Advertisement

ಸರ್ಕಾರ ಬಿಡಿಎಗೆ ಬೀಗ ಹಾಕಲಿ: ಭೂವಿಜ್ಞಾನಿ ಪ್ರಕಾಶ್‌

10:10 AM Feb 09, 2020 | mahesh |

ಚನ್ನಣ್ಣ ವಾಲೀಕಾರ್‌ ವೇದಿಕೆ: ಅಭಿವೃದ್ಧಿ ಎಂದರೆ ಬರೀ ಬೆಂಗಳೂರು ಮಾತ್ರ ಅಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಮೊದಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ)ಗೆ ಬೀಗ ಹಾಕಿ. ರಾಜ್ಯದ ಇತರ ಭಾಗಗಳ ಕಡೆಗೂ ಮತ್ತಷ್ಟು ಒತ್ತು ನೀಡಲಿ ಎಂದು ಹಿರಿಯ ಭೂ ವಿಜ್ಞಾನಿ ಎಚ್‌.ಎಸ್‌.ಎಂ. ಪ್ರಕಾಶ್‌ ಆಗ್ರಹಿಸಿದರು.

Advertisement

ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ಕುರಿತ ಗೋಷ್ಠಿಯಲ್ಲಿ ಪರಿಸರ ಬಗ್ಗೆ ಬೆಳಕು ಚೆಲ್ಲಿದ ಅವರು, ಸರ್ಕಾರ ನೇತ್ರಾವದಿ ನದಿ ತಿರುವು ಯೋಜನೆಯಂತಹ ಜನ ಉಪಯೋಗಿ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು. ಪ್ರಕೃತಿ ಸಂಪತ್ತು ಕೇವಲ ಒಂದು ವ್ಯಕ್ತಿಗೆ ಸೀಮಿತವಾಗಿಲ್ಲ. ಅದು ಎಲ್ಲರಿಗೂ ದೊರಕಬೇಕು. ಆ ನಿಟ್ಟಿನಲ್ಲಿ ನದಿ ತಿರುವುಗಳಂತಹ ಯೋಜನೆ ಗಳನ್ನು ಸರ್ಕಾರ ಜಾರಿಗೆ ತರಲಿ ಎಂದು ಒತ್ತಾಯಿಸಿದರು.

ಜ್ವಾಲಾಮುಖಿಗಳು ಕಾರಣ: ಇತ್ತೀಚಿನ ದಿನಗಳಲ್ಲಿ ಜಾಗತಿಕ ವಾರ್ಮಿಂಗ್‌ (ತಾಪಮಾನ ಬದಲಾವಣೆ) ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಜಾಗತಿಕ ಕೂಲಿಂಗ್‌ ಬಗ್ಗೆ ಮಾತನಾಡುತ್ತಿಲ್ಲ. ಈ ಬಗ್ಗೆ ಮತ್ತಷ್ಟು ಚರ್ಚೆ ನಡೆಯಬೇಕು. ಪರಿಸರದಲ್ಲಿ ಆಗಾಗ್ಗೆ ಕಂಡುಬರುವ ಹವಾಮಾನ ಬದಲಾವಣೆಗೆ ಜ್ವಾಲಾಮುಖಿಗಳುಕಾರಣವಾಗಿವೆ ಎಂದರು.

ಕೊಡಗು ಮತ್ತು ಕೇರಳದಲ್ಲಿ ಕಂಡು ಬಂದ ಪ್ರವಾಹಕ್ಕೆ ಜ್ವಾಲಾಮುಖಿಗಳು ಕಾರಣ. ಸಮುದ್ರದ ಆಳದಲ್ಲೂ ಜ್ವಾಲಾಮುಖೀಗಳಿವೆ. ಆದರೆ ಅವುಗಳ ಬಗ್ಗೆ ಸರಿಯಾದ ಅಧ್ಯಯನ ನಡೆಯುತ್ತಿಲ್ಲ. ಹೀಗಾಗಿಯೇ ನೀರಿನ ಒಳಗಿರುವ ಸ್ಫೋಟಕ ಜ್ವಾಲಾಮುಖಿಗಳ ಚಟುವಟಿಕೆಗಳ ಬಗ್ಗೆ ಪೂರಕ ಮಾಹಿತಿ ಸಮಯಕ್ಕೆ ಸರಿಯಾಗಿ ದೊರಕುತ್ತಿಲ್ಲ ಎಂದು ಹೇಳಿದರು.

