Advertisement

Government jeep: ಭೂ ಪರಿಹಾರ ಬಾಕಿ ನೀಡಿದ್ದಕ್ಕೆ ಸರ್ಕಾರಿ ಜೀಪು ಜಪ್ತಿ

05:24 PM Oct 28, 2023 | Team Udayavani |

ಹಾಸನ: ಯಗಚಿ ಜಲಾಶಯ ಯೋಜನೆಯ ನಾಲೆ ನಿರ್ಮಾಣಕ್ಕೆ ಸ್ವಾಧೀನ ಪಡಿಸಿಕೊಂಡ ಭೂಮಿಗೆ ಭೂ ಮಾಲಿಕರಿಗೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ಜಿಲ್ಲಾಡಳಿತಕ್ಕೆ ಸೇರಿದ ಕಾರೊಂದನ್ನು ಕೋರ್ಟ್‌ ಆದೇಶದಂತೆ ಜಪ್ತಿ ಮಾಡಲಾಯಿತು.

Advertisement

ಹಾಸನ ತಾಲೂಕು, ಕಟ್ಟಾಯ ಹೋಬಳಿ ದೋರನಹೊಸಳ್ಳಿ ಗ್ರಾಮದ ಕೆ.ಎಸ್‌.ಯೋಗೇಶ್‌ ಎಂಬುವರಿಗೆ ಸೇರಿದ ಸರ್ವೆ ನಂಬರ್‌ 1/10, 1/09/ 32/13 ನಲ್ಲಿ 13 ಗುಂಟೆ ಜಮೀನನ್ನು 2006 ರಲ್ಲಿ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಆದರೆ, ಅದಕ್ಕೆ ಸೂಕ್ತ ಪರಿಹಾರ ನೀಡಿರಲಿಲ್ಲವಾದ್ದರಿಂದ ಭೂ ಮಾಲಿಕರು ಕಾನೂನು ಹೋರಾಟ ಆರಂಭಿಸಿದ್ದರು. 2010 ಪರಿಹಾರ ಘೋಷಣೆ ಮಾಡಿದ ಮೊತ್ತವನ್ನು ಒಪ್ಪದೆ ಹೆಚ್ಚಿನ ಪರಿಹಾರ ಕೊಡಿಸಬೇಕು ಎಂದು ಯೋಗೇಶ್‌ ಹಾಸನದ ಕೋರ್ಟ್‌ ಮೊರೆ ಹೋಗಿದ್ದರು. ಒಂದು ಗುಂಟೆಗೆ ಒಂದು ಲಕ್ಷ ರೂ. ಪರಿಹಾರ ಕೊಡಬೇಕು ಎಂದು 2015ರಲ್ಲಿ ಆದೇಶ ಆಗಿತ್ತು. ಆದರೆ, ಈವರೆಗೂ ಸಂಬಂಧಪಟ್ಟವರು ಪರಿಹಾರ ನೀಡಿರಲಿಲ್ಲ.

ಮತ್ತೂಮ್ಮೆ ಕೋರ್ಟ್‌ಗೆ ಹೋದ ಮಾಲಿಕ: ವಸೂಲಿಗೆ ಹಾಕಿದರೂ, ವಿಶೇಷ ಭೂ ಸ್ವಾಧೀನ ಅಧಿಕಾರಿ ಹಣ ಕಟ್ಟಲಿಲ್ಲ. ಇದನ್ನು ಮತ್ತೂಮ್ಮೆ ಕೋರ್ಟ್‌ಗೆ ಮನವರಿಕೆ ಮಾಡಿದಾಗ, ಕಚೇರಿ ಜಪ್ತಿಗೆ ಕೋರ್ಟ್‌ ಆದೇಶ ಮಾಡಿತ್ತು. ಅದರಂತೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಿಲ್ಲಾಡಳಿತಕ್ಕೆ ಸೇರಿದ ಕೆಎ-54-ಜಿ-0024 ಜೀಪನ್ನು ವಕೀಲರ ಸಮ್ಮುಖದಲ್ಲಿ ಕೋರ್ಟ್‌ ಸಿಬ್ಬಂದಿ ಶುಕ್ರವಾರ ಜಪ್ತಿ ಮಾಡಿದರು. ಜಪ್ತಿ ಮಾಡಿದ ಕಾರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ.

ಬಡ್ಡಿ ಸಮೇತ ಪರಿಹಾರ ನೀಡಿ: ನ್ಯಾಯಾಲಯವು ಒಂದು ಎಕರೆಗೆ ಒಂದು ಲಕ್ಷ ರೂ. ಪರಿಹಾರ ಕೊಡಬೇಕು ಎಂದು 2015 ರಲ್ಲಿ ತೀರ್ಪು ನೀಡಿತ್ತು. ಆದರೆ, ಈಗ ಬಡ್ಡಿ ಸೇರಿ ಜಿಲ್ಲಾಡಳಿತ 40 ಲಕ್ಷ ರೂ. ಅನ್ನು ಭೂ ಮಾಲಿಕರಿಗೆ ಪಾವತಿ ಮಾಡಬೇಕಿದೆ ಎಂದು ಭೂಮಿಯ ಮಾಲಿಕ ಯೋಗೇಶ್‌ ಪರ ವಕೀಲ ಮಾವಿನಕೆರೆ ಮಂಜುನಾಥ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next