Advertisement

ಸರ್ಕಾರ ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದೆ: ಡಾ. ಜಿ ಪರಮೇಶ್ವರ್ ಆಕ್ರೋಶ

11:12 AM Oct 11, 2019 | Team Udayavani |

ತುಮಕೂರು:  ವಿಧಾನಸೌಧದಲ್ಲಿ ಮಾಧ್ಯಮಕ್ಕೆ ನಿರ್ಬಂಧ ವಿಧಿಸಿರುವುದು,  ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ. ಸರ್ಕಾರ ಈ ನಿರ್ಧಾರ ತೆಗೆದುಕೊಂಡಿರುವುದು ಸರಿಯಲ್ಲ ಎಂದು  ಮಾಜಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಹೇಳಿದ್ದಾರೆ.

Advertisement

ಕೊರಟಗೆರೆಯಲ್ಲಿ  ಮಾಧ್ಯಮದೊಂದಿಗೆ ಮಾತನಾಡಿದ ಅವರು ಸರ್ಕಾರದ ನಿರ್ಧಾರದ  ವಿರುದ್ಧ ನಾವು ಸದನದಲ್ಲಿ ಹೋರಾಟ ಮಾಡುತ್ತೇನೆ. ಮಾಧ್ಯಮಕ್ಕೆ ನಿರ್ಬಂಧ ಹಾಕಿರುವುದನ್ನು ಕಲಾಪದಲ್ಲಿ ಪ್ರಶ್ನಿಸುತ್ತೇವೆ ಎಂದು ತಿಳಿಸಿದ್ದಾರೆ.

ನಾನು ವಿರೋಧ ಪಕ್ಷ ನಾಯಕ   ಸ್ಥಾನದ ಆಕಾಂಕ್ಷಿಯಾಗಿರಲಿಲ್ಲ. ಹೈಕಮಾಂಡ್ ಯಾವ ರೀತಿಯ ತೀರ್ಮಾನ ತೆಗೆದುಕೊಳ್ಳುತ್ತದೆ ಅದಕ್ಕೆ ನಾನು ಬದ್ದನಾಗಿದ್ದೇನೆ. ಸಿದ್ದರಾಮಯ್ಯ ಸಮರ್ಥರಾಗಿದ್ದಾರೆ. ಹಿಂದೆ ಕೂಡ ವಿಪಕ್ಷ ನಾಯಕರಾಗಿದ್ದವರು,ಮುಖ್ಯಮಂತ್ರಿಯಾಗಿದ್ದವರು. ಹಾಗಾಗಿ ಅವರನ್ನು ಆಯ್ಕೆ ಮಾಡಲಾಗಿದೆ. ಎಚ್ ಕೆ ಪಾಟೀಲರು ಹಿರಿಯವರು. ಅವರಿಗೆ ಅಪಾರ ಅನುಭವವಿತ್ತು. ಹಾಗಾಗಿ ತಮಗೆ ಆ ಸ್ಥಾನ ಬೇಕು ಅಂತ ಕೇಳಿದ್ದರು. ಆದರೆ ಅದು ಅಸಮಾಧಾನ ಅಂತ ಅಲ್ಲ ಎಂದು ಸ್ಪಷ್ಠನೆ ನೀಡಿದರು.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ‌ವಿಚಾರವಾಗಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ನಾನಲ್ಲ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ವಿಚಾರವೇ ಇಲ್ಲ ಎಂದರು.

ನಮ್ಮ ಸಂಸ್ಥೆ ಮೇಲೆ ಐಟಿ ದಾಳಿ ಮಾಡಲಿ ಸಂತೋಷ. ನಮ್ಮ ತಪ್ಪುಗಳಿದ್ದರೆ ದಾಳಿ ಮಾಡಲಿ. ಸರ್ಕಾರದ ಬೊಕ್ಕಸದಲ್ಲಿ ಹಣ ಇಲ್ಲ ಅಂತ ಹೇಳಲಾಗುತ್ತಿದೆ. ಆದರೇ ಬೇಕಾದಷ್ಟು ಹಣ ಇದೆ. ಅಷ್ಟಿದ್ದರೆ ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಲಿ ಎಂದು  ಒತ್ತಾಯಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next