಕ್ಷೇಮ ವಿಚಾರಿಸಿ ವೈದ್ಯರೊಂದಿಗೆ ಚರ್ಚಿಸಿದರು. ಕಲ್ಯಾಣ್ -ಡೊಂಬಿವಲಿ ಮುನ್ಸಿಪಲ್ ಕಾರ್ಪೊರೇಷನ್ (ಕೆಡಿಎಂಸಿ) ಶನಿವಾರ 555 ಹೊಸ ಪ್ರಕರಣ ಗಳನ್ನು ದಾಖಲಿಸಿದ್ದು, ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 8,604 ಕ್ಕೆ ಏರಿಕೆಯಾಗಿದೆ. ಪ್ರತಿ ದಿನವೂ 400-500 ಪ್ರಕರಣಗಳು ದಾಖಲಾಗುತ್ತಿರುವುದು ಆತಂಕತದ ವಿಷಯವಾಗಿದೆ. ಈಗ ಇದರ ಬಗ್ಗೆ ಎಚ್ಚರಿಕೆ ವಹಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಕಲ್ಯಾಣ್-ಡೊಂಬಿವಲಿಯಲ್ಲಿನ ಕೋವಿಡ್ -19 ಪ್ರಕರಣಗಳು ನಿಯಂತ್ರಣಕ್ಕೆ ಬರುವುದಿಲ್ಲ. ಕಡಿಮೆ ಮಾನವಶಕ್ತಿಯೊಂದಿಗೆ, ನಾಗರಿಕ ಸಂಸ್ಥೆಯು ಅಸ್ತಿತ್ವದಲ್ಲಿರುವ ಸಾಕಷ್ಟುಮೂಲಸೌಕರ್ಯ ಹೊಂದಿರದ ಆಸ್ಪತ್ರೆಗಳಲ್ಲಿ ರೋಗಿಗಳನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾಗರಿಕ ಸಂಸ್ಥೆಗೆ ಹೆಚ್ಚುವರಿ ಮಾನವಶಕ್ತಿಯನ್ನು ಒದಗಿಸಬಹುದೇ ಎಂಬುವುದನ್ನು ರಾಜ್ಯ ಸರಕಾರವು ಪರಿಶೀಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದರು.
Advertisement
“ಕಲ್ಯಾಣ್-ಡೊಂಬಿವಲಿಯತ್ತ ಸರಕಾರದ ಗಮನ ಅಗತ್ಯ’
05:30 PM Jul 07, 2020 | Suhan S |
Advertisement
Udayavani is now on Telegram. Click here to join our channel and stay updated with the latest news.