Advertisement

ರಾಜ್ಯದಲ್ಲಿ ಸರಕಾರಿ ಜುವೆಲರಿ ಮಳಿಗೆ: ಮುರುಗೇಶ್‌ ನಿರಾಣಿ

01:29 AM Mar 19, 2021 | Team Udayavani |

ಬೆಂಗಳೂರು: ದೇಶದಲ್ಲೇ ಚಿನ್ನ ಉತ್ಪಾದಿಸುವ ಏಕೈಕ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ನಾಟಕವು ಈಗ ಖಾಸಗಿ ಕಂಪೆನಿಗಳ ಸಹ ಭಾಗಿತ್ವದಲ್ಲಿ ಸರಕಾರಿ ಒಡೆತನದಲ್ಲಿ ಆಭರಣ ಮಳಿಗೆ ತೆರೆಯಲು ನಿರ್ಧರಿಸಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್‌ ನಿರಾಣಿ ಹೇಳಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿನೂತನ ಯೋಜನೆಗಳ ಮೂಲಕ ಇಲಾಖೆಯನ್ನು ಜನಸಾಮಾನ್ಯರತ್ತ ಕೊಂಡೊಯ್ಯಲು ತೀರ್ಮಾನಿಸ ಲಾಗಿದೆ. ಮೊದಲ ಬಾರಿಗೆ ಹಾಗೂ ರಾಷ್ಟ್ರದಲ್ಲೇ ಪ್ರಥಮ ಬಾರಿಗೆ ಸರಕಾರಿ ಒಡೆತನದ ಆಭರಣಗಳ ಮಳಿಗೆ ರಾಜ್ಯದಲ್ಲಿ ಸದ್ಯದಲ್ಲೇ ತಲೆ ಎತ್ತಲಿದೆ ಎಂದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಸಾರ್ವಜನಿಕ ಸಹಭಾಗಿತ್ವದಲ್ಲಿ ಪ್ರಾರಂಭಿಕವಾಗಿ ಬೆಂಗಳೂರು, ಮೈಸೂರು ಸಹಿತ ರಾಜ್ಯದ ಪ್ರಮುಖ ನಗರಗಳಲ್ಲಿ (ಟಯರ್‌ 1) ಈ ಮಳಿಗೆಗಳು ಕಾರ್ಯಾರಂಭ ಮಾಡಲಿದೆ. ರಾಜ್ಯದಲ್ಲಿ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ಯವಾದರೆ, ಮುಂದಿನ ದಿನಗಳಲ್ಲಿ ಹೊರರಾಜ್ಯಗಳಲ್ಲೂ ಮಳಿಗೆಗಳನ್ನು ತೆರೆಯುವ ಯೋಜನೆಯನ್ನು ಇಲಾಖೆ ಹಾಕಿಕೊಂಡಿದೆ ಎಂದು ಹೇಳಿದರು.

ಚಿನ್ನದ ನಾಣ್ಯ ಬಿಡುಗಡೆ
ಮದುವೆ ಮುಂತಾದ ಶುಭ ಕಾರ್ಯಕ್ರಮಗಳಲ್ಲಿ ಗ್ರಾಹಕರಿಗೆ ಉಡುಗೊರೆಯಾಗಿ ನೀಡಲು ಅನುಕೂಲವಾಗುವಂತೆ ಇನ್ನು ಮುಂದೆ ಕರ್ನಾಟಕದ ಲಾಂಛನವಾದ ಗಂಡುಭೇರುಂಡ ಗುರುತಿನ ಚಿನ್ನದ ನಾಣ್ಯಗಳನ್ನು ಹೊರತರಲು ಇಲಾಖೆ ತೀರ್ಮಾನಿಸಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next