ವೈದ್ಯ ವಿಜ್ಞಾನದ ಬಗ್ಗೆ ಮಾತನಾಡಿದ ಹಿರಿಯ ವೈದ್ಯ ಡಾ.ಎಸ್‌. ಎಸ್‌. ಪಾಟೀಲ ಮಂದರವಾಡ, ವೈದ್ಯವಿಜ್ಞಾನ ಭಾರತದ ಆಧಾರ ಸ್ತಂಭ. ಐದು ಸಾವಿರ ವರ್ಷಗಳ ಹಿಂದೆಯೇ ಭಾರತದಲ್ಲಿ ವೈದ್ಯವಿಜ್ಞಾನದ ಪರಿಕಲ್ಪನೆ ಇತ್ತು. ಚರಕ ವೈದ್ಯರು ಹನ್ನೊಂದು ನೂರು ರೋಗಗಳ ಬಗ್ಗೆ ಪ್ರಸ್ತಾಪ ಮಾಡಿದ್ದರು ಎಂದು ನುಡಿದರು.

Advertisement

ಕಂಪ್ಯೂಟರ್‌ನಿಂದ ಕನ್ನಡ ಕಲಿಕೆ ದೂರ: ಅನಂತರಾಮು  ಇತ್ತೀಚಿನ ದಿನಗಳಲ್ಲಿ ಮಕ್ಕಳು ಪುಸ್ತಕ ಓದುವುದನ್ನು ಮರೆತಿಖಿರೆ. ಎಲ್ಲದಕ್ಕೂ ಕಂಪ್ಯೂಟರ್‌ಗೆ ಅವಲಂಬಿತರಾಗಿದ್ದಾರೆ.  ಪ್ಯೂಟರ್‌ನಿಂದಾಗಿಯೇ ಅವರಿಗೆ ಅತ್ತ  ಸರಿಯಾದ ಕನ್ನಡವೂ ಗೊತ್ತಿಲ್ಲ. ಹಾಗೆಯೇ ಇಂಗ್ಲಿಷ್‌ ಬಗ್ಗೆಯೂ ಆಳ ಅರಿವಿಲ್ಲ ಎಂದು ಹಿರಿಯ ವಿಜ್ಞಾನಿ ಡಾ.ಟಿ.ಆರ್‌. ಅನಂತರಾಮು ವಿಷಾದಿಸಿದರು.

ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಅವರು, ಕನ್ನಡ ಸಾಹಿತ್ಯಕ್ಕೆ ವಿಜ್ಞಾನಿಗಳ ಕೂಡುಗೆ ಇದೆ. ಬಳ್ಳಾರಿ ವೆಂಕಟಪ್ಪಶಾಸ್ತ್ರಿ ಸೇರಿದಂತೆ ಹಲವರು 1917ರ ಹಿಂದೆಯೇ ವಿಜ್ಞಾನದ ಪದಗಳನ್ನು ಕನ್ನಡದಲ್ಲಿ ಕಂಡುಕೊಂಡು ಕನ್ನಡ ಸಾಹಿತ್ಯ ರಚನೆ ಮಾಡಿದರು ಎಂದರು. ಕನ್ನಡದಲ್ಲಿ ಹಲವರು ವಿಜ್ಞಾನ ವಿಷಯಗಳ ಕುರಿತ ಸಾಹಿತ್ಯ ರಚನೆ ಮಾಡಿದ್ದಾರೆ. ಶಿವರಾಮ ಕಾರಂತರು ಬಂದ ಮೇಲೆ ಅದು ಮತ್ತಷ್ಟು ವೇಗ ಪಡೆದುಕೊಂಡಿತು. ಚಿತ್ರಗಳ ಮೂಲಕ ಅವರು ವಿಜ್ಞಾನದ ಕುರಿತ ಹಲವು ವಿಷಯಗಳನ್ನು ಪುಸ್ತಕದಲ್ಲಿ ತೆರೆದಿಟ್ಟರು ಎಂದು ಹೇಳಿದರು.

ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next