ಬೆಂಗಳೂರು: ಪರೇಶ್ ಮೇಸ್ತಾ ಸಾವಿನ ಪ್ರಕರಣವನ್ನು ಮರು ತನಿಖೆಗೆ ಆದೇಶಿಸುವ ಬಗ್ಗೆ ರಾಜ್ಯ ಸರಕಾರ ಗಂಭೀರ ಚಿಂತನೆ ನಡೆಸಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಈ ಬಗ್ಗೆ ಗುರುವಾರ ಮುನ್ಸೂಚನೆ ನೀಡಿದ್ದಾರೆ.
ಪ್ರಕರಣದ ಮರು ತನಿಖೆಗೆ ಪರೇಶ್ ಮೇಸ್ತಾ ತಂದೆ ಮನವಿ ಮಾಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನ ಮಾಡುತ್ತಾರೆ ಎಂದು ಅವರು ತಿಳಿಸಿದ್ದಾರೆ.
ಪಿಎಫ್ ಐ ನಿಂದ ರಾಮ ಮಂದಿರ ಧ್ವಂಸ ಸಂಚು ವಿಚಾರದ ಬಗ್ಗೆ ಮಾಹಿತಿ ತರಿಸಿಕೊಂಡು ಮಾತಾಡುತ್ತೇನೆ. ಈಗಷ್ಟೇ ಮಾಹಿತಿ ಬಂದಿದೆ. ಹೆಚ್ಚಿನ ಮಾಹಿತಿ ಇಲ್ಲ. ಪಿಎಫ್ಐ ನ ಅನೇಕ ಜನರ ಬಂಧನವಾಗಿ ಈಗಾಗಲೇ ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ:ಮುಸ್ಲಿಮರು ಲಕ್ಷ್ಮೀ ದೇವಿಯನ್ನು ಪೂಜಿಸುವುದಿಲ್ಲ…ಅವರು ಶ್ರೀಮಂತರಾಗಿಲ್ಲವೇ? ಬಿಜೆಪಿ ಶಾಸಕ
ದೇಶದ ಏಕತೆ, ಸಮಗ್ರತೆಗೆ ಧಕ್ಕೆ ಮಾಡೋರನ್ನ ನಮ್ಮ ಸರ್ಕಾರ ರಕ್ಷಿಸುವುದಿಲ್ಲ. ಈಗಾಗಲೇ ಇಂತಹ ಶಕ್ತಿಗಳನ್ನ ಮಟ್ಟ ಹಾಕುವ ಕೆಲಸ ರಾಜ್ಯ ಮತ್ತು ಕೇಂದ್ರ ಸರ್ಕಾರ ಮಾಡಿದೆ. ಯಾರೇ ಇಂತಹ ಕೃತ್ಯ ಮಾಡಿದರು, ಅವರನ್ನೇ ಕ್ಷಣಾರ್ಧದಲ್ಲಿ ಬಂಧನ ಮಾಡುವ ಕೆಲಸ ಆಗುತ್ತಿದೆ ಎಂದರು.