ಹೊಸದಿಲ್ಲಿ: “ದೇಶದಲ್ಲಿ ಕಾರು ಅಪಘಾತಗಳಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಕಾರುಗಳಲ್ಲಿಯೂ 6 ಏರ್‌ಬ್ಯಾಗ್‌ಗಳನ್ನು ಕಡ್ಡಾಯ ಮಾಡಲಾಗುವುದು” ಎಂದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, “ಕಾರುಗಳಲ್ಲಿ ಹೆಚ್ಚು ಸುರಕ್ಷತ ಕ್ರಮಗಳನ್ನು ಅನುಸರಿಸಿದ್ದರೆ 2020ರಲ್ಲಿ 13 ಸಾವಿರ ಮಂದಿಯ ಪ್ರಾಣ ಉಳಿಸಬಹುದಿತ್ತು’ ಎಂದೂ ಹೇಳಿದ್ದಾರೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈಗಾಗಲೇ ಸುರಕ್ಷತ ಕ್ರಮಗಳನ್ನು ಕುರಿತ ಅಧಿಸೂಚನೆ ಪ್ರಕಟಿಸಿದೆ. ಇದರ ಪ್ರಕಾರ ಅ.1ರಿಂದ ಎಕಾನಮಿ ಸೇರಿದಂತೆ ಎಲ್ಲ ಕಾರುಗಳಲ್ಲಿಯೂ ಸೈಡ್ ಏರ್‌ಬ್ಯಾಗ್‌ಗಳನ್ನು ಒಳಗೊಂಡಂತೆ ಆರು ಏರ್‌ಬ್ಯಾಗ್‌ಗಳನ್ನು ಕಡ್ಡಾಯ ಮಾಡಲಾಗುತ್ತದೆ ಎಂದು ಗಡ್ಕರಿ ತಿಳಿಸಿದ್ದಾರೆ.
ಇದನ್ನೂ ಓದಿ:ಆರ್‌ಆರ್‌ಆರ್ ಸಿನಿಮಾ ಬಿಡುಗಡೆಯಾದ ಐದೇ ದಿನಗಳಲ್ಲಿ ಬರೋಬ್ಬರಿ 600 ಕೋಟಿ ರೂ.ಗಳಿಕೆ!
ಅಂದರೆ ಮುಂದಿನ ಅ. 1ರಿಂದ ಉತ್ಪಾದನೆಯಾಗುವ ಎಂ1 ಕೆಟಗರಿಯ ಎಲ್ಲ ವಾಹನಗಳಲ್ಲಿಯೂ ಡ್ರೈವರ್ ಸೀಟ್ ಮತ್ತು ಪಕ್ಕದ ಸೀಟು, ಎಡ ಮತ್ತು ಬಲ ಬದಿಯಲ್ಲಿ ತಲಾ ಎರಡು ಕಡೆಗಳಲ್ಲಿ ಏರ್‌ಬ್ಯಾಗ್ ಅಳವಡಿಸಬೇಕಾಗುತ್ತದೆ. ಜತೆಗೆ, ಎಂ1 ಕೆಟಗೆರಿ ವಾಹನಗಳ ಮುಂದಿನ ಸೀಟುಗಳಿಗೆ ಮೂರು ಅಂಶಗಳ ಸೀಟ್ ಬೆಲ್ಟ್ಗಳನ್ನೂ ಅಳವಡಿಸಬೇಕು ಎಂದು ಹೇಳಿದ್ದಾರೆ.
ಪತೀ ವರ್ಷವೂ ದೇಶದಲ್ಲಿ 5 ಲಕ್ಷ ಅಪಘಾತಗಳು ಸಂಭವಿಸುತ್ತಿದ್ದು, 1.5 ಲಕ್ಷ ಮಂದಿ ಸಾವನ್ನಪ್ಪುತ್ತಿದ್ದಾರೆ. ಅಪಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯನ್ನು ಕಡಿಮೆ ಮಾಡಬೇಕಾಗಿದೆ ಎಂದು ಅವರು ಹೇಳಿದ್ದಾರೆ.