ನವದೆಹಲಿ: ದೇಶಾದ್ಯಂತ ಬೇರೆ ಬೇರೆ ವಿಭಾಗಗಳಲ್ಲಿ ಏಕೀಕೃತ ಗುರುತು ಸಂಖ್ಯೆಯನ್ನು (ಯುನಿಕ್ ಐಡೆಂಟಿಫಿಕೇಶನ್ ನಂಬರ್) ಕೇಂದ್ರ ಸರ್ಕಾರ ನೀಡಲು ಆರಂಭಿಸಿದೆ.
ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಇರುವ ಎಲ್ಲ ವೈದ್ಯರು ಇನ್ನು ಮುಂದೆ ರಾಷ್ಟ್ರೀಯ ವೈದ್ಯಕೀಯ ಆಯೋಗದಲ್ಲಿ (ಎನ್‌ಎಂಸಿ) ನೋಂದಣಿ ಮಾಡಿಕೊಂಡು, ಏಕೀಕೃತ ಗುರುತು ಸಂಖ್ಯೆಯನ್ನು ಪಡೆಯಬೇಕಾಗಿದೆ.
ಇದೇ ವೇಳೆ ಅವರು ರಾಜ್ಯ ವೈದ್ಯಕೀಯ ಆಯೋಗಗಳಲ್ಲಿಯೂ ತಮ್ಮ ಹೆಸರನ್ನು ಸೇರಿಸಿರಬೇಕು.
ನೋಂದಣಿಯಾದ ವೈದ್ಯರ ಮಾಹಿತಿಯನ್ನು ಎನ್‌ಎಂಆರ್ ದತ್ತಾಂಶದಲ್ಲಿ ಪ್ರಕಟಿಸಲಾಗುತ್ತದೆ. ಎನ್‌ಎಂಸಿ ವೆಬ್‌ಸೈಟ್‌ನಲ್ಲಿ ವೈದ್ಯರ ಹೆಸರು, ನೋಂದಣಿ ಸಂಖ್ಯೆ, ನೋಂದಣಿಯಾದ ದಿನಾಂಕ, ಕೆಲಸ ಮಾಡುತ್ತಿರುವ ಸ್ಥಳ, ವೈದ್ಯಕೀಯ ವಿದ್ಯಾರ್ಹತೆ, ಶಿಕ್ಷಣ ಪಡೆದ ಸಂಸ್ಥೆಯ ವಿವರಗಳು ಲಭ್ಯವಿರುತ್ತವೆ.